ಬರ್ಮಿಂಗ್ಹ್ಯಾಮ್: ಭಾರತದ ಸುಧೀರ್ ಪ್ಯಾರಾ ಪವರ್‌ಲಿಫ್ಟಿಂಗ್‌ನ ಪುರುಷರ ಹೆವಿವೇಯ್ಟ್ ಫೈನಲ್‌ನಲ್ಲಿ ದೇಶಕ್ಕೆ ಚಿನ್ನವನ್ನು ತಂದುಕೊಟ್ಟಿದ್ದಾರೆ. ಇದಕ್ಕೂ ಮುನ್ನ ಮುರಳಿ ಶ್ರೀಶಂಕರ್ Commonwealth Games ಪುರುಷರ ಲಾಂಗ್ ಜಂಪ್‌ನಲ್ಲಿ 8.08ಮೀ ಜಿಗಿತದ ಮೂಲಕ ಭಾರತಕ್ಕೆ ಐತಿಹಾಸಿಕ ಬೆಳ್ಳಿ ಗೆದ್ದುಕೊಟ್ಟರು. ಕಾಮನ್ವೆಲ್ತ್ ಕ್ರೀಡಾಕೂಟದ ಇತಿಹಾಸದಲ್ಲಿ ಭಾರತೀಯ ಪುರುಷ ಆಟಗಾರನೊಬ್ಬ ಲಾಂಗ್ ಜಂಪ್‌ನಲ್ಲಿ ಮೊದಲ ಬೆಳ್ಳಿ ಗೆದ್ದ ಎಂಬ ಹೆಗ್ಗಳಿಕೆಗೆ ಶ್ರೀಶಂಕರ್ ಪಾತ್ರರಾಗಿದ್ದಾರೆ.
ಕಾಮನ್ವೆಲ್ತ್ ಗೇಮ್ಸ್ ಪುರುಷರ ವೆಲ್ಟರ್ ವೇಟ್ ವಿಭಾಗದಲ್ಲಿ ಬಾಕ್ಸರ್ ರೋಹಿತ್ ಟೋಕಾಸ್ ಸೆಮಿಫೈನಲ್ ಪ್ರವೇಶಿಸಿದ್ದಾರೆ. ಹಾಲಿ ಚಾಂಪಿಯನ್ ಮಣಿಕಾ ಬಾತ್ರಾ 4-0 ಅಂತರದ ಮೇಲುಗೈ ಸಾಧಿಸುವ ಮೂಲಕ ಮಹಿಳೆಯರ ಸಿಂಗಲ್ಸ್ 16ರ ಸುತ್ತಿಗೆ ಪ್ರವೇಶಿಸಿದ್ದಾರೆ. ಪ್ಯಾಡ್ಲರ್‌ಗಳಾದ ಶ್ರೀಜಾ ಅಕುಲಾ ಮತ್ತು ರೀತ್ ಟೆನ್ನಿಸನ್ ಅವರು ತಮ್ಮ ಪಂದ್ಯಗಳಲ್ಲಿ ಜಯಗಳಿಸುವುದರೊಂದಿಗೆ 16ರ ಮಹಿಳಾ ಸಿಂಗಲ್ಸ್ ಸುತ್ತಿಗೆ ಪ್ರವೇಶಿಸಿದರು.
ಟೆಬಲ್ ಟೆನಿಸ್ ಪುರಷರ ಡಬಲ್ಸ್ ವಿಭಾಗದಲ್ಲಿ ಅಲ್ಲೆನ್ ಜೋಯಲ್ ಮತ್ತು ವ್ಯಾನ್ ಲ್ಯಾಂಗ್ ಜೋನಾಥನ್ ವಿರುದ್ಧ ಭಾರತ ತಂಡದ ಆಟಗಾರರಾದ ಶರತ್ ಮತ್ತು ಸಾಥಿಯಾನ್ ಭರ್ಜರಿ ಗೆಲುವು ಸಾಧಿಸುವ ಮೂಲಕ 16ರ ಸುತ್ತಿಗೆ ಪ್ರವೇಶಿಸಿದರು.
ಬ್ಯಾಡ್ಮಿಂಟನ್‌ನಲ್ಲಿ ಆಕರ್ಷಿ ಕಶ್ಯಪ್ 16ರ ಮಹಿಳಾ ಸಿಂಗಲ್ಸ್ ಸುತ್ತಿಗೆ ಮುನ್ನಡೆದ್ರೆ, ವೆರ್ನಾನ್ ಸ್ಮೀಡ್ ವಿರುದ್ಧ ಗೆಲುವು ಸಾಧಿಸಿರುವ ಲಕ್ಷ್ಯ ಸೇನ್ ಸಹ 16ರ ಪುರುಷರ ಸಿಂಗಲ್ಸ್ ಸುತ್ತಿಗೆ ಪ್ರವೇಶ ಪಡೆದರು. ಭಾರತೀಯ ಪುರುಷರ ಹಾಕಿ ತಂಡವು ಸಹ ಉತ್ತಮ ಪ್ರದರ್ಶನ ನೀಡುತ್ತಿದ್ದು, ಹರ್ಮನ್‌ಪ್ರೀತ್ ಸಿಂಗ್ ಅವರ ಹ್ಯಾಟ್ರಿಕ್ ಗೋಲ್ನೊಂದಿಗೆ ಪೂಲ್ ಬಿ ಪಂದ್ಯದಲ್ಲಿ ವೇಲ್ಸ್ ವಿರುದ್ಧ 4-1 ಗೆಲುವು ದಾಖಲಿಸಲು ಸಹಾಯ ಮಾಡಿದರು.