ಕರ್ನಾಟಕ

karnataka

ETV Bharat / sports

ಕೊರೊನಾ ಸೋಂಕು ದೃಢ:​ ಯುವ ಟೆನ್ನಿಸ್ ಆಟಗಾರ್ತಿಯ ಒಲಿಂಪಿಕ್ಸ್ ಕನಸು ಭಗ್ನ - ಟೋಕಿಯೊ ಒಲಿಂಪಿಕ್ಸ್​

ಅಮೆರಿಕವನ್ನು ಒಲಿಂಪಿಕ್ಸ್​ನಲ್ಲಿ ಪ್ರತಿನಿಧಿಸಬೇಕೆಂಬುದು ನನ್ನ ಕನಸಾಗಿತ್ತು. ಭವಿಷ್ಯದಲ್ಲಿ ಕನಸನ್ನು ಈಡೇರಿಸಿಕೊಳ್ಳಲು ಹಲವು ಅವಕಾಶಗಳು ಸಿಗಲಿವೆ ಎಂಬ ಭರವಸೆಯಿದೆ ಎಂದು ಟೆನ್ನಿಸ್​ ತಾರೆ ಕೊಕೊ ಗಫ್​ ಟ್ವಿಟರ್​ನಲ್ಲಿ ಬರೆದುಕೊಂಡಿದ್ದಾರೆ.

Coco Gauff to miss Olympics
ಕೊಕೊ ಗಫ್​ಗೆ​ ಕೊರೊನಾ

By

Published : Jul 19, 2021, 3:18 PM IST

ಟೋಕಿಯೋ: ಅಮೆರಿಕದ ಉದಯೋನ್ಮುಖ ಆಟಗಾರ್ತಿ ಕೊಕೊ ಗಫ್​ ಕೋವಿಡ್​ 19 ಪಾಸಿಟಿವ್ ದೃಢಪಟ್ಟಿರುವುದರಿಂದ ಟೋಕಿಯೋದಲ್ಲಿ ನಡೆಯಲಿರುವ ಒಲಿಂಪಿಕ್ಸ್​ನಿಂದ ಹೊರಬಿದ್ದಿದ್ದಾರೆ.

ಈ ಸುದ್ದಿಯನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ನನಗೆ ತುಂಬಾ ಬೇಸರವಾಗುತ್ತಿದೆ. ನನಗೆ ಕೋವಿಡ್​ 19 ಪಾಸಿಟಿವ್ ದೃಢಪಟ್ಟಿದ್ದು, ಟೋಕಿಯೋ ಒಲಿಂಪಿಕ್ಸ್ ಗೇಮ್ಸ್​ನಲ್ಲಿ ಭಾಗವಹಿಸಲು ಸಾಧ್ಯವಾಗುತ್ತಿಲ್ಲ ಎಂದು ಗಫ್ ಟ್ವಿಟರ್​ನಲ್ಲಿ ಭಾನುವಾರ ಶೇರ್ ಮಾಡಿಕೊಂಡಿದ್ದಾರೆ.

ಅಮೆರಿಕವನ್ನು ಒಲಿಂಪಿಕ್ಸ್​ನಲ್ಲಿ ಪ್ರತಿನಿಧಿಸಬೇಕೆಂಬುದು ನನ್ನ ಕನಸಾಗಿತ್ತು. ಭವಿಷ್ಯದಲ್ಲಿ ನನ್ನ ಕನಸನ್ನು ಈಡೇರಿಸಿಕೊಳ್ಳಲು ಹಲವು ಅವಕಾಶಗಳು ಸಿಗಲಿವೆ ಎಂಬ ಭರವಸೆಯಿದೆ ಎಂದು ಬರೆದುಕೊಂಡಿದ್ದಾರೆ.

17 ವರ್ಷದ ಆಟಗಾರ್ತಿ ಇತ್ತೀಚೆಗೆ ಮುಗಿದ ವಿಂಬಲ್ಡನ್​ನ ನಾಲ್ಕನೇ ಸುತ್ತಿನಲ್ಲಿ 6-4, 6-4 ರ ಅಂತರದಲ್ಲಿ ಏಂಜಲಿಕ್ ಕೆರ್ಬರ್ ವಿರುದ್ಧ ಸೋತು ಹೊರಬಿದ್ದಿದ್ದರು. ಗಫ್​ ಪ್ರಸ್ತುತ WTA ಶ್ರೇಯಾಂಕದಲ್ಲಿ 25ನೇ ಸ್ಥಾನದಲ್ಲಿದ್ದಾರೆ.

ಜುಲೈ 23ರಿಂದ ಒಲಿಂಪಿಕ್ಸ್ 2020​ ಆರಂಭವಾಗಲಿದ್ದು, ಆಗಸ್ಟ್​ 8ರಂದು ಮುಕ್ತಾಯವಾಗಲಿದೆ.

ಇದನ್ನು ಓದಿ:Tokyo Olympics: ಒಲಿಂಪಿಕ್ಸ್ ಗ್ರಾಮದಲ್ಲಿ ಮೂವರು ಅಥ್ಲೀಟ್​ಗಳಿಗೆ ಕೋವಿಡ್‌ ಸೋಂಕು

ABOUT THE AUTHOR

...view details