ಹೊಸದಿಲ್ಲಿ: ಶಿಕ್ಷಣ ಮತ್ತು ತಂತ್ರಜ್ಞಾನದ ದೈತ್ಯ ಬೈಜೂಸ್ (BYJU) ಸಂಸ್ಥೆಯು ಖ್ಯಾತ ಫುಟ್ಬಾಲ್ ತಾರೆ ಲಿಯೋನೆಲ್ ಮೆಸ್ಸಿ ಅವರನ್ನು ಗ್ಲೋಬಲ್ ಬ್ರ್ಯಾಂಡ್ ಅಂಬಾಸಡರ್ ಆಗಿ ಆಯ್ಕೆ ಮಾಡಿದೆ. ವಿಶ್ವದ ಸರ್ವಶ್ರೇಷ್ಠ ಫುಟ್ಬಾಲ್ ಆಟಗಾರರಲ್ಲಿ ಒಬ್ಬರೆಂದು ಪರಿಗಣಿಸಲಾಗುವ ಲಿಯೋನೆಲ್ ಮೆಸ್ಸಿ ಅವರು ಬೈಜೂಸ್ನ 'ಎಜುಕೇಶನ್ ಫಾರ್ ಆಲ್' ಯೋಜನೆಯ ಚೊಚ್ಚಲ ಜಾಗತಿಕ ಬ್ರ್ಯಾಂಡ್ ರಾಯಭಾರಿಯಾಗಿದ್ದಾರೆ ಎಂದು ಕಂಪನಿ ಶುಕ್ರವಾರ ತಿಳಿಸಿದೆ.
ಅರ್ಜೆಂಟೀನಾದ ಫುಟ್ಬಾಲ್ ತಂಡದ ನಾಯಕರಾಗಿರುವ ಮೆಸ್ಸಿ, ಸಮಾನ ಶಿಕ್ಷಣದ ಕಾರಣವನ್ನು ಉತ್ತೇಜಿಸಲು ನಮ್ಮೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿರುವುದಾಗಿ ಕಂಪನಿ ಹೇಳಿಕೊಂಡಿದೆ.
ನಮ್ಮ ಜಾಗತಿಕ ರಾಯಭಾರಿಯಾಗಿ ಮೆಸ್ಸಿ ಅವರೊಂದಿಗೆ ಸಹಕರಿಸಲು ನಾವು ಉತ್ಸುಕರಾಗಿದ್ದೇವೆ. ಅವರು ತಳಮಟ್ಟದಿಂದ ಬೆಳೆದು ಬಂದವರು. ಅತ್ಯಂತ ಯಶಸ್ವಿ ಕ್ರೀಡಾ ಪಟುಗಳಲ್ಲಿ ಒಬ್ಬರಾದವರು. BYJU's Education For All (EFA) ಪ್ರಸ್ತುತ 5.5 ಮಿಲಿಯನ್ ಮಕ್ಕಳನ್ನು ಸಶಕ್ತಗೊಳಿಸುತ್ತಿದೆ. ಮೆಸ್ಸಿಗಿಂತ ಹೆಚ್ಚು ಮಾನವ ಶಕ್ತಿಯನ್ನು ಯಾರೂ ಪ್ರತಿನಿಧಿಸುವುದಿಲ್ಲ ಎಂದು ಸಹ - ಸಂಸ್ಥಾಪಕಿ ದಿವ್ಯಾ ಗೋಕುಲನಾಥ್ ಹೇಳಿದ್ದಾರೆ.
ವಿಶ್ವಾದ್ಯಂತ ಫುಟ್ಬಾಲ್ ಸುಮಾರು 3.5 ಶತಕೋಟಿ ಅಭಿಮಾನಿಗಳನ್ನು ಹೊಂದಿರುವುದರಿಂದ, ವಿದೇಶದಲ್ಲಿ BYJU ಕಂಪನಿಯನ್ನು ಪರಿಚಯಿಸಲು ಲಿಯೋನೆಲ್ ಮೆಸ್ಸಿ ಕೈಜೋಡಿಸಲಿದ್ದಾರೆ. ಜಾಲತಾಣದಲ್ಲಿ ಮೆಸ್ಸಿ ಸುಮಾರು 450 ಮಿಲಿಯನ್ ಫಾಲೋವರ್ಸ್ ಹೊಂದಿದ್ದು ಇದು ನಮ್ಮ ಕಂಪನಿಗೆ ಸಹಕಾರಿಯಾಗಲಿದೆ ಎಂದು ಬೈಜುಸ್ ಆಶಿಸಿದೆ.