ಲುಸೈಲ್ (ಕತಾರ್):ಅರ್ಜೆಂಟೀನಾ ಮತ್ತು ಮೆಕ್ಸಿಕೋ ನಡುವೆ ನಿನ್ನೆ ನಡೆದ ಪಂದ್ಯ ಅದ್ಭುತ ಕ್ಷಣಗಳಿಗೆ ಸಾಕ್ಷಿಯಾಯಿತು. ತನ್ನ ಮೊದಲ ಪಂದ್ಯದಲ್ಲಿ ಸೌದಿ ಅರೇಬಿಯಾ ವಿರುದ್ಧ ಸೋತು ಆಘಾತ ಅನುಭವಿಸಿದ ಅರ್ಜೆಂಟೀನಾ ನಿನ್ನೆ ಮೆಕ್ಸಿಕೊ ವಿರುದ್ದ 2-0 ಗೋಲುಗಳ ಜಯ ಸಾಧಿಸಿ ಮರಳಿ ಲಯ ಕಂಡುಕೊಂಡಿತು.
ಮೆಕ್ಸಿಕೋ ವಿರುದ್ಧ ಅರ್ಜೆಂಟೀನಾ ಗೆಲುವು: ಮೆಸ್ಸಿ ಆಟ ನೋಡಲು ಕ್ರೀಡಾಂಗಣದಲ್ಲಿ ಜನಸಾಗರ! - ETv Bharat kannada news
ಅರ್ಜೆಂಟೀನಾ ತಂಡದ ಆಟಗಾರ, ವಿಶ್ವಶ್ರೇಷ್ಠ ಕಾಲ್ಚೆಂಡಿಗ ಲಿಯೋನೆಲ್ ಮೆಸ್ಸಿ ಅವರ ಆಟವನ್ನು ನೋಡಲು ನಿನ್ನೆ ಕ್ರೀಡಾಂಗಣದಲ್ಲಿ 88,966 ಪ್ರೇಕ್ಷಕರು ಸೇರಿದ್ದರು.
![ಮೆಕ್ಸಿಕೋ ವಿರುದ್ಧ ಅರ್ಜೆಂಟೀನಾ ಗೆಲುವು: ಮೆಸ್ಸಿ ಆಟ ನೋಡಲು ಕ್ರೀಡಾಂಗಣದಲ್ಲಿ ಜನಸಾಗರ! Lionel Messi played in front of 88966 spectators](https://etvbharatimages.akamaized.net/etvbharat/prod-images/768-512-17042749-thumbnail-3x2-mh-.jpg)
88966 ಪ್ರೇಕ್ಷಕರ ಮುಂದೆ ಆಡಿದ ಲಿಯೋನೆಲ್ ಮೆಸ್ಸಿ
ಅಷ್ಟೇ ಅಲ್ಲ, ನಿನ್ನೆ ತಮ್ಮ ನೆಚ್ಚಿನ ತಾರೆ ಲಿಯೋನೆಲ್ ಮೆಸ್ಸಿ ಅವರ ಆಟವನ್ನು ಕಣ್ತುಂಬಿಕೊಳ್ಳಲು ಕ್ರೀಡಾಂಗಣದಲ್ಲಿ 88,966 ಪ್ರೇಕ್ಷಕರು ಸೇರಿದ್ದರು. ಈ ಮೂಲಕ 28 ವರ್ಷದ ಹಿಂದಿನ ಇತಿಹಾಸ ಮರುಕಳಿಸಿತು. 1994 ರಲ್ಲಿ ಬ್ರೆಜಿಲ್ ಮತ್ತು ಇಟಲಿ ನಡುವೆ ಕ್ಯಾಲಿಫೋರ್ನಿಯಾದ ಪಸಾಡೆನಾ ರೋಸ್ ಬೌಲ್‌ನಲ್ಲಿ ನಡೆದ ಫೈನಲ್ ಪಂದ್ಯಕ್ಕೆ 91,194 ಫುಟ್ಬಾಲ್ ಅಭಿಮಾನಿಗಳು ಸಾಕ್ಷಿಯಾಗಿದ್ದರು.
ಇದನ್ನೂ ಓದಿ :ಟ್ಯುನೀಷಿಯಾಗೆ 'ತಲೆ'ನೋವಾದ ಮಿಚೆಲ್ ಡ್ಯೂಕ್.. ಆಸ್ಟ್ರೇಲಿಯಾಗೆ ಹೆಡರ್ ವಿನ್
Last Updated : Nov 27, 2022, 10:33 AM IST