ಬರ್ಮಿಂಗ್ಹ್ಯಾಮ್:ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಭಾರತದ ಪದಕದ ಖಾತೆ ಓಪನ್ ಆಗಿದೆ. 55 ಕೆಜಿ ವೇಟ್ ಲಿಫ್ಟಿಂಗ್ನಲ್ಲಿ ಭಾರತದ ಸಂಕೇತ್ ಸರ್ಗರ್ ಬೆಳ್ಳಿ ಪದಕಕ್ಕೆ ಮುತ್ತಿಕ್ಕಿದ್ದಾರೆ. ಈ ಮೂಲಕ ಭಾರತಕ್ಕೆ ಮೊದಲ ಪದಕ ತಂದುಕೊಟ್ಟಿದ್ದಾರೆ. ಫೈನಲ್ ಪಂದ್ಯದ ಮೊದಲ ಸುತ್ತಿನಲ್ಲಿ 107 ಕೆಜಿ, ಎರಡನೇ ಸುತ್ತಿನಲ್ಲಿ 111 ಕೆಜಿ ಭಾರ ಎತ್ತಿದ್ದ ಸಂಕೇತ್ ಕೊನೆಯ ಸುತ್ತಿನಲ್ಲಿ 113ಕೆಜಿ ಭಾರ ಎತ್ತುವ ಮೂಲಕ ಪದಕಕ್ಕೆ ಕೊರಳೊಡ್ಡಿದ್ದಾರೆ.
ರೋಚಕ ವೇಟ್ ಲಿಫ್ಟಿಂಗ್ ಫೈನಲ್ ಪಂದ್ಯದಲ್ಲಿ ಮಲೇಷ್ಯಾದ ಮೊಹಮ್ಮದ್ ಚಿನ್ನದ ಪದಕ ಗೆದ್ದಿದ್ದು, ಶ್ರೀಲಂಕಾದ ಅಥ್ಲೀಟ್ಸ್ ಕಂಚಿಗೆ ಮುತ್ತಿಕ್ಕಿದ್ದಾರೆ. ಫೈನಲ್ ಪಂದ್ಯದಲ್ಲಿ 139 ಕೆಜಿ ಭಾರ ಎತ್ತುವ ವೇಳೆ ಸಂಕೇತ್ ಗಾಯಗೊಂಡಿದ್ದರು. ಹೀಗಾಗಿ, ಮಲೇಷ್ಯಾದ ಮೊಹಮ್ಮದ್ ಚಿನ್ನ ಗೆದ್ದಿದ್ದಾರೆ.
ಜಸ್ಟ್ ಮಿಸ್ ಆಯ್ತು ಚಿನ್ನದ ಪದಕ: ಫೈನಲ್ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿದ್ದ ಕೇವಲ 21 ವರ್ಷದ ಸಂಕೇತ್ ಸರ್ಗರ್ ಸ್ವಲ್ಪದರಲ್ಲಿ ಚಿನ್ನ ಮಿಸ್ ಮಾಡಿಕೊಂಡಿದ್ದಾರೆ. 248 ಕೆಜಿ ಭಾರ ಎತ್ತಿದ್ದ ಸಂಕೇತ್, ಗಾಯದಿಂದಾಗಿ 139 ಕೆಜಿ ತೂಕ ಎತ್ತುವ ಪ್ರಯತ್ನದಿಂದ ಹಿಂದೆ ಸರಿದರು. ಇದರ ಸದುಪಯೋಗ ಪಡೆದುಕೊಂಡ ಮಲೇಷ್ಯಾ ಆಟಗಾರ 249 ಕೆಜಿ ಭಾರ ಎತ್ತಿದರು. ಈ ಮೂಲಕ ಚಿನ್ನ ಗೆದ್ದಿದ್ದಾರೆ.
ಸರ್ಗರ್ ಮೊದಲ ಪ್ರಯತ್ನದಲ್ಲಿ 107 ಕೆಜಿ ಮತ್ತು ಎರಡನೇ ಪ್ರಯತ್ನದಲ್ಲಿ 111 ಕೆಜಿ ಎತ್ತಿದರು. ಮೂರನೇ ಯತ್ನದಲ್ಲಿ 113 ಕೆ.ಜಿ ಭಾರ ಎತ್ತುವ ಮೂಲಕ ಉತ್ತಮ ಪ್ರದರ್ಶನ ನೀಡಿದರು. ಮಲೇಷ್ಯಾ ಆಟಗಾರ ಕೊನೆಯ ಪ್ರಯತ್ನದಲ್ಲಿ 142 ಕೆಜಿ ಭಾರ ಎತ್ತಿದರು. ಹೀಗಾಗಿ ಚಿನ್ನದ ಪದಕಕ್ಕೆ ಅವರು ಕೊರಳೊಡ್ಡಿದರು. 15 ಭಾರತೀಯ ವೇಟ್‌ಲಿಫ್ಟರ್‌ಗಳು ಈ ಬಾರಿಯ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಭಾಗಿಯಾಗಿದ್ದು, ಹೆಚ್ಚಿನ ಪದಕ ಬರುವ ನಿರೀಕ್ಷೆ ದಟ್ಟವಾಗಿದೆ.
ಇದನ್ನೂ ಓದಿರಿ:ಕಾಮನ್‌ವೆಲ್ತ್ ಗೇಮ್ಸ್ 2022: ಸ್ಕ್ವಾಷ್ ಆಟಗಾರ್ತಿ ಅನಾಹತಾ ಸಿಂಗ್ಗೆ ಚೊಚ್ಚಲ ಗೆಲುವು