ಕರ್ನಾಟಕ

karnataka

ETV Bharat / sports

ಗೌರವ್​ ಸೋಲಂಕಿ, ಸೋನಿಯಾ, ಸಿಮ್ರಾನ್​ಜಿತ್ ಕೌರ್​ ಹೆಸರು ಅರ್ಜುನ್ ಅವಾರ್ಡ್​ಗೆ ಶಿಫಾರಸು - ಕ್ರೀಡಾ ಪ್ರಶಸ್ತಿ

ಸಿಮ್ರಾನ್​ಜಿತ್ ಕೌರ್​(60ಕೆಜಿ) ವಿಭಾಗದಲ್ಲಿ 2018ರ ವಿಶ್ವ ಚಾಂಪಿಯನ್​ಶಿಪ್​ನಲ್ಲಿ ಕಂಚಿನ ಪದಕ ಪಡೆದಿದ್ದರು. ಅಲ್ಲದೆ ಇತರೆ 4 ಬಾಕ್ಸರ್​ಗಳೊಂದಿಗೆ ಟೋಕಿಯೋ ಒಲಿಂಪಿಕ್ಸ್​ಗೆ ಅರ್ಹತೆ ಪಡೆದಿದ್ದಾರೆ..

ಅರ್ಜುನ ಪ್ರಶಸ್ತಿ
ಅರ್ಜುನ ಪ್ರಶಸ್ತಿ

By

Published : Jul 3, 2021, 7:52 PM IST

ನವದೆಹಲಿ :ಬಾಕ್ಸಿಂಗ್ ಫೆಡರೇಷನ್ ಆಫ್ ಇಂಡಿಯಾ ಗೌರವ್​ ಸೋಲಂಕಿ, ಸೋನಿಯಾ ಮತ್ತು ಸಿಮ್ರಾನ್​ಜಿತ್ ಕೌರ್​ ಅವರ ಹೆಸರನ್ನು ಪ್ರತಿಷ್ಠಿತ ಅರ್ಜುನ ಪ್ರಶಸ್ತಿಗೆ ಶಿಫಾರಸು ಮಾಡಿದೆ. ಆದರೆ, ಫೆಡರೇಷನ್ ಅತ್ಯುನ್ನತ ಕ್ರೀಡಾ ಪ್ರಶಸ್ತಿಯಾದ ರಾಜೀವ್ ಗಾಂಧಿ ಖೇಲ್​ರತ್ನ ಪ್ರಶಸ್ತಿಗೆ ಯಾರ ಹೆಸರನ್ನು ಶಿಫಾರಸು ಮಾಡಿಲ್ಲ.

ಸಿಮ್ರಾನ್​ಜಿತ್ ಕೌರ್​(60ಕೆಜಿ) ವಿಭಾಗದಲ್ಲಿ 2018ರ ವಿಶ್ವ ಚಾಂಪಿಯನ್​ಶಿಪ್​ನಲ್ಲಿ ಕಂಚಿನ ಪದಕ ಪಡೆದಿದ್ದರು. ಅಲ್ಲದೆ ಇತರೆ 4 ಬಾಕ್ಸರ್​ಗಳೊಂದಿಗೆ ಟೋಕಿಯೋ ಒಲಿಂಪಿಕ್ಸ್​ಗೆ ಅರ್ಹತೆ ಪಡೆದಿದ್ದಾರೆ.

"ನಾವು ಅರ್ಜುನ ಪ್ರಶಸ್ತಿಗಾಗಿ ಗೌರವ್ ಸೋಲಂಕಿ, ಸೋನಿಯಾ ಮತ್ತು ಸಿಮ್ರಾನ್‌ಜಿತ್ ಕೌರ್ ಅವರ ಹೆಸರನ್ನು ಶಿಫಾರಸು ಮಾಡಿದ್ದೇವೆ. ಖೇಲ್ ರತ್ನಕ್ಕೆ ನಾವು ಯಾವುದೇ ಬಾಕ್ಸರ್​ಅನ್ನು ನಾಮನಿರ್ದೇಶನ ಮಾಡಿಲ್ಲ" ಎಂದು ಬಿಎಫ್‌ಐನ ಮೂಲಗಳು ಎಎನ್‌ಐಗೆ ತಿಳಿಸಿವೆ.

ಟೇಬಲ್ ಟೆನಿಸ್​ ಆಟಗಾರ್ತಿ ಮನಿಕ ಬಾತ್ರಾ, ರೋಹಿತ್ ಶರ್ಮಾ, ವಿನೇಶ್ ಪೋಗಟ್, ರಾಣಿ ರಾಂಪಾಲ್ ಮತ್ತು ಮರಿಯಪ್ಪನ್​ ಫಂಗವೇಲೂ ಅವರ ಹೆಸರನ್ನು ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿಗೆ ನಾಮ ನಿರ್ದೇಶನ ಮಾಡಲಾಗಿದೆ.

ಇದನ್ನು ಓದಿ:ದೇಶಿ ಕ್ರಿಕೆಟಿಗರಿಗೆ ಖುಷಿ ಸುದ್ದಿ ನೀಡಿದ ಬಿಸಿಸಿಐ!!

ABOUT THE AUTHOR

...view details