ಕರ್ನಾಟಕ

karnataka

ETV Bharat / sports

ಇಂದು ಯಾರ ಪಾಲಿಗೆ ಚಿನ್ನದ ಹಾರ.. 9ನೇ ದಿನದ ಭಾರತದ ಸ್ಪರ್ಧೆಗಳು - ಇಂದು ಯಾರಿಗೆ ಪಾಲಿಗೆ ಚಿನ್ನದ ಹಾರ

ಕಾಮನ್​ವೆಲ್ತ್​ ಗೇಮ್ಸ್​ನ 9ನೇ ದಿನದಾಟದಲ್ಲಿ ಭಾರತ ವಿವಿಧ ಕ್ರೀಡೆಗಳಲ್ಲಿ ಚಿನ್ನದ ಬೇಟೆಗಾಗಿ ಸೆಣಸಾಡಲಿದೆ.

commonwealth-games
ಇಂದು ಯಾರ ಪಾಲಿಗೆ ಚಿನ್ನದ ಹಾರ

By

Published : Aug 6, 2022, 12:59 PM IST

ಬರ್ಮಿಂಗ್​ಹ್ಯಾಮ್​(ಯುಕೆ):ಕಾಮನ್‌ವೆಲ್ತ್ ಗೇಮ್ಸ್‌ನ 9ನೇ ದಿನವಾದ ಇಂದು ಭಾರತ ಇನ್ನಷ್ಟು ಪದಕಗಳ ಬೇಟೆಗೆ ಸೆಣಸಾಡಲಿದೆ. ಕುಸ್ತಿಪಟು ವಿನೇಸ್​ ಪೋಗಟ್​, ಪ್ಯಾರಾ ಟೇಬಲ್​ ಟೆನಿಸ್​ ಆಟಗಾರ್ತಿ ಭಾವಿನಾ ಪಟೇಲ್​ ಚಿನ್ನದ ನಿರೀಕ್ಷೆಯಲ್ಲಿದ್ದರೆ, ಭಾರತ ಮಹಿಳಾ ಕ್ರಿಕೆಟ್​ ತಂಡ ಸೆಮಿಫೈನಲ್​ನಲ್ಲಿ ಇಂಗ್ಲೆಂಡ್​ ತಂಡವನ್ನು ಎದುರಿಸಲಿದೆ.

9ನೇ ದಿನದ ಭಾರತದ ವೇಳಾಪಟ್ಟಿ

ಟೇಬಲ್ ಟೆನಿಸ್:ಮಹಿಳೆಯರ ಡಬಲ್ಸ್ ರೌಂಡ್-16 ಅಕುಲಾ ಶ್ರೀಜಾ-ರೀತ್, ಮಾನಿಕಾ ಬಾತ್ರಾ-ದಿಯಾ ಪರಾಗ್ ಚಿತಾಲೆ (2 PM), ಮಿಶ್ರ ಡಬಲ್ಸ್ ಸೆಮಿಫೈನಲ್ (ಅಚಂತಾ ಶರತ್ ಕಮಲ್- ಅಕುಲಾ ಶ್ರೀಜಾ (6 PM)

ಪ್ಯಾರಾ ಅಥ್ಲೆಟಿಕ್ಸ್:ಮಹಿಳೆಯರ F55-57 ಶಾಟ್‌ಪುಟ್ ಫೈನಲ್‌, ಪೂನಂ ಶರ್ಮಾ, ಶರ್ಮಿಳಾ ಸಂತೋಷ್ (2:50 PM)

ಅಥ್ಲೆಟಿಕ್ಸ್:ಮಹಿಳೆಯರ 10 ಕಿ.ಮೀ ನಡಿಗೆ ಫೈನಲ್, ಭಾವನಾ ಜಟ್, ಪ್ರಿಯಾಂಕಾ ಗೋಸ್ವಾಮಿ(ಮಧ್ಯಾಹ್ನ 3 ಗಂಟೆಗೆ), ಪುರುಷರ 3000 ಮೀ ಸ್ಟೀಪಲ್‌ಚೇಸ್ ಫೈನಲ್, ಅವಿನಾಶ್ ಸೇಬಲ್ ಭಾಗಿ (ಸಂಜೆ 4:20).

ಮಹಿಳೆಯರ ವಿಭಾಗದಲ್ಲಿ 4x100 ರಿಲೇ ಹಿಮಾ ದಾಸ್, ದ್ಯುತಿ ನಂದಾ ಚಂದ್, ಸ್ರಬಾನಿ ಸಿಮಿ, (4:45 PM), ಮಹಿಳೆಯರ ಹ್ಯಾಮರ್ ಥ್ರೋ ಫೈನಲ್ಸ್, ಮಂಜು ಬಾಲಾ(11:30 PM), ಪುರುಷರ 5000 ಮೀಟರ್​ ಫೈನಲ್ಸ್, ಅವಿನಾಶ್ ಸೇಬಲ್(12:40 AM), ಮಹಿಳೆಯರ 200ಮೀಟರ್ ಫೈನಲ್ಸ್ (ಹಿಮಾ ದಾಸ್(2:14 AM)

ಬಾಕ್ಸಿಂಗ್:45 -48 ಕೆಜಿ ಮೇಲ್ಪಟ್ಟ ಸೆಮಿಫೈನಲ್, ನಿತು ಗಂಗಾಸ್ (ಮಧ್ಯಾಹ್ನ 3 ಗಂಟೆಗೆ), 48-51 ಕೆಜಿ ಮೇಲ್ಪಟ್ಟ ಸೆಮಿಫೈನಲ್, ಅಮಿತ್ ಪಂಗಲ್ (ಮಧ್ಯಾಹ್ನ 3:30), 48 -50 ಕೆಜಿ ಮೇಲ್ಪಟ್ಟ ಸೆಮಿಫೈನಲ್, ನಿಖತ್ ಜರೀನ್(ಸಂಜೆ 7:15), 57 ಕೆಜಿ + ಸೆಮಿಫೈನಲ್, ಜೈಸ್ಮಿನ್ ಲಂಬೋರಿಯಾ(ರಾತ್ರಿ 8), 67 ಕೆಜಿ ಮೇಲ್ಪಟ್ಟ ಸೆಮಿಫೈನಲ್, ರೋಹಿತ್ ಟೋಕಾಸ್ (12:45 AM), 92 ಕೆಜಿ + ಸೆಮಿಫೈನಲ್, ಸಾಗರ್ ಅಹ್ಲಾವತ್(1:30 AM)

ಕುಸ್ತಿ:ಪೂಜಾ ಗೆಹ್ಲೋಟ್, ನವೀನ್, ವಿನೇಶ್ ಫೋಗಟ್, ಪೂಜಾ ಸಿಹಾಗ್, ರವಿ ಕುಮಾರ್ ದಹಿಯಾ, ದೀಪಕ್ ನೆಹ್ರಾ ಭಾಗಿ (ಮಧ್ಯಾಹ್ನ 3 ಗಂಟೆಯಿಂದ)

ಮಹಿಳಾ ಕ್ರಿಕೆಟ್:ಭಾರತ vs ಇಂಗ್ಲೆಂಡ್ ನಡುವೆ ಸೆಮಿಫೈನಲ್ ಪಂದ್ಯ (3:30 PM)

ಬ್ಯಾಡ್ಮಿಂಟನ್:ಮಹಿಳೆಯರ ಡಬಲ್ಸ್ ಕ್ವಾರ್ಟರ್ ಫೈನಲ್, ಟ್ರೀಸಾ ಜಾಲಿ ಮತ್ತು ಗಾಯತ್ರಿ ಗೋಪಿಚಂದ್, ಮಹಿಳೆಯರ ಸಿಂಗಲ್ಸ್ ಕ್ವಾರ್ಟರ್ ಫೈನಲ್, ಪಿವಿ ಸಿಂಧು, ಪುರುಷರ ಸಿಂಗಲ್ಸ್ ಕ್ವಾರ್ಟರ್ ಫೈನಲ್, ಕಿದಂಬಿ ಶ್ರೀಕಾಂತ್ (3:30 PM)

ಹಾಕಿ:ಪುರುಷರ ಸೆಮಿಫೈನಲ್, ಭಾರತ vs ದಕ್ಷಿಣ ಆಫ್ರಿಕಾ ನಡುವೆ ಪಂದ್ಯ (10:30 PM)

ಪ್ಯಾರಾ ಟೇಬಲ್ ಟೆನಿಸ್:ಕಂಚಿನ ಪದಕಕ್ಕಾಗಿ ಪುರುಷರ ಸಿಂಗಲ್ಸ್, ರಾಜ್ ಅರವಿಂದನ್ ಅಲಗರ್(10:45 PM), ಮಹಿಳೆಯರ ಸಿಂಗಲ್ಸ್, ಸೋನಾಲ್ಬೆನ್ ಮನುಭಾಯ್ ಪಟೇಲ್( 12:15 AM), ಮಹಿಳೆಯರ ಸಿಂಗಲ್ಸ್, ಭಾವಿನಾ ಪಟೇಲ್ (1 AM)

ಓದಿ:ಕರಗಿದ ಚಿನ್ನದಾಸೆ, ಕಂಚಿಗಾಗಿ ಹೋರಾಟ: ಶೂಟೌಟ್​ ವಿವಾದದಲ್ಲಿ ಸೋತ ಮಹಿಳಾ ಹಾಕಿ ತಂಡ

ABOUT THE AUTHOR

...view details