ಕರ್ನಾಟಕ

karnataka

ETV Bharat / sports

Tokyo Olympics boxing: ಮೊದಲ ಸುತ್ತಿನಲ್ಲೇ ಸೋಲುಕಂಡು ನಿರಾಸೆ ಅನುಭವಿಸಿದ ವಿಕಾಸ್ ಕ್ರಿಶನ್ - ಟೋಕಿಯೋ ಒಲಿಂಪಿಕ್ 2021

ಕೊಕುಗಿಕಾನ್​ ಅರೆನಾದಲ್ಲಿ ನಡೆದ ಪಂದ್ಯದಲ್ಲಿ 29 ವರ್ಷದ ಭಾರತೀಯ ಬಾಕ್ಸರ್​ ಜಪಾನ್​ನ ಮೆನ್ಸಾ ಒಕಾಜಾವಾ ವಿರುದ್ಧ 0-5ರಲ್ಲಿ ಸೋಲು ಕಂಡರು.

Tokyo Olympics boxing
ವಿಕಾಸ್ ಕ್ರಿಶನ್​ಗೆ ಸೋಲು

By

Published : Jul 24, 2021, 5:12 PM IST

ಟೋಕಿಯೋ: ಭಾರತದ ಸ್ಟಾರ್ ಬಾಕ್ಸರ್​ ವಿಕಾಶ್ ಕ್ರಿಶನ್ ಟೋಕಿಯೋ ಒಲಿಂಪಿಕ್ಸ್​ನಲ್ಲಿ ಮೊದಲ ಸುತ್ತಿನ ವಾಲ್ಟರ್​ವೇಟ್​ ವಿಭಾಗದಲ್ಲಿ ಸೋಲು ಕಂಡು ನಿರಾಸೆಯನುಭವಿಸಿದ್ದಾರೆ.

ಕೊಕುಗಿಕಾನ್​ ಅರೆನಾದಲ್ಲಿ ನಡೆದ ಪಂದ್ಯದಲ್ಲಿ 29 ವರ್ಷದ ಭಾರತೀಯ ಬಾಕ್ಸರ್​ ಜಪಾನ್​ನ ಮೆನ್ಸಾ ಒಕಾಜಾವಾ ವಿರುದ್ಧ 0-5ರಲ್ಲಿ ಸೋಲು ಕಂಡರು.

ಮೊದಲ ಸುತ್ತಿನಲ್ಲಿ ಎಲ್ಲ 5 ತೀರ್ಪುಗಾರರು ಜಪಾನ್​ ಬಾಕ್ಸರ್​ಗೆ 10 ಅಂಕ ನೀಡಿದರೆ, ವಿಕಾಶ್​ಗೆ ಎಲ್ಲರೂ 9 ಅಂಕ ನೀಡಿದರು. ಹಾಗಾಗಿ ಮೊದಲ ಸುತ್ತಿನಲ್ಲೇ ಹಿನ್ನಡೆಯನುಭವಿಸಿದರು. ನಂತರ ಎರಡನೇ ಸುತ್ತಿನಲ್ಲೂ ಅದೇ ಮುಂದುವರಿಯಿತು. ಕೊನೆಯ ಹಾಗೂ ನಿರ್ಣಾಯಕ ಸುತ್ತಿನಲ್ಲಿ ಕ್ರಿಶನ್ ಜಪಾನ್ ಎದುರಾಳಿಯನ್ನು ಮಣಿಸಲು ಸಾಧ್ಯವಾಗದ ಕಾರಣ ಟೋಕಿಯೋ ಒಲಿಂಪಿಕ್ಸ್​ನಿಂದ ಹೊರಬಿದ್ದರು.

ಭಾನುವಾರದ ಪಂದ್ಯಗಳಲ್ಲಿ ಮೇರಿ ಕೋಮ್​ ಮತ್ತು ಮನೀಶ್ ಕೌಶಿಕ್ ಕಣಕ್ಕಿಳಿಯಲಿದ್ದಾರೆ. ಪದಕ ಭರವಸೆಯ ಬಾಕ್ಸರ್​ ಅಮಿತ್ ಪಂಘಲ್​ಗೆ ಮೊದಲ ಸುತ್ತಿನಲ್ಲಿ ಬೈ ಸಿಕ್ಕಿದೆ.

ಇದನ್ನು ಓದಿ:Tokyo Olympics: ಈ ಬೆಳ್ಳಿ ಪದಕ ಇಡೀ ದೇಶಕ್ಕೆ ಅರ್ಪಣೆ : ಮೀರಾಬಾಯಿ ಚಾನು

ABOUT THE AUTHOR

...view details