ಬರ್ಮಿಂಗ್ಹ್ಯಾಮ್(ಇಂಗ್ಲೆಂಡ್):ಕಾಮನ್ವೆಲ್ತ್ ಗೇಮ್ಸ್ನಲ್ಲಿ ಭಾರತದ ಮಹಿಳಾ ತಂಡ ಇತಿಹಾಸ ರಚಿಸಿದೆ. ಮಹಿಳಾ ಫೋರ್ಸ್ ಲಾನ್ ಬೌಲ್ಸ್ ತಂಡ ಫೈನಲ್ನಲ್ಲಿ ಗೆಲುವು ಸಾಧಿಸಿದ್ದು ಚಿನ್ನದ ಪದಕಕ್ಕೆ ಮುತ್ತಿಕ್ಕಿದೆ. ವಿಶೇಷವೆಂದರೆ, ಲಾನ್ ಬೌಲ್ಸ್ನಲ್ಲಿ ಭಾರತಕ್ಕೆ ದಕ್ಕಿದ ಚೊಚ್ಚಲ ಹಾಗು ಐತಿಹಾಸಿಕ ಪದಕ ಇದಾಗಿದೆ. ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಭಾರತ 17-10 ಅಂತರದಿಂದ ಗೆಲುವು ಸಾಧಿಸಿತು. ಸೆಮಿಫೈನಲ್ ಪಂದ್ಯದಲ್ಲಿ ಭಾರತೀಯ ಮಹಿಳೆಯರು ನ್ಯೂಜಿಲ್ಯಾಂಡ್ ವಿರುದ್ಧ ಗೆಲುವು ಪಡೆದಿದ್ದರು.
ಕಾಮನ್ವೆಲ್ತ್ ಗೇಮ್ಸ್ನಲ್ಲಿ ಇತಿಹಾಸ ಸೃಷ್ಟಿ: ಲಾನ್ ಬೌಲ್ಸ್ನಲ್ಲಿ ಚಿನ್ನ ಗೆದ್ದ 'ಭಾರತೀ'ಯರು!
ಭಾರತ ಮಹಿಳಾ ಫೋರ್ಸ್ ಲಾನ್ ಬೌಲ್ಸ್ ತಂಡವು ಫೈನಲ್ನಲ್ಲಿ ಗೆಲುವು ದಾಖಲು ಮಾಡುವ ಮೂಲಕ ಹೊಸ ದಾಖಲೆ ಬರೆಯಿತು.
Etv BharatLawn Bowls wins historic gold medal
ಕಳೆದ ಮೂರು ದಿನಗಳ ಹಿಂದೆ ಬಲಿಷ್ಠ ನ್ಯೂಜಿಲ್ಯಾಂಡ್ ವಿರುದ್ಧ ನಡೆದ ಸೆಮಿಫೈನಲ್ನಲ್ಲಿ ಭಾರತ 16-13ರ ಅಂತರದಿಂದ ಗೆಲುವು ದಾಖಲಿಸಿತ್ತು. ಲವ್ಲಿ ಚೌಬೆ, ಪಿಂಕಿ, ನಯನಮೋನಿ ಸೈಕಿಯಾ ಮತ್ತು ರೂಪಾ ರಾಣಿ ಟಿರ್ಕಿ ತಂಡ ಅದ್ಭುತ ಪ್ರದರ್ಶನ ನೀಡಿದ್ದರು. ಇಂದಿನ ಫೈನಲ್ನಲ್ಲಿ ಸ್ವರ್ಣ ಪದಕಕ್ಕಾಗಿ ಅಮೋಘ ಹೋರಾಟ ನಡೆಸಿ, ಗೆಲುವು ದಾಖಲಿಸಿದ್ದಾರೆ. ಈ ಕ್ರೀಡೆಯಲ್ಲಿ ನ್ಯೂಜಿಲ್ಯಾಂಡ್ ಈಗಾಗಲೇ 40 ಪದಕ ಗೆದ್ದಿದೆ. ಇದೀಗ ಭಾರತ ಸಹ ಸ್ವರ್ಣಕ್ಕೆ ಮುತ್ತಿಕ್ಕುವ ಮೂಲಕ ಹೊಸ ಇತಿಹಾಸ ಸೃಷ್ಟಿಸಿದೆ.
Last Updated : Aug 2, 2022, 8:05 PM IST