ETV Bharat Karnataka

ಕರ್ನಾಟಕ

karnataka

ETV Bharat / sports

ಬ್ರೆಜಿಲ್ ಪ್ಯಾರಾ ಬ್ಯಾಡ್ಮಿಂಟನ್: ಸೆಮಿಸ್​ ತಲುಪಿದ ಪ್ರಮೋದ್ ಭಗತ್, ಸುಕಾಂತ್ ಕದಮ್ - ETV Bharath Kannada news

ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಪ್ರಮೋದ್ ಭಗತ್ ಮತ್ತು ಸುಕಾಂತ್ ಕದಮ್ ಬ್ರೆಜಿಲ್ ಪ್ಯಾರಾ ಬ್ಯಾಡ್ಮಿಂಟನ್ ಇಂಟರ್‌ನ್ಯಾಶನಲ್ 2023ರ ಸೆಮಿಫೈನಲ್​ ತಲುಪಿದ್ದಾರೆ.

Etv Bharatbrazil-para-badminton-international-2023-pramod-bhagat-sukant-kadam-enter-quarterfinals
ಬ್ರೆಜಿಲ್ ಪ್ಯಾರಾ ಬ್ಯಾಡ್ಮಿಂಟನ್: ಸೆಮಿಸ್​ ತಲುಪಿದ ಪ್ರಮೋದ್ ಭಗತ್, ಸುಕಾಂತ್ ಕದಮ್
author img

By

Published : Apr 15, 2023, 11:03 PM IST

ಸಾವೊ ಪಾಲೊ (ಬ್ರೆಜಿಲ್): ಭಾರತದ ಏಸ್ ಷಟ್ಲರ್ ಪ್ರಮೋದ್ ಭಗತ್ ಮತ್ತು ವಿಶ್ವ ನಂ 4 ಸುಕಾಂತ್ ಕದಮ್ ಇಲ್ಲಿ ನಡೆಯುತ್ತಿರುವ ಬ್ರೆಜಿಲ್ ಪ್ಯಾರಾ ಬ್ಯಾಡ್ಮಿಂಟನ್ ಇಂಟರ್‌ನ್ಯಾಶನಲ್ 2023 ರ ಸೆಮಿಫೈನಲ್‌ನಲ್ಲಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡಿದ್ದಾರೆ. ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಭಗತ್ ಸಿಂಗಲ್ಸ್ ಮತ್ತು ಪುರುಷರ ಡಬಲ್ಸ್ ಈವೆಂಟ್‌ನಲ್ಲಿ ಸೆಮಿಫೈನಲ್ ತಲುಪಿದರೆ, ಕದಮ್ ಪುರುಷರ ಸಿಂಗಲ್ಸ್ ಮತ್ತು ಡಬಲ್ಸ್‌ನಲ್ಲಿ ಸೆಮಿಫೈನಲ್ ತಲುಪಿದ್ದಾರೆ.

ಪುರುಷರ ಸಿಂಗಲ್ಸ್ ಕ್ವಾರ್ಟರ್ ಫೈನಲ್ ಹಣಾಹಣಿಯಲ್ಲಿ ಪ್ರಮೋದ್ 21-7, 21-12ರಲ್ಲಿ ಪೆರುವಿನ ಪೆಡ್ರೊ ಪಾಬ್ಲೊ ಡಿ ವಿನಾಟಿಯಾ ಅವರನ್ನು ಸೋಲಿಸಿದರು. ಸೆಮಿಫೈನಲ್‌ನಲ್ಲಿ ಜಪಾನ್‌ನ ಡೈಸುಕೆ ಫುಜಿಹಾರಾ ಅವರೊಂದಿಗೆ ಘರ್ಷಣೆಯನ್ನು ಕಾಯ್ದಿರಿಸಲು ಅವರು ಕೇವಲ 30 ನಿಮಿಷಗಳನ್ನು ತೆಗೆದುಕೊಂಡರು. ಅವರು ತಮ್ಮ ಜೊತೆಗಾರ ಸುಕಾಂತ್ ಕದಮ್ ಅವರೊಂದಿಗೆ ಪುರುಷರ ಡಬಲ್ಸ್‌ನಲ್ಲಿ ಸೆಮಿಫೈನಲ್ ಸ್ಥಾನವನ್ನು ಪಡೆದರು.

ಇವರಿಬ್ಬರು ಪೆರುವಿನ ಪೆಡ್ರೊ ಪಾಬ್ಲೊ ಡಿ ವಿನಾಟಿಯಾ ಮತ್ತು ರೆಂಜೊ ಡಿಕ್ವೆಜ್ ಬ್ಯಾನ್ಸೆಸ್ ಮೊರೇಲ್ಸ್ ಜೋಡಿಯನ್ನು ಸೋಲಿಸಿದರು. 25 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ 21-10 ಮತ್ತು 21-14 ನೇರ ಸೆಟ್​ನಿಂದ ಗೆದ್ದರು. ಇವರಿಬ್ಬರು ಸೆಮಿಫೈನಲ್‌ನಲ್ಲಿ ಭಾರತದ ಕುಮಾರ್ ನಿತೇಶ್ ಮತ್ತು ತರುಣ್ ಅವರನ್ನು ಎದುರಿಸಲಿದ್ದಾರೆ.

ಇದನ್ನೂ ಓದಿ:ಸೀನಿಯರ್ ಮಹಿಳಾ ರಾಷ್ಟ್ರೀಯ ಫುಟ್‌ಬಾಲ್ ಚಾಂಪಿಯನ್‌ಶಿಪ್: ಅಂತಿಮ ಸುತ್ತಿಗೆ 12 ತಂಡಗಳ ಆಯ್ಕೆ

ಮಿಶ್ರ ಡಬಲ್ಸ್‌ನಲ್ಲಿ ಪ್ರಮೋದ್ ಅವರು ತಮ್ಮ ಜೊತೆಗಾರ ಮನಿಶಾ ರಾಮದಾಸ್ ಅವರೊಂದಿಗೆ ಇಂಡೋನೇಷ್ಯಾದ ಹಿಕ್ಮತ್ ರಾಮ್‌ದಾನಿ ಮತ್ತು ಲಿಯಾನಿ ರಾತ್ರಿ ಒಕ್ಟಿಲಾ ವಿರುದ್ಧ ಹೋರಾಡಿ ಸೋಲು ಅನುಭವಿಸಬೇಕಾಯಿತು. ಮತ್ತೊಂದೆಡೆ, ಸುಕಾಂತ್ ಕದಮ್ ಅವರು ಭಾರತದ ಸುಹಾಸ್ ಲಾಲಿನಕೆರೆ ಯತಿರಾಜ್ ವಿರುದ್ಧ ಕ್ವಾರ್ಟರ್‌ಫೈನಲ್‌ನಲ್ಲಿ ಗೆದ್ದರು.

ಸುಹಾಸ್ ಲಾಲಿನಕೆರೆ ಯತಿರಾಜ್ ಉತ್ತಮ ಫೈಟ್​ ನೀಡಿದರು. ಪಂದ್ಯ ಮೂರು ಸೆಟ್​ನಲ್ಲಿ ನಡೆಯಿತು. ಸುಕಾಂತ್ ಉತ್ತಮ ಹೋರಾಟವನ್ನು ನಡೆಸಿದರು ಮತ್ತು ಸುಹಾಸ್‌ನ ಎಲ್ಲಾ ಶಾಟ್​ಗೂ ಉತ್ತಮ ತಿರುಗೇಟು ನೀಡಿದರು. ಕೊನೆಯಲ್ಲಿ 29-27, 11-21 ಮತ್ತು 21-17ರಲ್ಲಿ ಗೆದ್ದರು.

ಇದನ್ನೂ ಓದಿ:ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮತ್ತೊಂದು ದಾಖಲೆ ಬರೆದ ವಿರಾಟ್​ ಕೊಹ್ಲಿ

ABOUT THE AUTHOR

...view details