ನವದೆಹಲಿ: ಮುಂಬರುವ ಆಸ್ಟ್ರೇಲಿಯಾ ಹಾಗೂ ದಕ್ಷಿಣ ಆಫ್ರಿಕಾದ ವಿರುದ್ಧ ಭಾರತದ ಕ್ರಿಕೆಟ್ ಸರಣಿಗೆ ಬಿಸಿಸಿಐ ವೇಳಾಪಟ್ಟಿ ಪ್ರಕಟಿಸಿದೆ. ಭಾರತ ಪ್ರವಾಸ ಕೈಗೊಳ್ಳಲಿರುವ ಆಸ್ಟ್ರೇಲಿಯಾ ಮೂರು ಪಂದ್ಯಗಳ ಟಿ20 ಸರಣಿ ಹಾಗೂ ದಕ್ಷಿಣ ಆಫ್ರಿಕಾ ತಲಾ ಮೂರು ಪಂದ್ಯಗಳ ಟಿ20 ಹಾಗೂ ಏಕದಿನ ಸರಣಿ ಆಡಲಿದೆ.
ಸೆಪ್ಟೆಂಬರ್ 20ರಿಂದ ಭಾರತ ಮತ್ತು ಆಸ್ಟ್ರೇಲಿಯಾದ ಟಿ20 ಕ್ರಿಕೆಟ್ ಸರಣಿ ಆರಂಭವಾಗಲಿದೆ. ಸೆಪ್ಟೆಂಬರ್ 20ರಂದು ಮೊದಲ ಪಂದ್ಯ ಮೊಹಾಲಿಯಲ್ಲಿ ಜರುಗಲಿದೆ. 23ರಂದು ನಾಗಪುರದಲ್ಲಿ ಎರಡನೇ ಪಂದ್ಯ ಹಾಗೂ 25ರಂದು ಹೈದರಾಬಾದ್ನಲ್ಲಿ ಮೂರನೇ ಟಿ20 ಪಂದ್ಯ ನಿಗದಿಯಾಗಿದೆ.
ದ.ಆಫ್ರಿಕಾ ಜತೆ ಟಿ20 ಸರಣಿ: ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಗೆ ಬಿಸಿಸಿಐ ವೇಳಾಪಟ್ಟಿ ಪ್ರಕಟಿಸಿದ್ದು, ಸೆಪ್ಟೆಂಬರ್ 28ರಿಂದ ಟಿ20 ಕ್ರಿಕೆಟ್ ಸರಣಿ ಪ್ರಾರಂಭವಾಗಿದೆ. ಅಂದು ಟೀಂ ಇಂಡಿಯಾ ಮತ್ತು ದಕ್ಷಿಣ ಆಫ್ರಿಕಾ ತಿರುವನಂತಪುರಂದಲ್ಲಿ ನಡೆಯುವ ಮೊದಲ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ. ಅಕ್ಟೋಬರ್ 2ರಂದು ಎರಡನೇ ಪಂದ್ಯ ಗುವಾಹಟಿ ಹಾಗೂ ಅಕ್ಟೋಬರ್ 4ರಂದು ಮೂರನೇ ಪಂದ್ಯ ಇಂದೋರ್ನಲ್ಲಿ ನಡೆಯಲಿದೆ.
ದ. ಆಫ್ರಿಕಾ ಜತೆ ಏಕದಿನ ಸರಣಿ: ಭಾರತ ಮತ್ತು ದಕ್ಷಿಣ ಆಫ್ರಿಕಾದ ನಡುವಿನ ಏಕದಿನ ಸರಣಿಗೂ ವೇಳಾಪಟ್ಟಿ ಪ್ರಕಟಿಸಲಾಗಿದೆ. ಅಕ್ಟೋಬರ್ 6ರಂದು ಲಖನೌದಲ್ಲಿ ಮೊದಲ ಏಕದಿನ ಪಂದ್ಯ ಜರುಗಲಿದೆ. ಅಕ್ಟೋಬರ್ 9ರಂದು ಎರಡನೇ ಪಂದ್ಯ ರಾಂಚಿಯಲ್ಲಿಯೂ ಹಾಗೂ ಅಕ್ಟೋಬರ್ 11ರಂದು ಮೂರನೇ ಏಕದಿನ ಪಂದ್ಯ ದೆಹಲಿಯಲ್ಲಿ ಆಯೋಜನೆಗೊಂಡಿದೆ.
ಇದನ್ನೂ ಓದಿ:ರೋಹಿತ್ ಶರ್ಮಾಗೆ ಬೆನ್ನುನೋವು, ವೈದ್ಯಕೀಯ ತಂಡದಿಂದ ಚಿಕಿತ್ಸೆ..