ಕರ್ನಾಟಕ

karnataka

ETV Bharat / sports

ಕೋವಿಡ್ 19 ಭೀತಿ.. ಬಾಕ್ಸಿಂಗ್​ ಫೆಡರೇಷನ್ ಚುನಾವಣೆ ಮುಂದೂಡಿಕೆ - ಬಿಎಫ್​ಐನ ಅಧ್ಯಕ್ಷ ಅಜಯ್ ಸಿಂಗ್

ರಾಜ್ಯ ಸಂಸ್ಥೆಗಳ ಮನವಿ ಪುರಸ್ಕರಿಸಿದ್ದು, ಸಾಮಾನ್ಯ ಸಭೆ ಮತ್ತು ಚುನಾವಣೆಯನ್ನು ಮುಂದೂಡಲು ರಿಟರ್ನಿಂಗ್ ಆಫೀಸರ್​ ಶಿಪಾರಸು ಮಾಡಿದ್ದಾರೆ. ಇದನ್ನು ಭಾರತೀಯ ಒಲಿಂಪಿಕ್ಸ್ ಒಕ್ಕೂಟ ಕೂಡ ಖಚಿತ ಪಡಿಸಿದೆ ಎಂದು ತಿಳಿದು ಬಂದಿದೆ..

ಬಾಕ್ಸಿಂಗ್​ ಫೆಡೆರೇಷನ್​ ಚುನಾವಣೆ
ಬಾಕ್ಸಿಂಗ್​ ಫೆಡೆರೇಷನ್​ ಚುನಾವಣೆ

By

Published : Dec 8, 2020, 9:41 PM IST

ನವದೆಹಲಿ :ಕೋವಿಡ್​-19 ಸಾಂಕ್ರಾಮಿಕದ ಭೀತಿಯಿಂದ ಡಿಸೆಂಬರ್​ 18ರಂದು ನಡೆಯಬೇಕಿದ್ದ ಬಾಕ್ಸಿಂಗ್​ ಫೆಡೆರೇಷನ್​ ಚುನಾವಣೆಯನ್ನು ಮುಂದೂಡಲಾಗಿದೆ.

ಡಿಸೆಂಬರ್​ 18ರಂದು ಗುರುಗ್ರಾಮ್​ನಲ್ಲಿ ಬಾಕ್ಸಿಂಗ್ ಫೆಡರೇಷನ್​ ಆಫ್​ ಇಂಡಿಯಾದ ಸಾಮಾನ್ಯ ಜನರಲ್​ ಸಭೆ ನಡೆಯಬೇಕಿತ್ತು. ಅಂದೇ ಚುನಾವಣೆ ಕೂಡ ಆಯೋಜನೆಯಾಗಿತ್ತು. ಆದರೆ, ಬಹುಪಾಲು ರಾಜ್ಯ ಸಂಸ್ಥೆಗಳು ಸಾಂಕ್ರಾಮಿಕವಿರುವುದರಿಂದ ಚುನಾವಣೆಯನ್ನು ಮುಂದೂಡಲು ಬಯಸಿವೆ. ಈ ಚುನಾವಣೆ ಸೆಪ್ಟೆಂಬರ್​ನಲ್ಲಿ ನಿಗದಿಯಾಗಿತ್ತು. ಆದರೆ, ಅಂದು ಕೊರೊನಾ ಏರಿಕೆ ದರ ಹೆಚ್ಚಿದ್ದರಿಂದ ಡಿಸೆಂಬರ್​ಗೆ ಮುಂದೂಡಲಾಗಿತ್ತು.

"ಬಿಎಫ್​ಐನ ರಾಜ್ಯ ಸಂಸ್ಥೆಗಳು ರಿಟರ್ನಿಂಗ್ ಆಫೀಸರ್​ ಜಸ್ಟೀಸ್​ ರಾಜೇಶ್​ ಟಂಡನ್​ ಅವರಿಗೆ ಪತ್ರ ಬರೆದಿದ್ದು, ಪ್ರಸ್ತುತ ಕೋವಿಡ್​-19 ಸಾಂಕ್ರಾಮಿಕದ ಸಮಯದಲ್ಲಿ ಚುನಾವಣೆ ಮುಂದೂಡುವುದು ಉತ್ತಮ ಎಂದು ಮನವಿ ಮಾಡಿಕೊಂಡಿವೆ" ಎಂದು ಬಿಎಫ್​ಐನ ಅಧ್ಯಕ್ಷ ಅಜಯ್ ಸಿಂಗ್​ ಮಾಹಿತಿ ನೀಡಿದ್ದಾರೆ. ರಾಜ್ಯ ಸಂಸ್ಥೆಗಳ ಮನವಿ ಪುರಸ್ಕರಿಸಿದ್ದು, ಸಾಮಾನ್ಯ ಸಭೆ ಮತ್ತು ಚುನಾವಣೆಯನ್ನು ಮುಂದೂಡಲು ರಿಟರ್ನಿಂಗ್ ಆಫೀಸರ್​ ಶಿಪಾರಸು ಮಾಡಿದ್ದಾರೆ. ಇದನ್ನು ಭಾರತೀಯ ಒಲಿಂಪಿಕ್ಸ್ ಒಕ್ಕೂಟ ಕೂಡ ಖಚಿತ ಪಡಿಸಿದೆ ಎಂದು ತಿಳಿದು ಬಂದಿದೆ.

ಆದರೆ, ಕ್ರೀಡಾ ಸಚಿವಾಲಯದಿಂದ ಮಾನ್ಯತೆ ಪಡೆಯಬೇಕಾದ್ರೆ, ಬಿಎಫ್​ಐ ಈ ವರ್ಷದ ಅಂತ್ಯದೊಳಗೆ ಚುನಾವಣೆ ನಡೆಸಬೇಕಿದೆ. ಪ್ರಸ್ತುತ ಚುನಾವಣೆಯನ್ನು ಮುಂದೂಡಲಾಗಿದ್ದು, ಮುಂದಿನ ಚುನಾವಣೆಯ ದಿನಾಂಕವನ್ನು ಫೆಡರೇಷನ್​ ಖಚಿತಪಡಿಸಿಲ್ಲ. ಹಾಲಿ ಅಧ್ಯಕ್ಷ ಅಜಯ್ ಸಿಂಗ್ ಡಿಸೆಂಬರ್​ 2ರಂದು ಚುನಾವಣೆಗೆ ನಾಮನಿರ್ದೇಶನ ಮಾಡಿದ್ದಾರೆ. ಅವರು ಮುಂಬೈ ಕ್ರಿಕೆಟ್​ ಅಸೋಸಿಯೇಷನ್​ ಮಾಜಿ ಅಧ್ಯಕ್ಷ ಹಾಗೂ ಬಿಜೆಪಿ ಲೀಡರ್​ ಆಶೀಷ್​​ ಶೆಲರ್​ ಅವರ ವಿರುದ್ಧ ಪೈಪೋಟಿ ನಡೆಸಲಿದ್ದಾರೆ.

ABOUT THE AUTHOR

...view details