ನವದೆಹಲಿ :ಭಾರತೀಯ ಬಾಕ್ಸರ್ಗಳಾದ ಗೋವಿಂದ್ ಸಹನಿ(48 ಕೆಜಿ), ಅನಂತ್ ಪ್ರಹ್ಲಾದ್ ಚೋಪ್ಡೆ(54 ಕೆಜಿ) ಮತ್ತು ಸುಮಿತ್(75ಕೆಜಿ) ಥಾಯ್ಲೆಂಡ್ ಓಪನ್ನಲ್ಲಿ ಭರ್ಜರಿ ಪ್ರದರ್ಶನ ತೋರಿ ಭಾರತಕ್ಕೆ ಚಿನ್ನದ ಪದಕಗಳನ್ನು ತಂದುಕೊಟ್ಟಿದ್ದಾರೆ. ಶನಿವಾರ ನಡೆದ ಬೌಟ್ಸ್ನಲ್ಲಿ ಸಹನಿ ಮತ್ತು ಸುಮಿತ್ ತಮ್ಮ ಪ್ರತಿಸ್ಪರ್ದಿಗಳ ವಿರುದ್ಧ ಆರಂಭ ಮತ್ತು ಅಂತ್ಯ ಎರಡಲ್ಲೂ ಪ್ರಾಬಲ್ಯಯುತ ಪ್ರದರ್ಶನ ತೋರಿ 5-0 ಅಂಕಗಳ ಅಂತರದಲ್ಲಿ ಗೆಲುವು ಸಾಧಿಸಿದರು.
ಇವರಿಬ್ಬರು ಸ್ಥಳೀಯ ಬಾಕ್ಸರ್ಗಳಾದ ನಟ್ಟಫಾನ್ ಥುಮ್ಚರೋಯೆನ್ ಮತ್ತು ಪೀಟ್ಪತ್ ಯೆಸುಂಗ್ನೋ ವಿರುದ್ಧ ಗೆಲುವು ಸಾಧಿಸಿದರು. 54 ಕೆಜಿ ವಿಭಾಗದಲ್ಲಿ ಅನಂತ ಥಾಯ್ಲಂಡ್ ಅಗ್ರ ಬಾಕ್ಸರ್ ವ ರಿತ್ತಿಯಾಮನ್ ಸೇಂಗ್ಸಾವಾಂಗ್ ವಿರುದ್ಧ ಡಿಫೆನ್ಸ್ ಮತ್ತು ಆಕ್ರಮಣಕಾರಿ ಮಿಶ್ರಿತ ಪ್ರದರ್ಶನ ತೋರಿ ಅವಿರೋಧ ಜಯ ಸಾಧಿಸಿ ಚಿನ್ನದ ಪದಕಕ್ಕೆ ಮುತ್ತಿಕ್ಕಿದರು.