ಕರ್ನಾಟಕ

karnataka

ETV Bharat / sports

ಕಾಮನ್​ವೆಲ್ತ್​ ಗೇಮ್ಸ್​: ಇಂದು ಯಾರಿಗೆ ಪದಕ? ಭಾರತದ ಇಂದಿನ ಸ್ಪರ್ಧೆಗಳು ಹೀಗಿವೆ.. - ETV bharat kannada

ಇಂಗ್ಲೆಂಡ್​ನ ಬರ್ಮಿಂಗ್​ಹ್ಯಾಮ್​ನಲ್ಲಿ ನಡೆಯುತ್ತಿರುವ ಕಾಮನ್​ವಲ್ತ್​ ಕ್ರೀಡಾಕೂಟದ 3ನೇ ದಿನವಾದ ಇಂದು ಕೂಡ ಭಾರತ ಪದಕ ಬೇಟೆಗಾಗಿ ವಿವಿಧ ವಿಭಾಗಗಳಲ್ಲಿ ಸೆಣಸಲಿದೆ.

commonwealth-games
ಕಾಮನ್​ವೆಲ್ತ್​ ಗೇಮ್ಸ್​

By

Published : Jul 31, 2022, 8:30 AM IST

ಬರ್ಮಿಂಗ್‌ಹ್ಯಾಮ್(ಯುಕೆ):ಇಲ್ಲಿನಡೆಯುತ್ತಿರುವ ಕಾಮನ್​ವೆಲ್ತ್​ ಕ್ರೀಡಾಕೂಟದಲ್ಲಿ ಭಾರತ 1 ಚಿನ್ನ, 2 ಬೆಳ್ಳಿ ಹಾಗು 1 ಕಂಚು ಸಮೇತ ಪದಕ ಪಟ್ಟಿಯಲ್ಲಿ ಏಳನೇ ಸ್ಥಾನದಲ್ಲಿದೆ. ಇಂದು ಕೂಡ ಹಲವು ವಿಭಾಗಗಳಲ್ಲಿ ಭಾರತೀಯ ಕ್ರೀಡಾಳುಗಳು ಪೈಪೋಟಿ ನಡೆಸಲಿದ್ದು, ಪದಕಗಳ ಸಂಖ್ಯೆ ಹೆಚ್ಚುವ ನಿರೀಕ್ಷೆ ಇದೆ.

ಭಾರತದ ಇಂದಿನ ಸ್ಪರ್ಧೆಗಳು:

ಈಜು:ಪುರುಷರ 200 ಮೀ ಬಟರ್‌ಫ್ಲೈ - ಸಜನ್ ಪ್ರಕಾಶ್ (ಮಧ್ಯಾಹ್ನ 3.07), ಪುರುಷರ 50 ಮೀ ಬ್ಯಾಕ್‌ಸ್ಟ್ರೋಕ್: ಶ್ರೀಹರಿ ನಟರಾಜ್ (ಮಧ್ಯಾಹ್ನ 3.31)

ಜಿಮ್ನಾಸ್ಟಿಕ್ಸ್:ಪುರುಷರ ಆಲ್‌ರೌಂಡ್ ಫೈನಲ್: ಯೋಗೇಶ್ವರ್ ಸಿಂಗ್ (ಮಧ್ಯಾಹ್ನ 1.30)

ಬ್ಯಾಡ್ಮಿಂಟನ್:ಮಿಶ್ರ ತಂಡ, ಕ್ವಾರ್ಟರ್‌ಫೈನಲ್: ರಾತ್ರಿ 10ಕ್ಕೆ

ಮಹಿಳಾ ಟಿ20 ಕ್ರಿಕೆಟ್:ಭಾರತ vs ಪಾಕಿಸ್ತಾನ (ಮಧ್ಯಾಹ್ನ 3.30)

ಬಾಕ್ಸಿಂಗ್:48- 50 ಕೆಜಿ (ಲೈಟ್ ಫ್ಲೈವೇಟ್) 16 ರ ಸುತ್ತು: ನಿಖತ್ ಜರೀನ್ (ಸಂಜೆ 4.45)

60- 63.5 ಕೆಜಿ (ಲೈಟ್ ವೆಲ್ಟರ್ ವೇಟ್) 16 ರ ಸುತ್ತು: ಶಿವ ಥಾಪಾ (ಸಂಜೆ 5.15)

71-75 ಕೆಜಿ (ಮಧ್ಯಮ ತೂಕ) 16 ರ ಸುತ್ತು: ಸುಮಿತ್ (ಸೋಮವಾರ ಬೆಳಗ್ಗೆ 12.15)

92 ಕೆಜಿಗಿಂತ ಹೆಚ್ಚು (ಸೂಪರ್ ಹೆವಿವೇಯ್ಟ್): ಸಾಗರ್ (ಸೋಮವಾರ ಬೆಳಿಗ್ಗೆ 1)

ಹಾಕಿ (ಪುರುಷರು):ಭಾರತ vs ಘಾನಾ: ರಾತ್ರಿ 8.30

ಸೈಕ್ಲಿಂಗ್:ಪುರುಷರ ಸ್ಪ್ರಿಂಟ್: ಎಸೊವ್ ಅಲ್ಬೆನ್, ರೊನಾಲ್ಡೊ ಲೈಟೊಂಜಾಮ್, ಡೇವಿಡ್ ಬೆಕ್‌ಹ್ಯಾಮ್ ಭಾಗಿ (ಮಧ್ಯಾಹ್ನ 2.32 ರಿಂದ)

ಪುರುಷರ 15 ಕಿ.ಮೀ ಸ್ಕ್ರ್ಯಾಚ್ ಓಟ: ವೆಂಕಪ್ಪ ಕೆಂಗಲಗುತ್ತಿ, ದಿನೇಶ್ ಕುಮಾರ್ ಭಾಗಿ (ಸಂಜೆ 4.20 ರಿಂದ)

ಮಹಿಳೆಯರ 500 ಮೀ ಟೈಮ್ ಟ್ರಯಲ್ ಫೈನಲ್ಸ್: ತ್ರಿಯಶಾ ಪಾಲ್, ಮಯೂರಿ ಲೇಟ್ (ರಾತ್ರಿ 9.02)

ಭಾರ ಎತ್ತುವಿಕೆ:ಪುರುಷರ 67 ಕೆಜಿ ಫೈನಲ್: ಜೆರೆಮಿ ಲಾಲ್ರಿನ್ನುಂಗಾ (ಮಧ್ಯಾಹ್ನ 2)

ಮಹಿಳೆಯರ 59 ಕೆಜಿ ಫೈನಲ್: ಪಾಪಿ ಹಜಾರಿಕಾ (ಸಂಜೆ 6.30) ಪುರುಷರ 73 ಕೆಜಿ ಫೈನಲ್: ಅಚಿಂತಾ ಶೆಯುಲಿ (ರಾತ್ರಿ 11)

ಸ್ಕ್ವ್ಯಾಷ್:ಮಹಿಳೆಯರ ಸಿಂಗಲ್ಸ್ 16 ರ ಸುತ್ತು: ಜೋಷ್ನಾ ಚಿನ್ನಪ್ಪ (ಸಂಜೆ 6 ರಿಂದ)

16ರ ಪುರುಷರ ಸಿಂಗಲ್ಸ್ ಸುತ್ತು: ಸೌರವ್ ಘೋಸಲ್ (ಸಂಜೆ 6.45)

ಟೇಬಲ್ ಟೆನ್ನಿಸ್:ಪುರುಷರ ತಂಡ, ಕ್ವಾರ್ಟರ್‌ಫೈನಲ್: ಮಧ್ಯಾಹ್ನ 2 ಗಂಟೆಗೆ

ಮಹಿಳಾ ತಂಡ ಸೆಮಿಫೈನಲ್: ರಾತ್ರಿ 11.30

ಲಾನ್ ಬೌಲ್:ಮಹಿಳೆಯರ ಸಿಂಗಲ್ಸ್: ತಾನಿಯಾ ಚೌಧರಿ (ರಾತ್ರಿ 10.30)

ಪುರುಷರ ಗುಂಪು: ಭಾರತ v/s ಇಂಗ್ಲೆಂಡ್ (ಸಂಜೆ 4).

ಇದನ್ನೂ ಓದಿ:ಕಾಮನ್‌ವೆಲ್ತ್ ಕ್ರೀಡಾಕೂಟ: ಭಾರತದ ಬಿಂದ್ಯಾರಾಣಿ ದೇವಿಗೆ ಬೆಳ್ಳಿ ಪದಕ

ABOUT THE AUTHOR

...view details