ಚೆನ್ನೈ: 44ನೇ ಅಂತಾರಾಷ್ಟ್ರೀಯ ಚೆಸ್ ಒಲಿಂಪಿಯಾಡ್ 2022 ಕ್ರೀಡಾಕೂಟ ಕಳೆದ ತಿಂಗಳ 28 ರಂದು ಚೆನ್ನೈ ಸಮೀಪದ ಮಾಮಲ್ಲಪುರಂನಲ್ಲಿ ಆರಂಭವಾಗಿ ನಿನ್ನೆ ಮುಕ್ತಾಯಗೊಂಡಿದೆ. ಈ ಸ್ಪರ್ಧೆಯಲ್ಲಿ 186 ದೇಶಗಳ ಆಟಗಾರರು ಭಾಗವಹಿಸಿದ್ದು, ಭಾರತದ ಪರ 30 ಮಂದಿ ಕ್ರೀಡಾಪಟುಗಳು ವಿವಿಧ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.
ಚೆಸ್ ಒಲಿಂಪಿಯಾಡ್ ಕ್ರೀಡಾಕೂಟ ಮುಕ್ತಾಯ: ಹಂಗೇರಿಗೆ ಫಿಡೆ ಧ್ವಜ ಹಸ್ತಾಂತರ - 44ನೇ ಅಂತಾರಾಷ್ಟ್ರೀಯ ಚೆಸ್ ಒಲಿಂಪಿಯಾಡ್ 2022
ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ನೇತೃತ್ವದಲ್ಲಿ ಚೆನ್ನೈನ ನೆಹರೂ ಕ್ರೀಡಾಂಗಣದಲ್ಲಿ ನಡೆದ ಚೆಸ್ ಒಲಿಂಪಿಯಾಡ್‌ನ ಸಮಾರೋಪ ಸಮಾರಂಭದಲ್ಲಿ ಮುಂದಿನ ಚೆಸ್ ಒಲಿಂಪಿಯಾಡ್‌ನ ಆತಿಥೇಯ ಹಂಗೇರಿಗೆ FIDE ಧ್ವಜ ಹಸ್ತಾಂತರಿಸಲಾಯಿತು.
Etv Bharat, ಚೆಸ್ ಒಲಿಂಪಿಯಾಡ್
44ನೇ ಅಂತಾರಾಷ್ಟ್ರೀಯ ಚೆಸ್ ಒಲಿಂಪಿಯಾಡ್‌ನ ಸಮಾರೋಪ ಸಮಾರಂಭ ಚೆನ್ನೈನ ನೆಹರೂ ಕ್ರೀಡಾಂಗಣದಲ್ಲಿ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ನೇತೃತ್ವದಲ್ಲಿ ನಡೆಯಿತು. ಈ ವೇಳೆ, ಹಲವು ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಇದಾದ ಬಳಿಕ 44ನೇ ಅಂತಾರಾಷ್ಟ್ರೀಯ ಚೆಸ್ ಒಲಿಂಪಿಯಾಡ್‌ನ ಜ್ವಾಲೆಯನ್ನು ನಂದಿಸಿ, 45ನೇ ಚೆಸ್ ಒಲಿಂಪಿಯಾಡ್ ನಡೆಯಲಿರುವ ಹಂಗೇರಿಗೆ ಫಿಡೆ ಧ್ವಜವನ್ನು ಹಸ್ತಾಂತರಿಸಲಾಯಿತು.
ಇದನ್ನೂ ಓದಿ:ವಿಡಿಯೋ : ಈಜುಕೊಳದಲ್ಲಿ ಚೆಸ್ ಆಡಿ ಜಾಗೃತಿ ಮೂಡಿಸಿದ ವಿದ್ಯಾರ್ಥಿಗಳು