ಕರ್ನಾಟಕ

karnataka

ETV Bharat / sports

ವಿದಾಯ ಘೋಷಿಸಿದ ಬಾಕ್ಸಿಂಗ್ ದಂತಕಥೆ​ ಮ್ಯಾನಿ ಪಕ್ಯಾವ್: ಪಿಲಿಫೈನ್ಸ್ ಅಧ್ಯಕ್ಷಗಿರಿಗೆ ಸ್ಪರ್ಧೆ ಸಾಧ್ಯತೆ - ಮ್ಯಾನಿ ಪಕ್ಯಾವ್ ನಿವೃತ್ತಿ

ಎಂಟು ವಿವಿಧ ವಿಭಾಗಗಳಲ್ಲಿ ವಿಶ್ವ ಪ್ರಶಸ್ತಿ ಜಯಿಸಿದ್ದ ಜಗತ್ತಿನ ಏಕೈಕ ಬಾಕ್ಸರ್​ ಪಕ್ಯಾವ್ ಫೇಸ್​ಬುಕ್ ಖಾತೆಯಲ್ಲಿ 14 ನಿಮಿಷಗಳ ಭಾವನಾತ್ಮಕ ವಿಡಿಯೋ ಹಂಚಿಕೊಂಡು ವಿದಾಯದ ಸುದ್ದಿ ತಿಳಿಸಿದ್ದಾರೆ.

Boxing legend Manny Pacquiao retires at 42
ವಿದಾಯ ಘೋಷಿಸಿದ ಲೆಜೆಂಡರಿ ಬಾಕ್ಸರ್​ ಮ್ಯಾನಿ ಪಕ್ಯಾವ್

By

Published : Sep 29, 2021, 4:00 PM IST

ನವದೆಹಲಿ: ಫಿಲಿಫೈನ್ಸ್ ಬಾಕ್ಸಿಂಗ್ ದಂತಕಥೆ​ ಮ್ಯಾನಿ ಪಕ್ಯಾವ್ ಬಾಕ್ಸಿಂಗ್​ ವೃತ್ತಿಜೀವನಕ್ಕೆ ಬುಧವಾರ ನಿವೃತ್ತಿ ಘೋಷಿಸಿದ್ದಾರೆ. ಮಾಧ್ಯಮಗಳ ವರದಿಯ ಪ್ರಕಾರ, ಅವರು 2022ರ ಫಿಲಿಪೈನ್ಸ್​ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸಲಿದ್ದಾರೆ ಎಂದು ತಿಳಿದುಬಂದಿದೆ.

​8 ವಿವಿಧ ವಿಭಾಗಗಳಲ್ಲಿ ವಿಶ್ವ ಪ್ರಶಸ್ತಿ ಜಯಿಸಿದ್ದ ಏಕೈಕ ಬಾಕ್ಸರ್​ ಪಕ್ಯಾವ್ ತಮ್ಮ ಫೇಸ್​ಬುಕ್ ಖಾತೆಯಲ್ಲಿ 14 ನಿಮಿಷಗಳ ಭಾವನಾತ್ಮಕ ವಿಡಿಯೋ ಹಂಚಿಕೊಂಡಿದ್ದು ವಿದಾಯದ ಸುದ್ದಿ ತಿಳಿಸಿದ್ದಾರೆ. 42 ವರ್ಷದ ಪಕ್ಯಾವ್​ ತಮಗೆ ಬೆಂಬಲ ನೀಡಿದ ಅಭಿಮಾನಿಗಳಿಗೆ ಧನ್ಯವಾದ ತಿಳಿಸುವುದರ ಜೊತೆಗೆ ವೃತ್ತಿ ಜೀವನದ ಹಲವು ನೆನಪುಗಳನ್ನು ಸ್ಮರಿಸಿಕೊಂಡಿದ್ದಾರೆ.

ಕಳೆದ ಭಾನುವಾರ, ಪ್ಯಾಕಿಯಾವೊ ಮೇ 2022 ರ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವ ಯೋಜನೆ ಘೋಷಿಸಿದ್ದರು. 2016ರಿಂದ ಸೆನೆಟರ್ ಆಗಿರುವ ವಿಶ್ವ ಬಾಕ್ಸಿಂಗ್ ಚಾಂಪಿಯನ್, ಈ ಹಿಂದೆ ಎರಡು ಬಾರಿ ಪ್ರತಿನಿಧಿಗಳ ಸದನದಲ್ಲಿ ಸೇವೆ ಸಲ್ಲಿಸಿದ್ದಾರೆ.

ಪಕ್ಯಾವ್​ ಕ್ಯೂಬಾದ ಯಾರ್ಡೆನಿಸ್​ ಉಗಾಸ್​ ವಿರುದ್ಧ ತಮ್ಮ ಕೊನೆಯ ವೃತ್ತಿಪರ ಪೈಪೋಟಿ ನಡೆಸಿದ್ದರು. ಆ ಪಂದ್ಯದಲ್ಲಿ ಉಗಾಸ್ ಸರ್ವಾನುಮತದಿಂದ ಫಿಲಿಫೈನ್ಸ್ ಬಾಕ್ಸರ್​ ಮಣಿಸಿ ಡಬ್ಲೂಬಿಎ (WBA) ವೆಲ್ಟರ್​ವೇಟ್​ ಪ್ರಶಸ್ತಿಯನ್ನು ತಮ್ಮಲ್ಲೇ ಉಳಿಸಿಕೊಂಡಿದ್ದರು.

ಇದನ್ನೂ ಓದಿ: ಪಾಕಿಸ್ತಾನಕ್ಕೆ ಕ್ಷಮೆ ಕೋರಿದ ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ​: 2022ಕ್ಕೆ ಪ್ರವಾಸ ಕೈಗೊಳ್ಳುವ ಭರವಸೆ

ABOUT THE AUTHOR

...view details