ಬರ್ಮಿಂಗ್ಹ್ಯಾಮ್(ಲಂಡನ್): ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಭಾರತೀಯ ಕ್ರೀಡಾಪಟುಗಳ ಗೆಲುವಿನ ಓಟ ಮುಂದುವರೆದಿದೆ. 7ನೇ ದಿನವಾದ ಇಂದು ಕೂಡ ಕೆಲ ಅಥ್ಲೀಟ್ಗಳು ಗಮನಾರ್ಹ ಪ್ರದರ್ಶನ ನೀಡಿ, ದೇಶಕ್ಕೆ ಪದಕಗಳನ್ನು ಖಚಿತಪಡಿಸಿದ್ದಾರೆ. ಪುರುಷರ ಬಾಕ್ಸಿಂಗ್ ವಿಭಾಗದಲ್ಲಿ ಅಮಿತ್ ಪಂಗಲ್, ಜೈಸ್ಮಿನ್ ಲಂಬೋರಿಯಾ ಮತ್ತು ಸಾಗರ್ ಅಹ್ಲಾವತ್ ಈಗಾಗಲೇ ಸಮಿಫೈನಲ್ಗೆ ಲಗ್ಗೆ ಹಾಕಿದ್ದು, ದೇಶಕ್ಕೆ ಪದಕ ಭರವಸೆ ಮೂಡಿಸಿದ್ದಾರೆ.
ಇದರ ಜೊತೆಗೆ ಪೂಲ್ ಬಿ ವಿಭಾಗದಲ್ಲಿ ವೇಲ್ಸ್ ವಿರುದ್ಧ ನಡೆದ ಹಾಕಿ ಪಂದ್ಯದಲ್ಲಿ 4-1 ಅಂತರದಿಂದ ಗೆಲುವು ದಾಖಲು ಮಾಡಿರುವ ಭಾರತ ಪುರುಷರ ತಂಡ ಸೆಮಿಫೈನಲ್ಗೆ ಲಗ್ಗೆ ಹಾಕಿದೆ. ಅಥ್ಲೆಟಿಕ್ಸ್ನಲ್ಲಿ ಭಾರತದ ಹಿಮಾದಾಸ್ ಮಹಿಳೆಯರ 200 ಮೀಟರ್ ಓಟದಲ್ಲಿ ಸೆಮಿಫೈನಲ್ಗೆ ಪ್ರವೇಶ ಪಡೆದುಕೊಂಡಿದ್ದಾರೆ. ಮಂಜು ಬಾಲಾ ಮಹಿಳೆಯರ ಹ್ಯಾಮರ್ ಥ್ರೋ ಸ್ಪರ್ಧೆಯಲ್ಲಿ ಫೈನಲ್ ತಲುಪಿದ್ದಾರೆೆ.