ಟೋಕಿಯೋ: ಭಾರತದ ಉದಯೋನ್ಮುಖ ಬಾಕ್ಸರ್ ಮನೀಶ್ ಕೌಶಿಕ್(63ಕೆಜಿ) ಟೋಕಿಯೋ ಒಲಿಂಪಿಕ್ಸ್ನ ಮೊದಲ ಸುತ್ತಿನಲ್ಲೇ ಸೋತು ಹೊರಬಿದ್ದಿದ್ದಾರೆ.
ಮನೀಶ್ ತಮ್ಮ ಮೊದಲ ಸುತ್ತಿನ ಪಂದ್ಯದಲ್ಲಿ ಗ್ರೇಟ್ ಬ್ರಿಟನ್ನ ಲ್ಯೂಕ್ ಮೆಕಾರ್ಕಮ್ ವಿರುದ್ಧ ಪುರುಷರ ಲೈಟ್ವೇಟ್ ಬಾಕ್ಸಿಂಗ್ ವಿಭಾಗದಲ್ಲಿ 4-1 ರಲ್ಲಿ ಸೋಲು ಕಂಡರು.
ಕಾಮನ್ವೆಲ್ತ್ ಗೇಮ್ಸ್ನ ಬೆಳ್ಳಿ ಪದಕ ವಿಜೇತ ಕೌಶಿಕ್ ಮೊದಲ ಸುತ್ತಿನಲ್ಲಿ ಸೋಲು ಕಂಡರೂ ಎರಡನೇ ಸುತ್ತಿನಲ್ಲಿ 3-2ರಲ್ಲಿ ಗೆಲ್ಲುವ ಮೂಲಕ ತಿರುಗೇಟು ನೀಡಿದ್ದರು, ಆದರೆ ನಿರ್ಣಾಯಕ ಸುತ್ತಿನಲ್ಲಿ ಬ್ರಿಟನ್ ಆಟಗಾರ ಸಂಪೂರ್ಣ ಪ್ರಾಬಲ್ಯ ಸಾಧಿಸಿ ಭಾರತೀಯ ಬಾಕ್ಸರ್ ವಿರುದ್ಧ ಗೆಲುವು ಸಾಧಿಸಿದರು.