ಕರ್ನಾಟಕ

karnataka

ETV Bharat / sports

ಬಾಕ್ಸಿಂಗ್​ ಚಾಂಪಿಯನ್​ಶಿಪ್​ನಲ್ಲಿ ಇತಿಹಾಸ: ಭಾರತಕ್ಕೆ 2 ಪದಕ ಖಚಿತಪಡಿಸಿದ ಅಮಿತ್​, ಮನೀಶ್ ​​​​

ರಷ್ಯಾದಲ್ಲಿ ನಡೆಯುತ್ತಿರವ AIBA ವಿಶ್ವ ಚಾಂಪಿಯನ್​ಶಿಪ್​ನ 52 ಕೆಜಿ ವಿಭಾಗದಲ್ಲಿ ಸ್ಪರ್ಧಿಸಿದ್ದ ಅಮಿತ್​ ಪಂಗಲ್ ಹಾಗೂ ಮನೀಶ್​​​ ಕೌಶಿಕ್​ ಸೆಮಿಫೈನಲ್​ ಪ್ರವೇಶಿಸುವ ಮೂಲಕ ಭಾರತಕ್ಕೆ ಎರಡು ಪದಕಗಳನ್ನು ಖಚಿತಪಡಿಸಿದ್ದಾರೆ.

Boxing world championships

By

Published : Sep 18, 2019, 5:40 PM IST

ಎಕಟೆರಿನ್ಬರ್ಗ್(ರಷ್ಯಾ):ಏಷ್ಯನ್​ ಗೇಮ್ಸ್​ನ ಚಿನ್ನದ ಪದಕ ವಿಜೇತ ಅಮಿತ್​ ಪಂಗಲ್​ ಹಾಗೂ ಮನೀಶ್​ ಕೌಶಿಕ್​ ವಿಶ್ವ ಬಾಕ್ಸಿಂಗ್​ ಚಾಂಪಿಯನ್​ಶಿಪ್​ನಲ್ಲಿ ಸೆಮಿಫೈನಲ್​ ಪ್ರವೇಶಿಸುವ ಮೂಲಕ ಭಾರತಕ್ಕೆ ಪದಕ ಖಚಿತಪಡಿಸಿದ್ದಾರೆ.

ರಷ್ಯಾದಲ್ಲಿ ನಡೆಯುತ್ತಿರವ AIBA ವಿಶ್ವ ಚಾಂಪಿಯನ್​ಶಿಪ್​ನ 52 ಕೆಜಿ ವಿಭಾಗದಲ್ಲಿ ಸ್ಪರ್ಧಿಸಿದ್ದ ಅಮಿತ್​ ಪಂಗಲ್ ಫಿಲಿಪಿನೋದ ಕಾರ್ಲೋ ಪಾಲಮ್​ರನ್ನು ಕ್ವಾರ್ಟರ್​ ಫೈನಲ್​ ಪಂದ್ಯದಲ್ಲಿ 4-1 ಅಂಕದ ಅಂತರದಲ್ಲಿ ಮಣಿಸಿ ಸೆಮಿಫೈನಲ್​ ಪ್ರವೇಶಿಸಿದ್ದಾರೆ. ಈ ಮೂಲಕ ವಿಶ್ವ ಚಾಂಪಿಯನ್​ಶಿಪ್​ನಲ್ಲಿ ಸೆಮಿಫೈನಲ್​ ​ಪ್ರವೇಶಿಸಿದ 5ನೇ ಭಾರತೀಯ ಬಾಕ್ಸರ್​ ಎನಿಸಿಕೊಂಡಿದ್ದಾರೆ.

63 ಕೆಜಿ ವಿಭಾಗದಲ್ಲಿ ಕಂಚಿನ ಪದಕ ಖಚಿತ ಪಡಿಸಿಕೊಂಡ ಮನೀಶ್​ ಕೌಶಿಕ್​

ಭಾರತಕ್ಕೆ 2ನೇ ಪದಕ ಖಚಿತಪಡಿಸಿದ ಮನೀಶ್​ ಕೌಶಿಕ್

63 ಕೆಜಿ ವಿಭಾಗದಲ್ಲಿ ಸ್ಪರ್ಧಿಸಿದ್ದ ಮನೀಶ್​ ಕೌಶಿಕ್​ ಸೆಮಿಫೈನಲ್​ ಪ್ರವೇಶಿಸುವ ಮೂಲಕ ಒಂದೇ ವರ್ಷದಲ್ಲಿ 2 ಪದಕಗಳನ್ನು ಭಾರತದ ಮಡಿಲಿಗೆ ತಂದುಕೊಡುವ ಮೂಲಕ ಐತಿಹಾಸಿಕ ಸಾಧನೆ ಮೆರೆದಿದ್ದಾರೆ. ಮನೀಶ್​ ಬ್ರೆಜಿಲ್​ನ ವಂಡರ್​ಸನ್​​ ಡಿ ಒಲಿವೈರಾ ವಿರುದ್ಧ 5-0 ಅಂತರದಿಂದ ಮಣಿಸಿ ಸೆಮಿಫೈನಲ್​ ಪ್ರವೇಶಿಸುವ ಮೂಲಕ ಕಂಚಿನ ಪದಕ ಖಚಿತಪಡಿಸಿಕೊಂಡಿದ್ದಾರೆ.

ಮನೀಶ್​, ಅಮಿತ್​ ಜೊತೆಗೆ ಕ್ವಾರ್ಟರ್​ ಫೈನಲ್​ ಪ್ರವೇಶಿಸಿದ್ದ ಸಂಜೀತ್​(91ಕೆಜಿ), ಕವಿಂದರ್​ ಬಿಸ್ತ್​(57 ಕೆಜಿ) ಅವರು ಕೂಡ ಇಂದು ಸೆಣಸಲಿದ್ದು, ಇವರಿಬ್ಬರು ಸಮಿಫೈನಲ್​ ಪ್ರವೇಶಿಸಿದರೆ ಭಾರತಕ್ಕೆ ಕನಿಷ್ಠ 4 ಪದಕ ಖಚಿತವಾಗಲಿವೆ.

ABOUT THE AUTHOR

...view details