ಕರ್ನಾಟಕ

karnataka

ETV Bharat / sports

ಕಾಮನ್​ವೆಲ್ತ್​ಗೆ ಇಂದು ತೆರೆ..10 ದಿನದಲ್ಲಿ ಭಾರತ 18 ಚಿನ್ನ ಸೇರಿ 55 ಪದಕಗಳ ಬೇಟೆ - ETV bharat kannada news

11 ದಿನಗಳಿಂದ ನಡೆಯುತ್ತಿರುವ ಕಾಮನ್​ವೆಲ್ತ್​ ಗೇಮ್ಸ್ ಇಂದು ತೆರೆ ಕಾಣಲಿದೆ. ಭಾರತದ ಸ್ಪರ್ಧಿಗಳು ಅತ್ಯದ್ಭುತ ಪ್ರದರ್ಶನ ತೋರಿ ಕ್ರೀಡಾಕೂಟದಲ್ಲಿ ಇಲ್ಲಿಯವರೆಗೂ ಭಾರತ 55 ಪದಕಗಳನ್ನು ಕೊಳ್ಳೆ ಹೊಡೆದು ಪಟ್ಟಿಯಲ್ಲಿ 5 ನೇ ಸ್ಥಾನದಲ್ಲಿದೆ.

commonwealth-game
ಕಾಮನ್​ವೆಲ್ತ್​ಗೆ ಇಂದು ತೆರೆ

By

Published : Aug 8, 2022, 7:28 AM IST

ಬರ್ಮಿಂಗ್‌ಹ್ಯಾಮ್(ಯುಕೆ):ಇಲ್ಲಿ ನಡೆಯುತ್ತಿರುವ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಭಾರತಕ್ಕೆ ನಿನ್ನೆ ಪದಕಗಳ ಸುರಿಮಳೆ. ಒಂದೇ ದಿನ ವಿವಿಧ ವಿಭಾಗದಲ್ಲಿ 18 ಪದಕಗಳನ್ನು ಕೊಳ್ಳೆ ಹೊಡೆದಿದೆ. 6 ಚಿನ್ನ, 4 ಬೆಳ್ಳಿ, 8 ಕಂಚು ಮೆಡಲ್​ಗಳನ್ನು ಭಾರತ ತನ್ನ ಖಾತೆಗೆ ಸೇರಿಸಿಕೊಂಡಿತು. ಈ ಮೂಲಕ ಪದಕ ಪಟ್ಟಿಯಲ್ಲಿ ಒಟ್ಟಾರೆ 55 ಪದಕಗಳಿಂದ 5 ನೇ ಸ್ಥಾನದಲ್ಲಿ ಮುಂದುವರಿದಿದೆ.

ಕುಸ್ತಿ, ವೇಟ್​ ಲಿಫ್ಟಿಂಗ್​ನಲ್ಲಿ ಹೆಚ್ಚು ಪದಕ: ಭಾರತದ ಪೈಲ್ವಾನ್​ಗಳು ಮತ್ತು ವೇಟ್​ ಲಿಫ್ಟರ್​​​​​​ಗಳು ಅತಿ ಹೆಚ್ಚು ಪದಕಗಳನ್ನು ತಂದು ಕೊಟ್ಟಿದ್ದಾರೆ. ಕುಸ್ತಿಯಲ್ಲಿ 6 ಚಿನ್ನ, 1 ಬೆಳ್ಳಿ, 5 ಕಂಚು ಬಂದರೆ, ಭಾರ ಎತ್ತುವ ಸ್ಪರ್ಧೆಯಲ್ಲಿ 1 ಚಿನ್ನ, 3 ಬೆಳ್ಳಿ, 4 ಕಂಚು ಬಂದಿವೆ.

ಅಥ್ಲೆಟಿಕ್ಸ್​ನಲ್ಲಿ 8, ಕ್ರಿಕೆಟ್​ 1, ಪ್ಯಾರಾ ಟೇಬಲ್ ಟೆನಿಸ್​ 4, ಬ್ಯಾಡ್ಮಿಂಟನ್​ ಸೇರಿದಂತೆ ಒಟ್ಟಾರೆ 18 ಚಿನ್ನ, 15 ಬೆಳ್ಳಿ, 22 ಕಂಚಿನ ಸಾಧನೆ ಮಾಡಿದೆ. ಇಂದು ಕಾಮನ್​ವೆಲ್ತ್​ ಗೇಮ್ಸ್​ನ ಕೊನೆಯ ದಿನವಾಗಿದ್ದು, ಬ್ಯಾಡ್ಮಿಂಟನ್​ನಲ್ಲಿ ಫೈನಲ್​ ತಲುಪಿರುವ ಪಿವಿ ಸಿಂಧು ಮತ್ತು ಸೆನ್​ ಸೇರಿದಂತೆ ವಿವಿಧ ಸ್ಪರ್ಧೆಗಳಲ್ಲಿ ಮತ್ತಷ್ಟು ಪದಕ ಬರುವ ಸಾಧ್ಯತೆ ಇದೆ.

ಪದಕ ಪಟ್ಟಿ (ಟಾಪ್​ 5)

ದೇಶ ಚಿನ್ನ ಬೆಳ್ಳಿ ಕಂಚು ಒಟ್ಟು
ಆಸ್ಟ್ರೇಲಿಯಾ 65 54 53 172
ಇಂಗ್ಲೆಂಡ್ 56 59 52 167
ಕೆನಡಾ 24 32 34 90
ನ್ಯೂಜಿಲ್ಯಾಂಡ್ 19 12 17 48
ಭಾರತ 18 15 22 55

ಓದಿ:CWG 2022ರಲ್ಲಿ ಕಂಚಿನ ಪದಕ: ಭಾರತೀಯ ಮಹಿಳಾ ಹಾಕಿ ತಂಡದ ನೃತ್ಯ ಸಂಭ್ರಮ

ABOUT THE AUTHOR

...view details