ನವದೆಹಲಿ: ಟೋಕಿಯೋ ಒಲಿಂಪಿಕ್ಸ್ನಲ್ಲಿ ಕಂಚಿನ ಪದಕ ಗೆದ್ದಿದ್ದ ಭಾರತದ ಭರವಸೆಯ ಕುಸ್ತಿಪಟು ಬರಜರಂಗ್ ಪೂನಿಯಾ ಸೋಮವಾರ 26 ದಿನಗಳ ತರಬೇತಿ ಶಿಬಿರಕ್ಕಾಗಿ ಮಾಸ್ಕೋಗೆ ತೆರಳಿದ್ದಾರೆ.
ಟೋಕಿಯೋ ಒಲಿಂಪಿಕ್ಸ್ ನಂತರ ಬಜರಂಗ್ ಪೂನಿಯಾ ಅವರ ಮೊದಲ ತರಬೇತಿ ಶಿಬಿರ ಇದಾಗಿದೆ. ಜನವರಿ 21ರವರೆಗೆ ಪೂನಿಯಾ ಮಾಸ್ಕೋದಲ್ಲಿ ತರಬೇತಿ ನಡೆಸಲಿದ್ದಾರೆ. ಒಲಿಂಪಿಕ್ಸ್ನಲ್ಲಿ ರಷ್ಯಾ ಯಶಸ್ವಿ ರಾಷ್ಟ್ರವಾಗಿರುವುದರಿಂದ ಪೂನಿಯಾ ಈ ರಾಷ್ಟ್ರವನ್ನು ಆಯ್ಕೆ ಮಾಡಿಕೊಂಡಿದ್ದಾರೆ.
ಟೋಕಿಯೋ ಒಲಿಂಪಿಕ್ಸ್ ನಂತರ ಇದು ನನ್ನನ ಮೊದಲ ತರಬೇತಿ ಕ್ಯಾಂಪ್. ಇದು ನನಗೆ ಒಂದು ಒಳ್ಳೆಯ ಕ್ಯಾಂಪ್ ಆಗಲಿದೆ ಎಂದು ನಾನು ಭಾವಿಸುತ್ತೇನೆ. ಒಲಿಂಪಿಕ್ ಗೇಮ್ಸ್ ಮತ್ತು ವಿಶ್ವ ಚಾಂಪಿಯನ್ಶಿಪ್ನಲ್ಲಿ ರಷ್ಯಾದ ಕುಸ್ತಿಪಟುಗಳು ಹೆಚ್ಚು ಪ್ರಶಸ್ತಿ ಗೆಲ್ಲುವುದರಿಂದ ನಾನು ತರಬೇತಿಗೆ ರಷ್ಯಾವನ್ನು ಆಯ್ಕೆಮಾಡಿಕೊಂಡಿದ್ದೇನೆ. ಇಲ್ಲಿ ಅನುಭವಿ ಕುಸ್ತಿಪಟುಗಳಿಂದ ಅನುಕೂಲ ಪಡೆದುಕೊಳ್ಳಲಿದ್ದೇನೆ ಎಂದು ರಷ್ಯಾದಿಂದಲೇ ಹೇಳಿಕೆ ಬಿಡುಗಡೆ ಮಾಡಿದ್ದಾರೆ.
ಬಜರಂಗ್ ಪೂನಿಯಾ ಅವರ ಈ ತರಬೇತಿಗಾಗಿ ಭಾರತೀಯ ಕ್ರೀಡಾ ಸಚಿವಾಲಯ 7.53 ಲಕ್ಷ ರೂಪಾಯಿಗಳನ್ನು ಮಿಷನ್ ಒಲಿಂಪಿಕ್ಸ್ ಸೆಲ್(MOC) ಯೋಜನೆ ಅಡಿಯಲ್ಲಿ ಬಿಡುಗಡೆ ಮಾಡಿದೆ. ಜೀತೆಂದರ್ ತರಬೇತಿ ಪಾರ್ಟ್ನರ್ ಮತ್ತು ಆನಂದ್ ಕುಮಾರ್ ಅವರನ್ನು ಫಿಸಿಯೋ ಆಗಿ ಬಜರಂಗ್ ಜೊತೆಯಲ್ಲಿ ಕಳುಹಿಸಿಕೊಡಲಾಗಿದೆ. ಬಜರಂಗ್ 2022ರಲ್ಲಿ UWW ರ್ಯಾಂಕಿಂಗ್ ಇವೆಂಟ್ಸ್, 2022 ಕಾಮನ್ವೆಲ್ತ್ ಗೇಮ್ಸ್ ಚೀನಾದಲ್ಲಿ ನಡೆಯಲಿರುವ ಏಷ್ಯನ್ ಗೇಮ್ಸ್ ನಲ್ಲಿ ಪಾಲ್ಗೊಳ್ಳಲಿದ್ದಾರೆ.
ಇದನ್ನು ಓದಿ:ಅಮೆರಿಕಾದಲ್ಲಿ ಕ್ರಿಕೆಟ್ ಆಡುವ ಸಲುವಾಗಿ ನಿವೃತ್ತಿ ಘೋಷಿಸಿದ ಭಾರತೀಯ ಡೊಮೆಸ್ಟಿಕ್ ಕ್ರಿಕೆಟರ್