ಟೋಕಿಯೋ: ಭಾರತದ ಭರವಸೆಯ ಬ್ಯಾಡ್ಮಿಂಟನ್ ಜೋಡಿಯಾದ ಚಿರಾಗ್ ಶೆಟ್ಟಿ ಮತ್ತು ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ ಪುರುಷರ ಡಬಲ್ಸ್ನಲ್ಲಿ 3ನೇ ಶ್ರೇಯಾಂಕದ ಚೈನೀಸ್ ತೈಪೆಯ ಯಂಗ್ ಲೀ ಮತ್ತು ಚಿ-ಲಿನ್ ವಾಂಗ್ ವಿರುದ್ಧ ಗೆಲುವು ಸಾಧಿಸಿ ಶುಭಾರಂಭ ಮಾಡಿದ್ದಾರೆ.
ಶನಿವಾರ ನಡೆದ ಪಂದ್ಯದಲ್ಲಿ ಮೊದಲ ಗೇಮ್ನಲ್ಲಿ 21-16ರಿಂದ ಗೆಲುವು ಸಾಧಿಸಿದ ಭಾರತೀಯ ಜೋಡಿ, 2ನೇ ಗೇಮ್ನಲ್ಲಿ ಸತತ ಎರಡು ಥಾಯ್ಲೆಂಡ್ ಓಪನ್ ಗೆದ್ದಿದ್ದ ತೈಪೆ ಜೋಡಿ 16-21ರಿಂದ ಸೋಲು ಕಂಡಿತು. ನಿರ್ಣಾಯಕ ವಾಗಿದ್ದ ಟೈ ಬ್ರೇಕರ್ನಲ್ಲಿ ಎರಡೂ ಜೋಡಿ ಭರ್ಜರಿ ಪೈಪೋಟಿ ನಡೆಸಿದರಾದರು, ಕೊನೆಗೆ ವಿಜಯ ಲಕ್ಷ್ಮಿ ಭಾರತದ ಪಾಲಾಯಿತು.