ಮಾಮಲ್ಲಪುರಂ(ಚೆನ್ನೈ):ನಿನ್ನೆಯಿಂದ ಇಲ್ಲಿ ಆರಂಭವಾಗಿರುವ 44ನೇ ಚೆಸ್ ಒಲಿಂಪಿಯಾಡ್‌ನ ಓಪನ್ ಮತ್ತು ಮಹಿಳೆಯರ ವಿಭಾಗಗಳಲ್ಲಿ ಭಾರತ ತಂಡಗಳು ಜಯಗಳಿಸಿ ಶುಭಾರಂಭ ಮಾಡಿವೆ. ಎಲ್ಲ ಆರು ಭಾರತೀಯ ತಂಡಗಳು ತಮ್ಮ ಮೊದಲ ಸುತ್ತಿನಲ್ಲಿ 4- 0 ಅಂತರದಲ್ಲಿ ಗೆಲುವು ಸಾಧಿಸಿವೆ.
ಭಾರತದ ಚತುರ ಚದುರಂಗ ಆಟಗಾರ್ತಿ ಕೊನೇರು ಹಂಪಿ, ಆರ್. ವೈಶಾಲಿ, ತಾನಿಯಾ ಸಚ್‌ದೇವ್ ಮತ್ತು ಭಕ್ತಿ ಕುಲಕರ್ಣಿ ಕೂಡ ಗೆಲುವಿನ ಆರಂಭ ಪಡೆದರು. ಅಗ್ರ ಶ್ರೇಯಾಂಕದ ಈ ಆಟಗಾರ್ತಿಯರು ತಜಕಿಸ್ತಾನ, ವೇಲ್ಸ್ ವಿರುದ್ಧ ಸೆಣಸಾಡಿದರು.
ಕೊನೇರು ಹಂಪಿ ಅವರು ಅತಿ ಹೆಚ್ಚು ರೇಟಿಂಗ್ ಪಡೆದ ಭಾರತೀಯ ಮಹಿಳಾ ಆಟಗಾರ್ತಿಯಾದರು. ಕಪ್ಪು ಕಾಯಿಗಳೊಂದಿಗೆ ಆಟವಾಡಿದ ಅವರು, 41 ನಡೆಗಳಲ್ಲಿ ತಜಕಿಸ್ತಾನದ ನೆಡೆಜಾ ಆಂಟೊನೊವಾ ಅವರನ್ನು ಸೋಲಿಸಿದರು. ಭಾರತ ಬಿ, ಸಿ ತಂಡವೂ ಕೂಡ ಗೆಲುವಿನ ಮುನ್ನುಡಿ ಬರೆದಿವೆ. ವಿದಿತ್ ಗುಜರಾತಿ, ಅರ್ಜುನ್ ಎರಿಗೈಸಿ, ಎಸ್‌ಎಲ್ ನಾರಾಯಣನ್ ಮತ್ತು ಕೆ. ಶಶಿಕಿರಣ್ ಗೆಲುವು ದಾಖಲಿಸಿದರು.
ಇನ್ನು ಒಲಂಪಿಯಾಡ್ನಲ್ಲಿ ದ್ವಿತೀಯ ಶ್ರೇಯಾಂಕದ ಉಕ್ರೇನ್, ದಕ್ಷಿಣ ಆಫ್ರಿಕಾವನ್ನು 4 - 0 ಮತ್ತು ಮೂರನೇ ಶ್ರೇಯಾಂಕದ ಜಾರ್ಜಿಯಾ 4-0 ರಲ್ಲಿ ಇರಾಕ್ ಅನ್ನು ಸೋಲಿಸಿತು. ವಿಶ್ವ ಚಾಂಪಿಯನ್ ಮ್ಯಾಗ್ನಸ್ ಕಾರ್ಲ್‌ಸನ್ ಇಲ್ಲದ ನಾರ್ವೆ, ಲೆಬನಾನ್ ವಿರುದ್ಧ 4-0 ಅಂತರದಲ್ಲಿ ಜಯ ಸಾಧಿಸಿತು. ಪುರುಷರ ವಿಭಾಗದಲ್ಲಿ ಭಾರತದ ಮೂರು ತಂಡಗಳು ಕ್ರಮವಾಗಿ ಜಿಂಬಾಬ್ವೆ, ಯುಎಇ ಮತ್ತು ದಕ್ಷಿಣ ಸುಡಾನ್ ವಿರುದ್ಧ ಮೊದಲ ಸುತ್ತಿನ ಪಂದ್ಯಗಳಲ್ಲಿ ಗೆಲುವು ಪಡೆದವು.
ಭಾರತದ ಪಂದ್ಯಗಳ ಫಲಿತಾಂಶಗಳು:
ಓಪನ್:ಭಾರತ ಎ ತಂಡ ಜಿಂಬಾಬ್ವೆಯ ವಿರುದ್ಧ 4-0 ಗೆಲುವು