ಬೆಲ್ಗ್ರೇಡ್(ಸರ್ಬಿಯಾ):ಇಲ್ಲಿ ನಡೆಯುತ್ತಿರುವ AIBA ಪುರುಷರ ವಿಶ್ವ ಬಾಕ್ಸಿಂಗ್ ಚಾಂಪಿಯನ್ಶಿಪ್ನಲ್ಲಿ 21 ವರ್ಷದ ಆಕಾಶ್ ಕುಮಾರ್ 54 ಕೆಜಿ ವಿಭಾಗದಲ್ಲಿ ಸೆಮಿಫೈನಲ್ ತಲುಪುವ ಮೂಲಕ ಭಾರತಕ್ಕೆ ಮೊದಲ ಪದಕ ಖಚಿತಪಡಿಸಿದ್ದಾರೆ.
ಕ್ವಾರ್ಟರ್ ಫೈನಲ್ಸ್ನಲ್ಲಿ ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತ ವೆನಿಜುವೆಲಾದ ಯೋಲ್ ಫಿನೋಲ್ ರಿವಾಸ್ ವಿರುದ್ಧ ಸರ್ವಾನುಮತ ಪಡೆದು ಗೆಲುವು ಸಾಧಿಸಿ ಸೆಮಿಫೈನಲ್ಸ್ ಪ್ರವೇಶಿಸಿದರು.
ಈ ಮೂಲಕ ವಿಶ್ವ ಚಾಂಪಿಯನ್ಶಿಪ್ನಲ್ಲಿ ಭಾರತಕ್ಕೆ ಪದಕ ತಂದುಕೊಟ್ಟ 7ನೇ ಬಾಕ್ಸರ್ ಎನಿಸಿಕೊಂಡರು. ಈ ಮೊದಲು ವಿಜೇಂದರ್ ಸಿಂಗ್ 2009ರಲ್ಲಿ (ಕಂಚು), ವಿಕಾಶ್ ಕ್ರಿಷನ್ 2011ರಲ್ಲಿ (ಕಂಚು), ಶಿವಥಾಪ 2015ರಲ್ಲಿ(ಕಂಚು) ಗೌರವ್ ಬಿಧುರಿ 2017ರಲ್ಲಿ(ಕಂಚು), ಅಮಿತ್ ಪಂಘಲ್ 2019ರಲ್ಲಿ(ಬೆಳ್ಳಿ) ಮತ್ತು ಮನೀಶ್ ಕೌಶಿಕ್ 2019ರಲ್ಲಿ(ಕಂಚು) ಪದಕ ಗೆದ್ದಿದ್ದರು.