ಕರ್ನಾಟಕ

karnataka

ETV Bharat / sports

ಬಾಕ್ಸಿಂಗ್ ವಿಶ್ವಕಪ್: ಫೈನಲ್ ಪ್ರವೇಶಿಸಿದ ಸತೀಶ್ ಕುಮಾರ್ - ಭಾರತೀಯ ಬಾಕ್ಸರ್ ಸತೀಶ್ ಕುಮಾರ್

ಭಾರತೀಯ ಬಾಕ್ಸರ್ ಸತೀಶ್ ಕುಮಾರ್, ಜರ್ಮನಿಯ ನೆಲ್ವಿ ಟಿಯಾಫ್ಯಾಕ್ ಅವರನ್ನು ಮಣಿಸಿ ಬಾಕ್ಸಿಂಗ್‌ನ ಕಲೋನ್ ವಿಶ್ವಕಪ್‌ ಟೂರ್ನಿಯಲ್ಲಿ ಪ್ರಶಸ್ತಿ ಸುತ್ತಿಗೆ ಎಂಟ್ರಿ ಕೊಟ್ಟಿದ್ದಾರೆ.

Satish enters finals of Cologne World Cup
ಫೈನಲ್ ಪ್ರವೇಶಿಸಿದ ಸತೀಶ್ ಕುಮಾರ್

By

Published : Dec 19, 2020, 3:26 PM IST

ನವದೆಹಲಿ: ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಬೆಳ್ಳಿ ಪದಕ ವಿಜೇತ ಸತೀಶ್ ಕುಮಾರ್ (+91 ಕೆಜಿ) ಜರ್ಮನಿಯಲ್ಲಿ ನಡೆಯುತ್ತಿರುವ ಬಾಕ್ಸಿಂಗ್‌ನ ಕಲೋನ್ ವಿಶ್ವಕಪ್‌ ಟೂರ್ನಿಯಲ್ಲಿ ಫೈನಲ್‌ ತಲುಪಿದ್ದಾರೆ.

ಸತೀಶ್ ಅವರು ಜರ್ಮನಿಯ ನೆಲ್ವಿ ಟಿಯಾಫ್ಯಾಕ್ ಅವರನ್ನು 4 -1 ಅಂಕಗಳಿಂದ ಸೋಲಿಸಿ ಫೈನಲ್ ಪ್ರವೇಶಿಸಿದ್ದಾರೆ. ಮಹಿಳೆಯರ 57 ಕೆಜಿ ವಿಭಾಗದಲ್ಲಿ ಸಾಕ್ಷಿ ಮತ್ತು ಮನೀಷಾ ಫೈನಲ್‌ಗೆ ಪ್ರವೇಶಿಸಿದ್ದು, ಇಬ್ಬರು ಬಾಕ್ಸರ್‌ಗಳು ಪರಸ್ಪರ ಮುಖಾಮುಖಿಯಾಗಲಿದ್ದಾರೆ.

ಮನೀಷಾ ಎರಡು ಬಾರಿ ವಿಶ್ವ ಚಾಂಪಿಯನ್‌ಶಿಪ್ ಬೆಳ್ಳಿ ಪದಕ ವಿಜೇತ ಸೋನಿಯಾ ಲೆದರ್ ಅವರನ್ನು 5- 0 ಅಂಕಗಳಿಂದ ಸೋಲಿಸಿದರೆ, ಸಾಕ್ಷಿ, ಜರ್ಮನಿಯ ರಮೋನಾ ಗ್ರಾಫ್ ಅವ‌ರನ್ನು 4 -1 ಅಂಕಗಳಿಂದ ಮಣಿಸಿದ್ರು. ಏಷ್ಯನ್ ಗೇಮ್ಸ್​ನಲ್ಲಿ ಕಂಚಿನ ಪದಕ ಪಡೆದಿದ್ದ ಪೂಜಾ ರಾಯ್ ನೆದರ್ಲೆಂಡ್​ನ ನೌಚ್ಕಾ ಫಾಂಟಿಜ್ನ್‌ ವಿರುದ್ಧ ಸೋಲು ಕಂಡಿದ್ದು, ಕಂಚಿನ ಪದಕಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ.

ಪುರುಷರ 57 ಕೆಜಿ ವಿಭಾಗದಲ್ಲಿ ಮೊಹಮ್ಮದ್ ಹುಸಾಮುದ್ದೀನ್ ಮತ್ತು ಗೌರವ್ ಸೋಲಂಕಿ ಕಂಚಿನ ಪದಕ ಪಡೆದಿದ್ದಾರೆ.

ABOUT THE AUTHOR

...view details