ಕರ್ನಾಟಕ

karnataka

ETV Bharat / sports

ವಿಶ್ವಚಾಂಪಿಯನ್​ಶಿಪ್​ನಲ್ಲಿ ಭಾರತಕ್ಕೆ ಮತ್ತೆರಡು ಪದಕ: ಕಂಚು ಗೆದ್ದ ಭಜರಂಗ್​, ರವಿಕುಮಾರ್​

ವಿಶ್ವ ಕುಸ್ತಿ ಚಾಂಪಿಯನ್​ಶಿಪ್​ನಲ್ಲಿ ಭಜರಂಗ್, ರವಿಕುಮಾರ್​ ಹಾಗೂ ಮಹಿಳಾ ಕುಸ್ತಿಪಟು ವಿನೇಶ್​ ಫೋಗಟ್​ ಭಾರತಕ್ಕೆ ಕಂಚಿನ ಪದಕ ತಂದುಕೊಟ್ಟಿದ್ದಾರೆ. ಆದರೆ, ಭಾರತದ ಭರವಸೆಯ ಕುಸ್ತಿಪಟುಗಳಾದ ಸುಶೀಲ್​ ಕುಮಾರ್​, ಸಾಕ್ಷಿ ಮಲ್ಲಿಕ್​ ಸೋಲು ಕಾಣುವ ಮೂಲಕ ನಿರಾಸೆ ಅನುಭವಿಸಿದ್ದಾರೆ.

World Wrestling Champions

By

Published : Sep 21, 2019, 1:19 PM IST

ನೂರ್​ ಸುಲ್ತಾನ್​: ಕಜಕಿಸ್ತಾನದ ನೂರ್​ ಸುಲ್ತಾನ್​​ನಲ್ಲಿ ನಡೆಯುತ್ತಿರುವ ವಿಶ್ವ ಕುಸ್ತಿ ಚಾಂಪಿಯನ್​ಶಿಪ್​ನಲ್ಲಿ ಭಾರತದ ಸ್ಟಾರ್​ ಕುಸ್ತಿಪಟುಗಳಾದ ಭಜರಂಗ್​ ಪೂನಿಯಾ ಹಾಗೂ ರವಿಕುಮಾರ್​ ಭಾರತಕ್ಕೆ ಕಂಚಿನ ಪದಕ ತಂದುಕೊಡುವಲ್ಲಿ ಯಶಸ್ವಿಯಾಗಿದ್ದಾರೆ.

65 ಕೆಜಿ ವಿಭಾಗದಲ್ಲಿ ಸ್ಪರ್ಧಿಸಿದ್ದ ವಿಶ್ವದ ನಂಬರ್​ ಒನ್​ ಕುಸ್ತಿಪಟುವಾದ ಭಜರಂಗ್​ ಸೆಮಿಫೈನಲ್​ನಲ್ಲಿ ವಿವಾದಿತ ತೀರ್ಪಿಗೆ ಬಲಿಯಾಗಿ ಚಿನ್ನ ಗೆಲ್ಲುವ ಅವಕಾಶ ತಪ್ಪಿಸಿಕೊಂಡರೂ ಕಂಚು ಗೆಲ್ಲುವಲ್ಲಿ ಸಫಲರಾಗಿದ್ದಾರೆ. ಶುಕ್ರವಾರ ಕಂಚಿನ ಪದಕಕ್ಕಾಗಿ ನಡೆದ ಪಂದ್ಯದಲ್ಲಿ ಮಂಗೋಲಿಯಾದ ಟುಲ್ಗ್​ ಒಶಿರ್​ ಅವರನ್ನು 8-7ರಲ್ಲಿ ಮಣಿಸಿ ಕಂಚಿನ ಪದಕಕ್ಕೆ ಕೊರಳೊಡ್ಡಿದ್ದಾರೆ.

ಇದೇ ವರ್ಷ ಕುಸ್ತಿಗೆ ಪದಾರ್ಪಣೆ ಮಾಡಿರುವ 22 ವರ್ಷದ ರವಿಕುಮಾರ್​ 57 ಕೆಜಿ ವಿಭಾಗದಲ್ಲಿ 6-3 ರಲ್ಲಿ ಇರಾನ್​ ರೇಜಾ ಅತ್ರಿನಘರ್ಚಿ ಅವರನ್ನು ಮಣಿಸುವ ಮೂಲಕ ಚಾಂಪಿಯನ್​ಶಿಪ್​ನಲ್ಲಿ ಮೂರನೇ ಕುಸ್ತಿ ತಂದುಕೊಟ್ಟರು.

ಭಜರಂಗ್, ರವಿಗೂ ಮೊದಲೇ ಮಹಿಳಾ ಕುಸ್ತಿಪಟು ವಿನೇಶ್​ ಫೋಗಟ್​ ಕೂಡ ಕಂಚು ಗೆದ್ದಿದ್ದರು. ಅಲ್ಲದೇ ಈ ಮೂವರು 2020ರ ಟೋಕಿಯೋ ಒಲಿಂಪಿಕ್​ಗೆ ಅರ್ಹತೆ ಗಿಟ್ಟಿಸಿಕೊಂಡಿದ್ದಾರೆ. ಆದರೆ, ಭಾರತದ ಭರವಸೆಯ ಕುಸ್ತಿಪಟುಗಳಾದ ಸುಶೀಲ್​ ಕುಮಾರ್​, ಸಾಕ್ಷಿ ಮಲ್ಲಿಕ್​ ಸೋಲು ಕಾಣುವ ಮೂಲಕ ನಿರಾಸೆ ಅನುಭವಿಸಿದ್ದಾರೆ.

ABOUT THE AUTHOR

...view details