ನವದೆಹಲಿ: ಭಾರತೀಯ ಬಾಕ್ಸಿಂಗ್ ಫೆಡರೇಶನ್ (ಬಿಎಫ್‌ಐ) ಶುಕ್ರವಾರ ಐಬಿಎ ಮಹಿಳಾ ವಿಶ್ವ ಚಾಂಪಿಯನ್‌ಶಿಪ್ 2023 ಗಾಗಿ ಮ್ಯಾಸ್ಕಾಟ್ 'ವೀರಾ' ಅನ್ನು ಅನಾವರಣಗೊಳಿಸಿದೆ. ಮಾರ್ಚ್ 15 ರಿಂದ 26 ರವರೆಗೆ ಇಂದಿರಾಗಾಂಧಿ ಕ್ರೀಡಾ ಸಂಕೀರ್ಣದಲ್ಲಿ ಚಾಂಪಿಯನ್‌ಶಿಪ್ ನಡೆಯಲಿದೆ. ಕೇಂದ್ರ ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವ ಅನುರಾಗ್ ಸಿಂಗ್ ಠಾಕೂರ್, ಬಿಎಫ್‌ಐ ಅಧ್ಯಕ್ಷ ಅಜಯ್ ಸಿಂಗ್ ಅವರ ಸಮ್ಮುಖದಲ್ಲಿ ಚೀತಾ ಎಂಬ ಹೆಸರಿನ ಮ್ಯಾಸ್ಕಾಟ್ ವೀರವನ್ನು ಅನಾವರಣಗೊಳಿಸಲಾಯಿತು. ಮ್ಯಾಸ್ಕಾಟ್ ವೀರ ಶಕ್ತಿ, ಶೌರ್ಯ, ಶೌರ್ಯ ಮತ್ತು ಧೈರ್ಯದ ಸಂಕೇತವಾಗಿದೆ.
"ಚೀತಾವು ಪ್ರಪಂಚದಲ್ಲೇ ಅತ್ಯಂತ ವೇಗವಾಗಿ ಓಡುವ ಪ್ರಾಣಿಯಾಗಿದ್ದು, ಅದರ ವೇಗಕ್ಕೆ ಹೆಸರುವಾಸಿಯಾಗಿದೆ. ಶಕ್ತಿ ಮತ್ತು ಧೈರ್ಯವನ್ನು ಸಂಕೇತಿಸುವ ವೀರಾ ಮಹಿಳಾ ಬಾಕ್ಸರ್‌ಗಳನ್ನು ಪ್ರತಿನಿಧಿಸುತ್ತಾರೆ. ದೇಶದಾದ್ಯಂತ ಯುವ ಬಾಕ್ಸರ್‌ಗಳು ಮತ್ತು ತರಬೇತುದಾರರನ್ನು ಇಲ್ಲಿಗೆ ಕರೆತರಲು ಬಿಎಫ್‌ಐ ಶಕ್ತಿಮೀರಿ ಪ್ರಯತ್ನಿಸಲಿದೆ. ಟೂರ್ನಿಯಲ್ಲಿ ವಿಶ್ವದ ದಿಗ್ಗಜ ಬಾಕ್ಸರ್‌ಗಳಿಂದ ಕಲಿಯುವ ಅವಕಾಶವಿರುತ್ತದೆ. ಭಾರತವು ಕ್ರೀಡಾ ಜಗತ್ತಿನಲ್ಲಿ ಶಕ್ತಿಯಾಗಿ ಬೆಳೆಸಲು ಅನುರಾಗ್ ಸಿಂಗ್ ಠಾಕೂರ್ ಪ್ರಯತ್ನಿಸುತ್ತಿದ್ದಾರೆ. ಬಾಕ್ಸಿಂಗ್ನಿಂದ ಕೊಡುಗೆ ನೀಡುಲು ನಾವು ಪ್ರಯತ್ನಿಸುತ್ತಿದ್ದೇವೆ" ಎಂದು ಈ ವೇಳೆ ಬಿಎಫ್‌ಐ ಅಧ್ಯಕ್ಷ ಅಜಯ್ ಸಿಂಗ್ ಹೇಳಿದರು
ಬರ್ಮಿಂಗ್ಹ್ಯಾಮ್ 2022 ಕಾಮನ್ವೆಲ್ತ್ ಗೇಮ್ಸ್ ಚಿನ್ನದ ಪದಕ ವಿಜೇತೆ ನೀತು ಘಂಘಾಸ್ ಕೂಡ 48 ಕೆಜಿ ವಿಭಾಗದಲ್ಲಿ ದೇಶವನ್ನು ಪ್ರತಿನಿಧಿಸಲಿದ್ದಾರೆ. 2022ರ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಕಂಚಿನ ಪದಕ ಗೆದ್ದಿದ್ದ ಮನೀಶಾ ಮೌನ್ 57 ಕೆಜಿ ಫೆದರ್ ವೇಟ್ ವಿಭಾಗದಲ್ಲಿ ದೇಶವನ್ನು ಪ್ರತಿನಿಧಿಸಲಿದ್ದಾರೆ. ಬರ್ಮಿಂಗ್ಹ್ಯಾಮ್ ಕಾಮನ್ವೆಲ್ತ್ ಗೇಮ್ಸ್ 2022 ರ ಕಂಚಿನ ಪದಕ ವಿಜೇತೆ ಜಾಸ್ಮಿನ್ ಲಂಬೋರಿಯಾ, 2022 ರ ಆವೃತ್ತಿಯಲ್ಲಿ ಕ್ವಾರ್ಟರ್-ಫೈನಲಿಸ್ಟ್ ಆಗಿದ್ದಾರೆ. ಸನಮಾಚಾ ಚಾನು 70 ಕೆಜಿ ಮತ್ತು ಪ್ರೀತಿ 54 ಕೆಜಿಯಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ. ಪ್ರೀತಿ 2022 ರ ಏಷ್ಯನ್ ಚಾಂಪಿಯನ್‌ಶಿಪ್‌ನಲ್ಲಿ ಕಂಚಿನ ಪದಕವನ್ನು ಗೆದ್ದರೆ, ಸನ್ಮಾಚ 2021 ಯೂತ್ ವರ್ಲ್ಡ್ ಚಾಂಪಿಯನ್ ಆಗಿದ್ದರು, ಇತ್ತೀಚೆಗೆ ಅವರ ವಿಭಾಗದಲ್ಲಿ ರಾಷ್ಟ್ರೀಯ ಚಾಂಪಿಯನ್ ಆಗಿದ್ದರು. ಇವರೆಲ್ಲ ಈ ಬಾರಿಯ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ.
ಸ್ವೀಟಿ ಬೂರಾ 81 ಕೆಜಿ ತೂಕ ವಿಭಾಗದಲ್ಲಿ ಸ್ಪರ್ಧಿಸಲಿದ್ದಾರೆ. 2014ರಲ್ಲಿ ದಕ್ಷಿಣ ಕೊರಿಯಾದಲ್ಲಿ ನಡೆದ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಬುರಾ ಬೆಳ್ಳಿ ಪದಕ ಗೆದ್ದಿದ್ದರು. ಅವರು ಪ್ರಸ್ತುತ ಏಷ್ಯನ್ ಮತ್ತು ರಾಷ್ಟ್ರೀಯ ಚಾಂಪಿಯನ್ ಆಗಿದ್ದಾರೆ. ಯುವ ವಿಶ್ವ ಚಾಂಪಿಯನ್‌ಗಳಾದ ಸಾಕ್ಷಿ ಚೌಧರಿ (52 ಕೆಜಿ) ಮತ್ತು ಶಶಿ ಚೋಪ್ರಾ (63 ಕೆಜಿ) ಭಾಗವಗಹಿಸುತ್ತಿದ್ದಾರೆ. 2019 ರ ದಕ್ಷಿಣ ಏಷ್ಯಾ ಕ್ರೀಡಾಕೂಟದ ಚಿನ್ನದ ಪದಕ ವಿಜೇತೆ ಮಂಜು ಬಂಬೋರಿಯಾ 66 ಕೆಜಿ ವಿಭಾಗದಲ್ಲಿ ಭಾಗವಹಿಸಲಿದ್ದಾರೆ. 81 ಕೆಜಿ+ ಹೆವಿವೇಯ್ಟ್ ವಿಭಾಗದಲ್ಲಿ ಭಾರತದ ಪದಕ ನಿರೀಕ್ಷೆಯಲ್ಲಿರುವ ರಾಷ್ಟ್ರೀಯ ಚಾಂಪಿಯನ್ ನೂಪುರ್ ಶೆರಾನ್ ಕೂಡ ನೋಂದಾಯಿಸಿಕೊಂಡಿದ್ದಾರೆ. ಈ ವರೆಗೆ ಚಾಂಪಿಯನ್‌ಶಿಪ್‌ಗೆ 74 ದೇಶದಿಂದ ಮತ್ತು 12 ಭಾರತೀಯರು ಸೇರಿದಂತೆ ಒಟ್ಟು 350 ಬಾಕ್ಸರ್‌ಗಳು ನೋಂದಾಯಿಸಿಕೊಂಡಿದ್ದಾರೆ.
ಇದನ್ನೂ ಓದಿ:ಸಾನಿಯಾಗೆ ಪ್ರಧಾನಿಯಿಂದ ಪತ್ರ: ಟ್ವಿಟರ್ನಲ್ಲಿ ಧನ್ಯವಾದ ಅರ್ಪಿಸಿದ ಮೂಗುತಿ ಸುಂದರಿ