ಹೈದರಾಬಾದ್: 7ನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್‌ನಲ್ಲಿ ಹಾಲಿ ಚಾಂಪಿಯನ್ ಬೆಂಗಳೂರು ಬುಲ್ಸ್ ತಂಡ ತನ್ನಮೊದಲ ಪಂದ್ಯದಲ್ಲಿ ಪಾಟ್ನಾ ಪೈರೇಟ್ಸ್ ವಿರುದ್ಧ 34-32 ಅಂತರದಲ್ಲಿ ರೋಚಕ ಗೆಲುವು ದಾಖಲು ಮಾಡಿದೆ.
ಹೈದರಾಬಾದ್‌ನ ಗಚಿಬೌಲಿ ಒಳಾಂಗಣ ಕ್ರೀಡಾಂಗಣದಲ್ಲಿನಡೆದ ಪಂದ್ಯದಲ್ಲಿ ಉಭಯ ತಂಡಗಳು ಆರಂಭದಿಂದಲೇ ಆಕ್ರಮಣ ಹಾಗೂ ರಕ್ಷಣಾತ್ಮಕವಾಗಿ ಆಟಕ್ಕೆ ಮೊರೆ ಹೋದವು.
ಪ್ರೊ ಕಬಡ್ಡಿ ರೋಚಕ ಹಣಾಹಣಿಯಲ್ಲಿ ಗೆದ್ದ ಬೆಂಗಳೂರು ಬುಲ್ಸ್ ಬುಲ್ಸ್ ತಂಡದ ಪರ ಕ್ಯಾಪ್ಟನ್ ರೋಹಿತ್ ಕುಮಾರ್ ಹಾಗೂ ಕಳೆದ ವರ್ಷದ ಗೆಲುವಿನ ಹೀರೋ ಪವನ್ ಮುನ್ನಡೆ ತಂದುಕೊಟ್ಟರೆ, ಪಾಟ್ನಾ ತಂಡಕ್ಕೆ ಪರ್ದೀಪ್ ನರ್ವಾಲ್ ಉತ್ತರ ಆರಂಭ ನೀಡಿದರು. ಮೊದಲಾರ್ಧದಲ್ಲಿ ಪಾಟ್ನಾ 17 ಹಾಗೂ ಬುಲ್ಸ್ 13 ಅಂಕ ಗಳಿಸಿದ್ದವು. ತದನಂತರ ಎದುರಾಳಿ ತಂಡದ ಮೇಲೆ ಬುಲ್ಸ್ ಸವಾರಿ ನಡೆಸಿತು. ಹೀಗಾಗಿ ಬುಲ್ಸ್ ತಂಡ ಕೊನೆಯದಾಗಿ 34-32 ಅಂತರದಲ್ಲಿ ಗೆಲುವು ದಾಖಲು ಮಾಡುವ ಮೂಲಕ ಖಾತೆ ತೆರೆದಿದೆ. ಪ್ರೊ ಕಬಡ್ಡಿ ರೋಚಕ ಹಣಾಹಣಿಯಲ್ಲಿ ಗೆದ್ದ ಬೆಂಗಳೂರು ಬುಲ್ಸ್ ಬುಲ್ಸ್ ತಂಡ 18-22 ಅಂಕಗಳಿಂದ ಹಿನ್ನಡೆ ಅನುಭವಿಸಿ ಸೋಲಿನ ಸುಳಿಗೆ ಸಿಲುಕಿಕೊಂಡಿತ್ತು. ಆದರೆ ಪವನ್, ಮಹೇಂದ್ರ ಸಿಂಗ್ ಉತ್ತಮವಾಗಿ ಆಡಿ ತಂಡಕ್ಕೆ ಅಂಕ ತಂದುಕೊಟ್ಟರು.
ಒಂದು ಹಂತದಲ್ಲಿ ಉಭಯ ತಂಡ 24-24 ಅಂಕಗಳಿಂದ ಸಮಬಲ ಸಾಧಿಸಿದ್ದವು. ಆದರೆ ಈ ವೇಳೆ ಬುಲ್ಸ್ ತಂಡದ ಆಟಗಾರರು ಅದ್ಭುತ ಪ್ರದರ್ಶನದ ಮೂಲಕ ಮುನ್ನಡೆ ಪಡೆದುಕೊಂಡರು. ಇದಾದ ಬಳಿಕ ಪಾಟ್ನಾ ಅಂಕಗಳಿಕೆ ಮಾಡಲು ವಿಫಲಗೊಂಡಿತು. ಹೀಗಾಗಿ ಬುಲ್ಸ್ ತನ್ನ ಆಟ ಮುಂದುವರಿಸಿ ಗೆಲುವು ದಾಖಲು ಮಾಡಿದೆ.
ಪವನ್ ಕುಮಾರ್ 9 ಅಂಕ, ಅಮಿತ್ ಶಿರೋನ್ 5, ಸುಮಿತ್ ಸಿಂಗ್ 4, ಆಶೀಷ್ ಸಿಂಗ್ 4. ಮಹೇಂದ್ರ ಸಿಂಗ್ 4, ರೋಹಿತ್ ಕುಮಾರ್ 4, ಬಂಟಿ 2 ಅಂಕ ಸಂಪಾದಿಸಿದರು.
ಪಾಟ್ನಾ ಪರ ಪರ್ದೀಪ್ ನರ್ವಾಲ್ 10,ಮೊಹಮ್ಮದ್ ಇಸ್ಮಾಯಿಲ್ 9, ವಿಕಾಸ್ ಜಗ್ಲಾನ್ 3, ನೀರಜ್ ಕುಮಾರ್ 2, ಹದಿ ಒಸ್ತೊರಾಕ್ 3, ಜಾನ್ ಕುಂಗ್ ಲೀ 1, ಜೈದೀಪ್ 1 ಅಂಕ ಪಡೆದುಕೊಂಡರು.