ಅಹ್ಮದಾಬಾದ್: ಕರ್ನಾಟಕದ ಆಟಗಾರರ ದಂಡನ್ನೇ ಹೊಂದಿರುವ ಬೆಂಗಾಲ್ ವಾರಿಯರ್ಸ್ ತಂಡ ಯು ಮುಂಬಾ ತಂಡವನ್ನು ಬಗ್ಗುಬಡಿದು ಫೈನಲ್ ಪ್ರವೇಶಿಸಿದೆ.
7ನೇ ಸೀಸನ್ನ ಪ್ರೋ ಕಬಡ್ಡಿ ಲೀಗ್ನಲ್ಲಿ ಅತ್ಯತ್ತಮ ಪ್ರದರ್ಶನ ನೋಡಿರುವ ಬೆಂಗಾಲ್ ವಾರಿಯರ್ಸ್ ತಂಡ ಸ್ಟಾರ್ ರೈಡರ್ ಮಣೀಂದರ್ ಸಿಂಗ್ ಅನುಪಸ್ಥಿತಿಯಲ್ಲಿಯೂ 37-35 ರ ಅಂತರದಲ್ಲಿ ಗೆಲುವು ಸಾಧಿಸಿ ಫೈನಲ್ ಪ್ರವೇಶಿಸಿದೆ.
ಎರಡೂ ತಂಡಗಳು ಉತ್ತಮ ಆರಂಭ ಪಡೆದವೂ . ಆದರೆ, ಮೊದಲಾರ್ಧದ ಅಂತ್ಯದ ವೇಳೆಗೆ ಚುರುಕಾಗಿ ಆಡಿದ ಬೆಂಗಾಲ್ ಮುಂಬೈ ತಂಡವನ್ನು ಆಲೌಟ್ ಮಾಡುವ ಮೂಲಕ 18-12 ರಲ್ಲಿ ಮುನ್ನಡೆ ಸಾಧಿಸಿತು. ದ್ವಿತೀಯಾರ್ಧದಲ್ಲೂ ಮುಂಬೈ ತಂಡವನ್ನು ಒಮ್ಮೆ ಆಲೌಟ್ ಮಾಡಿ ಕೊನೆಯ 5 ನಿಮಿಷದಲ್ಲಿ 30-20 ಕ್ಕೆ ಮುನ್ನಡೆ ಹೆಚ್ಚಿಸಿಕೊಂಡಿತ್ತು.
ಆದರೆ, ಮುಂಬೈನ ಸಬ್ಸ್ಟಿಟ್ಯೂಟ್ ರೈಡರ್ ಸೂಪರ್ ರೈಡ್ ಮಾಡಿ 4 ಅಂಕ ಸಂಪಾದಿಸಿ ಬೆಂಗಾಲ್ ವಾರಿಯರ್ಸ್ ಆಲೌಟ್ ಆಗುವಂತೆ ಮಾಡಿದ್ದಲ್ಲದೆ ಹಿನ್ನಡೆ ಅಂತರವನ್ನು 29-33ಕ್ಕೆ ತಗ್ಗಿಸಿದರು.