ಬೆಂಗಳೂರು: ಆರಂಭದಲ್ಲಿ ಅಬ್ಬರಿಸಿ ಅಂಕ ಪಟ್ಟಿಯಲ್ಲಿ ಪ್ರಾಬಲ್ಯ ಸಾಧಿಸಿದ್ದ ಬೆಂಗಳೂರು ಬುಲ್ಸ್, ಮಧ್ಯಂತರದಲ್ಲಿ ವೈಫಲ್ಯ ಅನುಭಿಸಿದೆ. ಇಂದು ತನ್ನ ಕೊನೆಯ ಪಂದ್ಯವನ್ನು ಹರಿಯಾಣ ಸ್ಟೀಲರ್ಸ್ ವಿರುದ್ಧ ಆಡಲಿದ್ದು, ಪ್ಲೇ ಆಫ್ ಪ್ರವೇಶಿಸಬೇಕಾದರೆ ಗೆಲುವು ಅನಿವಾರ್ಯವಾಗಿದೆ.
ಬುಲ್ಸ್ 21 ಪಂದ್ಯಗಳಲ್ಲಿ 10 ಗೆಲುವು 9 ಸೋಲು ಹಾಗೂ 2 ಸೋಲುಗಳೊಂದಿಗೆ 61 ಅಂಕ ಪಡೆದು 6ನೇ ಸ್ಥಾನದಲ್ಲಿದೆ. ಇತ್ತ ಸ್ಟೀಲರ್ಸ್ 20 ಪಂದ್ಯಗಳಿಂದ 10 ಗೆಲುವು, 7 ಸೋಲು ಮತ್ತು 3 ಟೈ ಸಾಧಿಸಿ 4ನೇ ಸ್ಥಾನದಲ್ಲಿದೆ.
12 ತಂಡಗಳಲ್ಲಿ 6 ತಂಡಗಳು ಮಾತ್ರ ಪ್ಲೇ ಆಫ್ ಪ್ರವೇಶಿಸಲಿವೆ. ಈ ಪಂದ್ಯವನ್ನು ಗೆದ್ದರೆ ಬುಲ್ಸ್ ಅಂಕ 66 ಆಗಲಿದ್ದು, ಫ್ಲೇ ಆಫ್ ಕನಸು ಉಳಿದುಕೊಳ್ಳಲಿದೆ. ಒಂದು ವೇಳೆ ಸೋತರೆ ಟೂರ್ನಿಯಿಂದ ಹೊರ ಬೀಳಲಿದೆ. ಈಗಾಗಲೇ ತಮಿಳ್ ತಲೈವಾಸ್, ತೆಲುಗು ಟೈಟನ್ಸ್, ಬೆಂಗಾಲ್ ವಾರಿಯರ್ಸ್ ಟೂರ್ನಿಯಿಂದ ಹೊರಬಿದ್ದ ತಂಡಗಳಾಗಿವೆ.