ನವದೆಹಲಿ: ಫಿನ್‌ಲ್ಯಾಂಡ್‌ನಲ್ಲಿ ನಡೆದ ಕುರ್ಟೇನ್ ಗೇಮ್ಸ್‌ನಲ್ಲಿ ಪದಕ ಗೆದ್ದ ಒಲಿಂಪಿಕ್ ಚಿನ್ನದ ಪದಕ ವಿಜೇತ ನೀರಜ್ ಚೋಪ್ರಾ ತಮಗಾದ ಗಾಯಗಳನ್ನ ವಾಸಿಮಾಡಿಕೊಂಡಿದ್ದು, ಬೌಹೌಸ್ಗಲಾನ್ನಲ್ಲಿ ನಡೆಯಲಿರುವ ಸ್ಟಾಕ್‌ಹೋಮ್ ಡೈಮಂಡ್ ಲೀಗ್ನಲ್ಲಿ ಆಟವಾಡಲು ಎದುರು ನೋಡುತ್ತಿರುವುದಾಗಿ ಹೇಳಿದ್ದಾರೆ.
ಫಿನ್‌ಲ್ಯಾಂಡ್‌ನಲ್ಲಿ ಈ ವಾರದ ಆರಂಭದಲ್ಲಿ ನಡೆದ ಪಾವೊ ನೂರ್ಮಿ ಗೇಮ್ಸ್‌ನಲ್ಲಿ ನೀರಜ್ ಚೋಪ್ರಾ 89.30 ಮೀ. ದೂರ ಜಾವೆಲಿನ್ ಎಸೆಯುವ ಮೂಲಕ ಬೆಳ್ಳಿ ಪದಕ ಗೆದ್ದಿದ್ದರು. ಇದು ಅವರ ತಮ್ಮದೇ ಆದ ರಾಷ್ಟ್ರೀಯ ದಾಖಲೆಯನ್ನೇ ಮುರಿದಿದ್ದರು. ಟೋಕಿಯೋ ಒಲಿಂಪಿಕ್ಸ್‌ನ ನಂತರ ಇದು ನೀರಜ್ ಚೋಪ್ರಾರ ಎರಡನೇ ಸ್ಪರ್ಧೆಯಾಗಿದೆ.
ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಚೋಪ್ರಾ ಅಥ್ಲೆಟಿಕ್ಸ್‌ನಲ್ಲಿ ಚಿನ್ನದ ಪದಕವನ್ನು ಗೆದ್ದ ಮೊದಲ ಭಾರತೀಯರಾದರು. ಇನ್ನು ಕೆಶೋರ್ನ್ ವಾಲ್ಕಾಟ್ 86.64 ಮೀ. ಎಸೆದು ಎರಡನೇ ಸ್ಥಾನ ಪಡೆದರೆ, ಆಂಡರ್ಸನ್ ಪೀಟರ್ಸ್ 84.75ರ ಅತ್ಯುತ್ತಮ ಪ್ರಯತ್ನದೊಂದಿಗೆ ಮೂರನೇ ಸ್ಥಾನ ಪಡೆದರು.