ಬರ್ಮಿಂಗ್ಹ್ಯಾಮ್(ಇಂಗ್ಲೆಂಡ್): ಕಾಮನ್‌ವೆಲ್ತ್ ಕ್ರೀಡಾಕೂಟದ ಕೊನೆಯ ದಿನವಾದ ಇಂದು ಭಾರತಕ್ಕೆ ಮತ್ತೊಂದು ಚಿನ್ನದ ಪದಕ ಬಂದಿದೆ. ಪುರುಷರ ಬ್ಯಾಡ್ಮಿಂಟನ್ ಸಿಂಗಲ್ಸ್ನಲ್ಲಿ ಮಲೇಷ್ಯಾ ಆಟಗಾರ ಎಂಜಿ ತ್ಸೆ ಯಂಗ್ (Ng Tze Yong) ವಿರುದ್ಧ ಲಕ್ಷ್ಯಸೇನ್ ಗೆಲುವಿನ ನಗೆ ಬೀರಿದರು. ಮೊದಲ ಸೆಟ್ನಲ್ಲಿ ಸೋಲುಂಡ ಲಕ್ಷ್ಯ, ತದನಂತರ ಗುರಿ ತಪ್ಪಲಿಲ್ಲ.
ತಾವು ಭಾಗಿಯಾಗಿದ್ದ ಮೊದಲ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಚಿನ್ನದ ಪದಕ ಗೆದ್ದಿರುವ ಲಕ್ಷ್ಯಸೇನ್, ತಮ್ಮ ಗುರು ಪ್ರಕಾಶ್ ಪಡುಕೋಣೆ ಅವರ ದಾಖಲೆಯ ಪಟ್ಟಿಗೆ ಸೇರ್ಪಡೆಯಾಗಿದ್ದಾರೆ. ಪ್ರಕಾಶ್ ಪಡುಕೋಣೆ 1978ರಲ್ಲಿ ಕಾಮನ್ವೆಲ್ತ್ನ ಚೊಚ್ಚಲ ಗೇಮ್ನಲ್ಲಿ ಚಿನ್ನ ಗೆದ್ದಿದ್ದರು.