ಕರ್ನಾಟಕ

karnataka

ETV Bharat / sports

ಫೆನ್ಸಿಂಗ್​ನಲ್ಲಿ ಮೊದಲ ಭಾರತೀಯ ಪೆನ್ಸರ್​ ಆಗಿ ಒಲಿಂಪಿಕ್ಸ್​ಗೆ ಅರ್ಹತೆ ಗಿಟ್ಟಿಸಿಕೊಂಡ ಭವಾನಿ ದೇವಿ..

ಭವಾನಿ ದೇವಿ ಅಧಿಕೃತ ಶ್ರೇಯಾಂಕ ವಿಧಾನದ ಮೂಲಕ ಅರ್ಹತೆ ಪಡೆದಿದ್ದಾರೆ. ಏಪ್ರಿಲ್ 5, 2021ರ ವೇಳೆಗೆ ವಿಶ್ವ ರ್ಯಾಂಕಿಂಗ್​ಗಳನ್ನು ಆಧರಿಸಿ ಏಷ್ಯಾ ಮತ್ತು ಒಷಿಯಾನಿಯಾ ಪ್ರದೇಶಗಳಿಗೆ ಎರಡು ವೈಯಕ್ತಿಕ ಅವಕಾಶ ದೊರೆತಿದೆ. ಇದರಲ್ಲಿ 45ನೇ ಶ್ರೇಯಾಂಕಿತರಾಗಿರುವ ಭವಾನಿ ಒಂದು ಸ್ಥಾನ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ..

ಟೋಕಿಯೋ ಒಲಿಂಪಿಕ್ಸ್​
ಭವಾನಿ ದೇವಿ

By

Published : Mar 14, 2021, 9:27 PM IST

ಚೆನ್ನೈ :ಕತ್ತಿ ವರಸೆ ಅಥವಾ ಫೆನ್ಸಿಂಗ್​ ಟೋಕಿಯೊ ಒಲಿಂಪಿಕ್ ಕ್ರೀಡಾಕೂಟಕ್ಕೆ ಅರ್ಹತೆ ಪಡೆದ ಮೊದಲ ಭಾರತೀಯ ಫೆನ್ಸರ್ ಎಂಬ ಹೆಗ್ಗಳಿಕೆಗೆ ತಮಿಳುನಾಡಿನ ಸಿ ಎ ಭವಾನಿ ದೇವಿ ಪಾತ್ರರಾಗಿದ್ದಾರೆ.

ಭವಾನಿ ದೇವಿ ಅಧಿಕೃತ ಶ್ರೇಯಾಂಕ ವಿಧಾನದ ಮೂಲಕ ಅರ್ಹತೆ ಪಡೆದಿದ್ದಾರೆ. ಏಪ್ರಿಲ್ 5, 2021ರ ವೇಳೆಗೆ ವಿಶ್ವ ರ್ಯಾಂಕಿಂಗ್‌ಗಳನ್ನು ಆಧರಿಸಿ ಏಷ್ಯಾ ಮತ್ತು ಒಷಿಯಾನಿಯಾ ಪ್ರದೇಶಗಳಿಗೆ ಎರಡು ವೈಯಕ್ತಿಕ ಅವಕಾಶ ದೊರೆತಿದೆ. ಇದರಲ್ಲಿ 45ನೇ ಶ್ರೇಯಾಂಕಿತರಾಗಿರುವ ಭವಾನಿ ಒಂದು ಸ್ಥಾನ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಶ್ರೇಯಾಂಕ ಪಟ್ಟಿ ಬಿಡುಗಡೆಯಾಗುತ್ತಿದ್ದಂತೆ 27 ವರ್ಷದ ಭಾರತೀಯ ಫೆನ್ಸರ್​ ಅರ್ಹತೆ ಖಚಿತವಾಗಿದ್ದು, ಕೇಂದ್ರ ಕ್ರೀಡಾ ಸಚಿವ ಕಿರಣ್​ ರಿಜಿಜು ಶುಭ ಕೋರಿದ್ದಾರೆ.

"ಟೋಕಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದಿರುವ ಭಾರತೀಯ ಫೆನ್ಸರ್ ಭವಾನಿ ದೇವಿ ಅವರಿಗೆ ಅಭಿನಂದನೆಗಳು! ಈ ಸಾಧನೆ ಮಾಡಿದ ಮೊದಲ ಭಾರತೀಯ ಫೆನ್ಸರ್ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾಗಿದ್ದಾರೆ" ಎಂದು ರಿಜಿಜು ಟ್ವೀಟ್ ಮಾಡಿ ಶುಭಾಶಯ ಕೋರಿದ್ದಾರೆ.

ABOUT THE AUTHOR

...view details