ಬೆಂಗಳೂರು: ಪ್ರಸಕ್ತ ಸಾಲಿನ ಪ್ರೋ ಕಬಡ್ಡಿ ಲೀಗ್ನ ಮತ್ತೊಂದು ಪಂದ್ಯದಲ್ಲಿ ಬೆಂಗಳೂರು ಪಾಟ್ನಾ ಪೈರೇಟ್ಸ್ ವಿರುದ್ಧ ರೋಚಕ ಗೆಲುವು ದಾಖಲು ಮಾಡುವ ಮೂಲಕ ಅಂಕಪಟ್ಟಿಯಲ್ಲಿ 2ನೇ ಸ್ಥಾನಕ್ಕೆ ಲಗ್ಗೆ ಹಾಕಿದೆ.
ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ತಂಡ ಪಾಟ್ನಾ ವಿರುದ್ಧ 40-39 ಅಂಕಗಳ ಅಂತರದ ರೋಚಕ ಗೆಲುವು ದಾಖಲು ಮಾಡುವ ಮೂಕಲ ಅಂಕಪಟ್ಟಿಯಲ್ಲಿ 43 ಪಾಯಿಂಟ್ಗಳೊಂದಿಗೆ 2ನೇ ಸ್ಥಾನವನ್ನ ಅಲಂಕಾರ ಮಾಡಿದ್ದು, 54 ಅಂಕಗಳಿಂದ ದಬಾಂಗ್ ದಿಲ್ಲಿ ಮೊದಲ ಸ್ಥಾನದಲ್ಲಿದೆ.
ಆರಂಭದಿಂದಲ್ಲೂ ಸಮಬಲದಿಂದ ಸಾಗಿದ್ದ ಪಂದ್ಯದಲ್ಲೇ ಏಕಾಏಕಿ ಪ್ರದೀಪ್ ನರ್ವಾಲ್ ಸೂಪರ್ ರೈಡ್ ಮೂಲಕ ತಂಡದ ಅಂತರವನ್ನ 17-9ಕ್ಕೆ ಏರಿಸಿದರು.ಹೀಗಾಗಿ ಮೊದಲಾರ್ಧದಲ್ಲಿ ಪಾಟ್ನಾ 22, ಬುಲ್ಸ್ 16 ಅಂಕ ಪಡೆದುಕೊಂಡಿತು.
ಅದ್ಭುತ ರೈಡ್ ಮಾಡಿದ ಪ್ರದೀಪ್ ದ್ವೀತಿಯಾರ್ಧದಲ್ಲೂ ಪಾಟ್ನಾ 28 ಅಂಕಗಳಿಕೆ ಮಾಡಿ ಗೆಲುವು ಖಚಿತ ಪಡಿಸಿಕೊಂಡಿತ್ತು. ಆದರೆ ಕೊನೆ ಎರಡು ನಿಮಿಷವಿದ್ದಾಗ ಆಕ್ರಮಣಕಾರಿ ಆಟದ ಮೊರೆ ಹೋದ ಬುಲ್ಸ್ ಅಂಕಗಳನ್ನ 38-38ಕ್ಕೆ ಸಲಬಲ ಮಾಡಿಕೊಂಡಿತ್ತು. ಕೊನೆಯ ರೈಡ್ನಲ್ಲಿ ಬುಲ್ಸ್ 2 ಅಂಕ ಕಲೆ ಹಾಕಿದರೆ ಪಾಟ್ನಾ 1 ಅಂಕ ಪಡೆದುಕೊಂಡಿತ್ತು. ಹೀಗಾಗಿ ಬುಲ್ಸ್ ರೋಚಕ ಗೆಲುವು ದಾಖಲು ಮಾಡಿ, 2ನೇ ಸ್ಥಾನ ಅಲಂಕಾರ ಮಾಡಿತು. ಬುಲ್ಸ್ ಆಟಗಾರ ಪವನ್ ರೈಡ್ ಇನ್ನೊಂದು ಪಂದ್ಯದಲ್ಲಿ ದಬಾಂಗ್ ದಿಲ್ಲಿ ಹಾಗೂ ಜೈಪುರ್ ಪಿಂಕ್ ಪ್ಯಾಂಥರ್ಸ್ ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ದಬಾಂಗ್ ದಿಲ್ಲಿ 46-44 ಅಂಕಗಳ ಅಂತರದಲ್ಲಿ ಜೈಪುರ್ ತಂಡವನ್ನು ಮಣಿಸಿ ಗೆಲುವು ದಾಖಲು ಮಾಡಿಕೊಂಡು ಮೊದಲ ಸ್ಥಾನದಲ್ಲಿ ಮುಂದುವರಿದಿದೆ.