ಕರ್ನಾಟಕ

karnataka

ETV Bharat / sports

ವಿವಾದಾತ್ಮಕ ಪಂದ್ಯದಲ್ಲಿ ಬೆಂಗಳೂರು ಬುಲ್ಸ್​ಗೆ ಒಂದು ಅಂಕದಿಂದ ರೋಚಕ ಸೋಲು

ಬೆಂಗಳೂರು ತಂಡದ ಪರ ಪವನ್​ ಶೆರಾವರ್​ 13 , ಚಂದ್ರನ್ ರಂಜಿತ್​ 8, ಸೌರಬ್​ ನಂಡಲ್​ 4 ಟ್ಯಾಕಲ್​, ಮಹೇಂದ್ರ ಮತ್ತು ಅಂಕಿತ್ ತಲಾ 2 ಟ್ಯಾಕಲ್ ಅಂಕ ಸಂಪಾದಿಸಿದರು.

Bengal Warriors beat Bengaluru Bulls by 40-39
ಬೆಂಗಳೂರು ಬುಲ್ಸ್​ vs ಬೆಂಗಾಲ್​ ವಾರಿಯರ್ಸ್​

By

Published : Jan 20, 2022, 10:23 PM IST

ಬೆಂಗಳೂರು:ಗೊಂದಲದಿಂದ ಕೂಡಿದ್ದ ಬೆಂಗಾಲ್​ ವಾರಿಯರ್ಸ್ ವಿರುದ್ಧದ ಪಂದ್ಯದಲ್ಲಿ ಬೆಂಗಳೂರು ಬುಲ್ಸ್​ 40-39ರ ಒಂದು ಅಂಕದ ಅಂತರದ ಸೋಲು ಕಂಡು ನಿರಾಸೆ ಅನುಭವಿಸಿದೆ.

ಬೆಂಗಳೂರು ಬುಲ್ಸ್​ 27-20ರಲ್ಲಿ ಮುನ್ನಡೆ ಪಡೆದುಕೊಂಡಿದ್ದ ವೇಳೆ ಬೆಂಗಾಲ್​ ವಾರಿಯರ್ಸ್​ ಪರ ಕೋರ್ಟಿನಲ್ಲಿ ಕೊನೆಯ ಆಟಗಾರನಾಗಿದ್ದ ನಬೀಬಖ್ಷ್​ ರೈಡಿಂಗ್ ವೇಳೆ ಟಚ್​ ಮಾಡುವ ಯತ್ನದಲ್ಲಿ ವಿಫಲರಾಗಿ ಲಾಬಿ ಲೈನ್​ ಕ್ರಾಸ್ ಮಾಡಿದ್ದರು. ಲೆಫ್ಟ್​ ಕಾರ್ನರ್​ನಲ್ಲಿದ್ದ ಮಹೇಂದರ್​ ಸಿಂಗ್​, ನಬೀಬಖ್ಷ್ ಅವರನ್ನು ಟ್ಯಾಕಲ್​ ಮಾಡಲು ಯತ್ನಿಸಿದರು. ಈ ವೇಳೆ ತಂಡದ ಎಲ್ಲಾ ಆಟಗಾರರು ನಬೀಬಕ್ಷ್​ ಮೇಲೆ ಬಿದ್ದಿದ್ದರಿಂದ ಬುಲ್ಸ್​ ತಂಡದ ಎಲ್ಲಾ ಆಟಗಾರರನ್ನು ಔಟ್​ ಎಂದು ತೀರ್ಪು ನೀಡಲಾಯಿತು. ಇದರಿಂದ ಬೋನಸ್​ ಸೇರಿದಂತೆ 8 ಅಂಕ ಬೆಂಗಾಲ್​ಗೆ ಮತ್ತು ಒಂದು ಅಂಕ ಬುಲ್ಸ್​ಗೆ ನೀಡಲಾಯಿತು.

27-20 ಇದ್ದ ಬುಲ್ಸ್​ ಮುನ್ನಡೆ ಈ ರೈಡ್​ ನಂತರ 28-29 ತಲುಪಿತು. ಈ ದಿಢೀರ್​ ತೀರ್ಪಿನಿಂದ ಗೊಂದಲಕ್ಕೊಳಗಾದ ಬೆಂಗಳೂರು ಬುಲ್ಸ್ ಬಳಿಕ​ ಆಟದ ಕಡೆ ಆಸಕ್ತಿ ಕಳೆದುಕೊಂಡಂತೆ ಕಂಡುಬಂದಿತಲ್ಲದೆ, ನಂತರ ಪಂದ್ಯದಲ್ಲಿ ಬೆಂಗಾಲ್ ವಾರಿಯರ್ಸ್ ಮುನ್ನಡೆ ಪಡೆಯುತ್ತ ಸಾಗಿತು.

ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ಆದರೂ ಕೊನೆಯ ಒಂದೂವರೆ ನಿಮಿಷದಲ್ಲಿ 32-38ರಲ್ಲಿ ಹಿನ್ನಡೆ ಅನುಭವಿಸಿದ್ದ ಬುಲ್ಸ್ ಅದ್ಭುತವಾಗಿ ಕಮ್​ಬ್ಯಾಕ್​ ಮಾಡಿ ಕೊನೆಯ 37 ಸೆಕೆಂಡ್​ ವೇಳೆ 38-40ಕ್ಕೆ ತಂದು ನಿಲ್ಲಿಸಿತ್ತು. ಆದರೆ ಕೊನೆಯ 30 ಸೆಕೆಂಡ್​ಗಳನ್ನು ವ್ಯರ್ಥ ಮಾಡಿದ ವಾರಿಯರ್ಸ್ ರೈಡರ್ ತಮ್ಮ ತಂಡ ಒಂದು ಅಂಕದಿಂದ ಗೆಲ್ಲಲು ನೆರವಾದರು.

ಬೆಂಗಳೂರು ತಂಡದ ಪರ ಪವನ್​ ಶೆರಾವರ್​ 13 , ಚಂದ್ರನ್ ರಂಜಿತ್​ 8, ಸೌರಬ್​ ನಂಡಲ್​ 4 ಟ್ಯಾಕಲ್​, ಮಹೇಂದ್ರ ಮತ್ತು ಅಂಕಿತ್ ತಲಾ 2 ಟ್ಯಾಕಲ್ ಅಂಕ ಸಂಪಾದಿಸಿದರು.

ಇತ್ತ ಬೆಂಗಾಲ್​ ವಾರಿಯರ್ಸ್ ಪರ ಮಣೀಂದರ್ ಸಿಂಗ್ 9, ಸುಖೇಶ್ ಹೆಗ್ಡೆ 7, ನಬೀಬಖ್ಷ್​ 6 , ಮೊಹಜೆರ್ಮಿಘನಿ 3, ಅಮಿತ್ ಮತ್ತು ರಾಣಾ ಸಿಂಗ್ ತಲಾ 2 ಟ್ಯಾಕಲ್ ಅಂಕ ಪಡೆದರು. ವಿವಾದಿತ 8 ಹೆಚ್ಚುವರಿ ಅಂಕ ಪಡೆದಿದ್ದರಿಂದ ಬೆಂಗಾಲ್​ ವಾರಿಯರ್ಸ್ ಗೆಲ್ಲುವಂತಾಯಿತು.

ಇದನ್ನೂ ಓದಿ:ಬಿಸಿಸಿಐ ವಾರ್ಷಿಕ ಗುತ್ತಿಗೆ: A+ ವರ್ಗಕ್ಕೆ ರಾಹುಲ್​-ಪಂತ್ ಬಡ್ತಿ ಸಾಧ್ಯತೆ, ಪೂಜಾರ-ರಹಾನೆ ಭವಿಷ್ಯ ಅತಂತ್ರ!

ABOUT THE AUTHOR

...view details