ಕರ್ನಾಟಕ

karnataka

ETV Bharat / sports

2022 ಕಾಮನ್​ವೆಲ್ತ್​ ಗೇಮ್ಸ್ ​​: ವಿನೇಶ್ ಫೋಗಟ್, ಸಾಕ್ಷಿ ಮಲಿಕ್ ಸೇರಿ ಇವರಿಗೆಲ್ಲ ಅವಕಾಶ - ಕಾಮನ್​ವೆಲ್ತ್​ ಗೇಮ್ಸ್ ಮಹಿಳಾ ಕುಸ್ತಿಪಟು

ಲಂಡನ್​​​ನಲ್ಲಿ ನಡೆಯಲಿರುವ 2022ರ ಕಾಮನ್​​​ವೆಲ್ತ್​ ಗೇಮ್ಸ್​​​ನಲ್ಲಿ ಭಾರತದ ಮಹಿಳಾ ಕ್ರೀಡಾಪಟುಗಳು ಭಾಗಿಯಾಗಲಿದ್ದು, ಇಂದು ಅವರ ಹೆಸರು ಅಧಿಕೃತವಾಗಿ ಘೋಷಣೆ ಮಾಡಲಾಗಿದೆ..

Commonwealth Games 2022
Commonwealth Games 2022

By

Published : May 16, 2022, 4:41 PM IST

ನವದೆಹಲಿ :2022ರ ಕಾಮನ್​ವೆಲ್ತ್​ ಗೇಮ್ಸ್​​​ನಲ್ಲಿ ಭಾರತದ ಮಹಿಳಾ ಕುಸ್ತಿಪಟುಗಳು ಭಾಗಿಯಾಗಲಿದ್ದು, ಅದಕ್ಕಾಗಿ ಇಂದು ಅಂತಿಮ ಲಿಸ್ಟ್ ರಿಲೀಸ್ ಮಾಡಲಾಗಿದೆ. ಜುಲೈ 25ರಿಂದ ಆಗಸ್ಟ್​​ 8ರವರೆಗೆ ಈ ಕ್ರೀಡಾಕೂಟ ಲಂಡನ್​​ನ ವಿವಿಧ ನಗರಗಳಲ್ಲಿ ಆಯೋಜನೆಗೊಂಡಿದೆ.

50 ಕೆಜಿ ವಿಭಾಗದಲ್ಲಿ ಪೂಜಾ ಗೆಹ್ಲೋಟ್​, ವಿನೇಶ್​ ಪೋಗಟ್​​(53 ಕೆಜಿ), ಅನ್ಸು ಮಲಿಕ್​​(57 ಕೆಜಿ), ಸಾಕ್ಷಿ ಮಲಿಕ್​(62ಕೆಜಿ), ದಿವ್ಯಾ ಕರ್ಕನ್​(68ಕೆಜಿ) ಹಾಗೂ ಪೂಜಾ ದಾಂಡೆ(76ಕೆಜಿ) ಆಯ್ಕೆಯಾಗಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಭಾರತೀಯ ಕುಸ್ತಿ ಫೆಡರೇಷನ್​ ಮಾಹಿತಿ ಹಂಚಿಕೊಂಡಿದೆ.

ಈ ಸಲದ ಕಾಮನ್​ವೆಲ್ತ್​ ಗೇಮ್ಸ್​​​ನಲ್ಲಿ ಮಹಿಳೆಯರ ಟಿ-20 ಕ್ರಿಕೆಟ್​ ಸಹ ಆಡಿಸಲು ನಿರ್ಧರಿಸಲಾಗಿದ್ದು, ಉಳಿದಂತೆ ಹಾಕಿ ಪಂದ್ಯಾವಳಿಗಳು ಸಹ ನಡೆಯಲಿವೆ. ಲಂಡನ್​​ನ ಮ್ಯಾಚೆಂಸ್ಟರ್ ಮತ್ತು ಬರ್ಮಿಂಗ್​ಹ್ಯಾಮ್​​ ನಗರಗಳಲ್ಲಿ ಕಾಮನ್​ವೆಲ್ತ್ ಗೇಮ್ಸ್​​ಗಳು ನಡೆಯಲಿವೆ.

ಇದನ್ನೂ ಓದಿ:ಟಿ - 20 ಚಾಲೆಂಜ್​ ಟ್ರೋಫಿ: ಮಹಿಳಾ ತಂಡ ಪ್ರಕಟಿಸಿದ ಬಿಸಿಸಿಐ: ಮೇ. 23ರಿಂದ ಟೂರ್ನಿ ಆರಂಭ

ಕಾಮನ್​ವೆಲ್ತ್​ ಗೇಮ್ಸ್​​​ನಲ್ಲಿ ಟೀಂ ಇಂಡಿಯಾ, ನ್ಯೂಜಿಲ್ಯಾಂಡ್​, ಆಸ್ಟ್ರೇಲಿಯಾ, ಇಂಗ್ಲೆಂಡ್​, ದಕ್ಷಿಣ ಆಫ್ರಿಕಾ, ಪಾಕಿಸ್ತಾನ್, ಶ್ರೀಲಂಕಾ ಮತ್ತು ವೆಸ್ಟ್​ ಇಂಡೀಸ್​ ತಂಡಗಳು ಭಾಗಿಯಾಗಲಿವೆ.

ABOUT THE AUTHOR

...view details