ಕರ್ನಾಟಕ

karnataka

ETV Bharat / sports

ಕಾಮನ್​ವೆಲ್ತ್​ ಗೇಮ್ಸ್: ಕಂಚು ಗೆದ್ದ ಭಾರತದ ವೇಟ್‌ ಲಿಫ್ಟರ್‌ ಲವ್‌ಪ್ರೀತ್ ಸಿಂಗ್

ಕಾಮನ್​ವೆಲ್ತ್​ ಗೇಮ್ಸ್​ನಲ್ಲಿ ಭಾರತ ಮತ್ತೊಂದು ಪದಕ ಸಾಧನೆ ಮಾಡಿದೆ. ವೇಟ್‌ ಲಿಫ್ಟಿಂಗ್​ನಲ್ಲಿ ಲವ್‌ಪ್ರೀತ್ ಸಿಂಗ್ ದೇಶದ ಪದಕ ಸಂಖ್ಯೆಯನ್ನು 14ಕ್ಕೇರಿಸಿದರು.

Commonwealth Games 2022: Weightlifter Lovepreet Singh Wins Bronze
ಕಾಮನ್​ವೆಲ್ತ್​ ಗೇಮ್ಸ್​ನಲ್ಲಿ ಭಾರತಕ್ಕೆ ಮತ್ತೊಂದು ಪದಕ: ವೇಟ್‌ಲಿಫ್ಟಿಂಗ್​ನಲ್ಲಿ ಕಂಚು ಗೆದ್ದ ಲವ್‌ಪ್ರೀತ್ ಸಿಂಗ್

By

Published : Aug 3, 2022, 4:23 PM IST

Updated : Aug 3, 2022, 5:13 PM IST

ಬರ್ಮಿಂಗ್‌ಹ್ಯಾಮ್(ಯು.ಕೆ): ಕಾಮನ್​ವೆಲ್ತ್​ ಗೇಮ್ಸ್​ನಲ್ಲಿ ಭಾರತಕ್ಕೆ ಮತ್ತೊಂದು ಪದಕ ಒಲಿದುಬಂದಿದೆ. ಪುರುಷರ ವೇಟ್‌ಲಿಫ್ಟಿಂಗ್‌ 109 ಕೆಜಿ ವಿಭಾಗದಲ್ಲಿ ಲವ್‌ಪ್ರೀತ್ ಸಿಂಗ್ ಕಂಚಿಗೆ ಮುತ್ತಿಕ್ಕಿದರು. ಈ ಮೂಲಕ ಭಾರತ ಇಲ್ಲಿಯವರೆಗೆ 5 ಚಿನ್ನ, 5 ಬೆಳ್ಳಿ ಹಾಗು 4 ಕಂಚು ಸೇರಿ ಒಟ್ಟು 14 ಪದಕಗಳನ್ನು ಗೆದ್ದಿದ್ದು ಪದಕ ಪಟ್ಟಿಯಲ್ಲಿ 6ನೇ ಸ್ಥಾನದಲ್ಲಿದೆ.

ಲವ್‌ಪ್ರೀತ್ ಸಿಂಗ್ ಒಟ್ಟು 355 ಕೆಜಿ ವೇಟ್‌ಲಿಫ್ಟ್​ ಮಾಡುವ ಮೂಲಕ ಕಂಚಿಗೆ ಮುತ್ತಿಕ್ಕಿದರು. ಸ್ನ್ಯಾಚ್​ ವಿಭಾಗದಲ್ಲಿ 163 ಕೆಜಿ ಹಾಗೂ ಕ್ಲೀನ್ ಮತ್ತು ಜರ್ಕ್ ವಿಭಾಗದಲ್ಲಿ 192 ಕೆ.ಜಿ ಭಾರವನ್ನು ಲವ್‌ಪ್ರೀತ್ ಸಿಂಗ್ ಎತ್ತಿದರು. ವೇಟ್‌ಲಿಫ್ಟಿಂಗ್​ ಸ್ಪರ್ಧೆಯಲ್ಲಿ ಇದು ಭಾರತಕ್ಕೆ 10ನೇ ಪದಕವಾಗಿದೆ.

Last Updated : Aug 3, 2022, 5:13 PM IST

ABOUT THE AUTHOR

...view details