ಕರ್ನಾಟಕ

karnataka

ETV Bharat / sports

ಯೂತ್​ & ಜೂನಿಯರ್ ಬಾಕ್ಸಿಂಗ್ : ಸೆಮಿಫೈನಲ್ ಪ್ರವೇಶಿಸಿ ಮತ್ತೆ 4 ಪದಕ ಖಚಿತಪಡಿಸಿದ ಭಾರತೀಯ ಬಾಕ್ಸರ್ಸ್ - ಎಎಸ್​ಬಿಸಿ ಯೂತ್ ಅಂಡ್​ ಜೂನಿಯರ್ ಬಾಕ್ಸಿಂಗ್​ ಚಾಂಪಿಯನ್​ಶಿಪ್

ವಿಶ್ವ ಯೂತ್​ ಚಾಂಪಿಯನ್​ಶಿಪ್​ನಲ್ಲಿ ಕಂಚಿನ ಪದಕ ಬಿಶ್ವಾಮಿತ್ರ ಕಜಕಸ್ತಾನದ ಕೆಂಜ್ ಮುರಾತಲ್ ವಿರುದ್ಧ 5-0ಯಲ್ಲಿ ಗೆದ್ದು ಸೆಮಿಫೈನಲ್​ ಪ್ರವೇಶಿಸಿದರು..

Asian Youth and Junior Boxing
ಯೂತ್​ & ಜೂನಿಯರ್ ಬಾಕ್ಸಿಂಗ್

By

Published : Aug 22, 2021, 9:16 PM IST

ನವದೆಹಲಿ : ಭಾರತದ ಬಿಶ್ವಾಮಿತ್ರ ಚೋಂಗ್‌ಥಮ್(51 ಕೆಜಿ) ಹಾಗೂ ಇತರೆ ಮೂವರು ಬಾಕ್ಸರ್​ಗಳು ದುಬೈನಲ್ಲಿ ನಡೆಯುತ್ತಿರುವ ಎಎಸ್​ಬಿಸಿ ಯೂತ್ ಅಂಡ್​ ಜೂನಿಯರ್ ಬಾಕ್ಸಿಂಗ್​ ಚಾಂಪಿಯನ್​ಶಿಪ್​ನಲ್ಲಿ ಭಾನುವಾರ ಸೆಮಿಫೈನಲ್​ ಪ್ರವೇಶಿಸುವ ಮೂಲಕ ಕನಿಷ್ಠ ಕಂಚಿನ ಪದಕ ಖಚಿತಪಡಿಸಿಕೊಂಡಿದ್ದಾರೆ.

ವಿಶ್ವ ಯೂತ್​ ಚಾಂಪಿಯನ್​ಶಿಪ್​ನಲ್ಲಿ ಕಂಚಿನ ಪದಕ ಬಿಶ್ವಾಮಿತ್ರ ಕಜಕಸ್ತಾನದ ಕೆಂಜ್ ಮುರಾತಲ್ ವಿರುದ್ಧ 5-0ಯಲ್ಲಿ ಗೆದ್ದು ಸೆಮಿಫೈನಲ್​ ಪ್ರವೇಶಿಸಿದರು. ಇವರಲ್ಲದೆ ​ಅಭಿಮನ್ಯು ಲೌರಾ (92 ಕೆಜಿ), ದೀಪಕ್‌ (75 ಕೆಜಿ) ಹಾಗೂ ಮಹಿಳೆಯರ 57 ಕೆಜಿ ವಿಭಾಗದಲ್ಲಿ ಪ್ರೀತಿ ನಾಲ್ಕರ ಘಟ್ಟಕ್ಕೆ ಪ್ರವೇಶಿಸಿದರು.

ಮಿಡ್ಲ್‌ವೇಟ್‌ ವಿಭಾಗದ ಕ್ವಾರ್ಟರ್‌ಫೈನಲ್‌ನಲ್ಲಿ ದೀಪಕ್‌ ಇರಾಕ್‌ನ ಧುರ್‌ಗಮ್‌ ಕರೀಂ ಎದುರು ಜಯ ಸಾಧಿಸಿದರು. ರಾಷ್ಟ್ರೀಯ ಚಾಂಪಿಯನ್‌ ಆಗಿರುವ ಹರಿಯಾಣದ ಅಭಿಮನ್ಯು ಕಿರ್ಗಿಸ್ತಾನದ ತೆನಿಬೆಕೊವ್‌ ಸಂಜಾರ್ ವಿರುದ್ಧ, ಪ್ರೀತಿ ಅವರು ಮಂಗೋಲಿಯಾದ ತಗ್ಸ್‌ಜಾರ್ಗಲ್‌ ನೊಮಿನ್‌ ವಿರುದ್ಧ ವಿಜಯ ಸಾಧಿಸಿದರು.

2ನೇ ದಿನದ ಸ್ಪರ್ಧೆಯಲ್ಲಿ ಆದಿತ್ಯ ಜಂಘು ಸೋಲು ಕಂಡರು. ಅವರು 86 ಕೆಜಿ ವಿಭಾಗದ ಕ್ವಾರ್ಟರ್​ ಫೈನಲ್​ನಲ್ಲಿ ಕಜಕಸ್ತಾನದ ತೆಮ್ರಲಾನ್‌ ಮುಕತಯೆವ್ ವಿರುದ್ಧ ಪರಾಭವಗೊಂಡರು.

ಇದನ್ನು ಓದಿ: ಏಷ್ಯನ್ ಯೂತ್ ಬಾಕ್ಸಿಂಗ್ ಚಾಂಪಿಯನ್​ಶಿಪ್​: ಭಾರತಕ್ಕೆ 3 ಪದಕ ಖಚಿತ ಪಡಿಸಿದ ಯುವ ಬಾಕ್ಸರ್​ಗಳು

ABOUT THE AUTHOR

...view details