ಕರ್ನಾಟಕ

karnataka

ETV Bharat / sports

ಸೆಮಿಫೈನಲ್​ನಲ್ಲಿ ಭಜರಂಗ್​ಗೆ ದುರಾದೃಷ್ಟಕರ ಸೋಲು! - ಭಜರಂಗ್​ ಪೂನಿಯಾ ಕುಸ್ತಿ

ವಿಶ್ವ ಕುಸ್ತಿ ಚಾಂಪಿಯನ್​ಶಿಪ್​ನ ಸೆಮಿಫೈನಲ್​ನಲ್ಲಿ ಸೋಲುಕಾಣುವ ಮೂಲಕ ಭಾರತದ ಸ್ಟಾರ್​ ಕುಸ್ತಿಪಟು ಭಜರಂಗ್​ ಪೂನಿಯಾ ಚಿನ್ನ ಗೆಲ್ಲುವ ಕನಸು ನುಚ್ಚುನೂರಾಗಿದೆ. ಆದರೆ ಕಂಚಿಗಾಗಿ ಮತ್ತೊಂದು ಸೆಮಿಫೈನಲ್​ನಲ್ಲಿ ಸೋತಿರುವವರೊಂದಿಗೆ ಕಾದಾಡಲಿದ್ದಾರೆ.

Bajrang Punia,

By

Published : Sep 19, 2019, 10:19 PM IST

Updated : Sep 19, 2019, 10:26 PM IST

ನೂರ್​ ಸುಲ್ತಾನ್​: ವಿಶ್ವ ಕುಸ್ತಿ ಚಾಂಪಿಯನ್​ಶಿಪ್​ನ ಸೆಮಿಫೈನಲ್​ನಲ್ಲಿ ಸೋಲುಕಾಣುವ ಮೂಲಕ ಭಾರತದ ಸ್ಟಾರ್​ ಕುಸ್ತಿಪಟು ಭಜರಂಗ್​ ಪೂನಿಯಾ ಚಿನ್ನ ಗೆಲ್ಲುವ ಕನಸು ನುಚ್ಚುನೂರಾಗಿದೆ.

ಇಂದು ನಡೆದ ಸೆಮಿಫೈನಲ್​ನಲ್ಲಿ ಭಜರಂಗ್​ ಕಜಕಿಸ್ತಾನದ ದೌಲತ್​ ನಿಯಾಜ್​ಬೆಕೋವ್​ ವಿರುದ್ಧ 9-9 ಸಮಬಲದ ಅಂಕ ಪಡೆದರೂ ಭಜರಂಗ್​ರನ್ನು ಸರ್ಕಲ್​ನಿಂದ ಹೊರಗೆಸೆದು 4(ಟೆಕ್ನಿಕಲ್​ ಪಾಯಿಂಟ್ಸ್​​)ಅಂಕಪಡೆದಿದ್ದ ದೌಲತ್​​ರನ್ನು ವಿಜೇತರೆಂದು ನಿರ್ಣಯಿಸಲಾಯಿತು.

ಈ ಸೋಲಿನಿಂದ ಹೊರಬಿದ್ದರೂ ಕಂಚಿಗಾಗಿ ಮತ್ತೊಂದು ಸೆಮಿಫೈನಲ್​ನಲ್ಲಿ ಸೋತಿರುವ ಸ್ಲೊವೇನಿಯಾದ ಡೇವಿಡ್​ ಹಬಾಟ್​ರನ್ನು ಎದುರಿಸಲಿದ್ದಾರೆ.

ಮತ್ತೊಬ್ಬ 57 ಕೆಜಿ ವಿಭಾಗದಲ್ಲಿ ಸೆಮಿಫೈನಲ್​ ಪ್ರವೇಶಿಸಿದ್ದ ರವಿ ಕುಮಾರ್​ ಕೂಡ ಸೆಮಿಫೈನಲ್​ನಲ್ಲಿ ರಷ್ಯಾದ ಜುರೆವ್​ ಯುಗ್ಯುವ್ ವಿರುದ್ದ​ ಸೋಲು ಕಂಡರು. ಒಲಿಂಪಿಕ್​ಗೆ ಅರ್ಹತೆ ಗಿಟ್ಟಿಸಿಕೊಂಡಿರುವ ಅವರೂ ಕೂಡ ನಾಳೆ ಕಂಚಿಗಾಗಿ ಸೆಣಸಾಡಲಿದ್ದಾರೆ.

Last Updated : Sep 19, 2019, 10:26 PM IST

ABOUT THE AUTHOR

...view details