ಕಾಸ್ಟೆಲೊನ್: ಏಷ್ಯನ್ ಚಾಂಪಿಯನ್ ಪೂಜಾ ರಾಣಿ (75ಕೆ.ಜಿ) ಸ್ಪೇನ್ನ ಕ್ಯಾಸ್ಟೆಲ್ಲನ್ನಲ್ಲಿ ನಡೆಯುತ್ತಿರುವ 35ನೇ ಬಾಕ್ಸಮ್ ಇಂಟರ್ನ್ಯಾಷನಲ್ ಬಾಕ್ಸಿಂಗ್ ಟೂರ್ನಮೆಂಟ್ನಲ್ಲಿ ಸೆಮಿಫೈನಲ್ ಪ್ರವೇಶಿಸುವ ಮೂಲಕ ಪದಕ ಖಚಿತಪಡಿಸಿದ್ದಾರೆ. ಆದರೆ ಎರಡು ಬಾರಿಯ ಕಂಚಿನ ಪದಕ ವಿಜೇತ ಲೊವ್ಲಿನಾ ಬೊರ್ಗೊಹೈನ್ ಕ್ವಾರ್ಟರ್ ಫೈನಲ್ನಲ್ಲಿ ಸೋಲು ಕಾಣುವ ಮೂಲಕ ಟೂರ್ನಿಯಿಂದ ಹೊರಬಿದ್ದರು.
ಬುಧವಾರ ತಡರಾತ್ರಿ ನಡೆದ ಪಂದ್ಯದಲ್ಲಿ ಒಲಿಂಪಿಕ್ ಬಾಂಡ್ ಬಾಕ್ಸರ್ ಪೂಜಾ ಇಟಲಿಯ ಅಸುಂಟ ಕ್ಯಾನ್ಫೋರಾ ವಿರುದ್ಧ ಗೆಲ್ಲುವ ಮೂಲಕ ಸೆಮಿಫೈನಲ್ ಪ್ರವೇಶ ಪಡೆದರು.