ಯೆಯೊಸು (ಕೊರಿಯಾ) :ಭಾರತದ ಸ್ಟಾರ್ ಬ್ಯಾಡ್ಮಿಂಟನ್ ಆಟಗಾರರಾದ ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಅವರು ಭಾನುವಾರದಂದು ಕೊರಿಯಾ ಓಪನ್ ಪುರುಷರ ಡಬಲ್ಸ್ ಫೈನಲ್ನಲ್ಲಿ ಪ್ರಶಸ್ತಿಗೆ ಮುತ್ತಿಕ್ಕಿದ್ದಾರೆ. ಅಗ್ರ ಶ್ರೇಯಾಂಕದಲ್ಲಿರುವ ಇಂಡೋನೇಷ್ಯಾದ ಫಜರ್ ಅಲ್ಫಿಯಾನ್ ಮತ್ತು ಮುಹಮದ್ ರಿಯಾನ್ ಅರ್ಡಿಯಾಂಟೊ ಅವರನ್ನು 17-21, 21-13, 21-14 ಗೇಮ್ ಗಳ ಅಂತರದಿಂದ ಸಾತ್ವಿಕ್-ಚಿರಾಗ್ ಜೋಡಿ ಸೋಲಿಸಿತು. ಈ ಭರ್ಜರಿ ಗೆಲುವು ಸಾಧಿಸುವ ಮೂಲಕ ತಮ್ಮ ಯಶಸ್ವಿ ಗೆಲುವಿನ ಓಟವನ್ನು ಮುಂದುವರೆಸಿದ್ದಾರೆ.
2022 ರ ಕಾಮನ್ವೆಲ್ತ್ ಕ್ರೀಡಾಕೂಟದ ಚಾಂಪಿಯನ್ಗಳಾದ ಸಾತ್ವಿಕ್ ಮತ್ತು ಚಿರಾಗ್, ಈ ವರ್ಷ ಫ್ರೆಂಚ್ ಓಪನ್, ಏಷ್ಯನ್ ಚಾಂಪಿಯನ್ಶಿಪ್ ಮತ್ತು ಇಂಡೋನೇಷ್ಯಾ ಓಪನ್ನಲ್ಲಿ ಚಾಂಪಿಯನ್ ಆದ ಈ ಜೋಡಿ ಮತ್ತೊಂದು ಗೆಲುವಿನ ಗರಿಯನ್ನು ತಮ್ಮ ಖಾತೆಗೆ ಸೇರಿಸಿದ್ದಾರೆ. ಭಾರತದ ಈ ಜೋಡಿಯು ಏಷ್ಯನ್ ಗೇಮ್ಸ್ನಲ್ಲಿ ಬೆಳ್ಳಿ ಪದಕ ವಿಜೇತರಾದ ಅಲ್ಫಿಯಾನ್ ಮತ್ತು ಅರ್ಡಿಯಾಂಟೊ ವಿರುದ್ಧ ಉತ್ತಮ ಆಟ ಪ್ರದರ್ಶನ ತೋರಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ.
ಆರಂಭಿಕ ಪಂದ್ಯದಲ್ಲಿ ಹಿನ್ನಡೆ ಅನುಭವಿಸಿದ ಸಾತ್ವಿಕ್-ಚಿರಾಗ್ ಆರಂಭದಲ್ಲಿ ಸ್ವಲ್ಪ ನಿರಾಳವಾಗಿ ಕಂಡರು. ಆದರೆ ಕೊನೆಯಲ್ಲಿ ಚೇತರಿಸಿಕೊಂಡ ಈ ಜೊಡಿ 6 ಅಂಕಗಳಗಳನ್ನು ಗಳಿಸುವ ಮೂಲಕ 10-19 ಹಿನ್ನಡೆಯನ್ನು ಕಡಿಮೆ ಮಾಡಿದರು. ಆದಾಗ್ಯೂ, ಸಾತ್ವಿಕ್-ಚಿರಾಗ್ ಎರಡನೇ ಗೇಮ್ನಲ್ಲಿ ಆವೇಗವನ್ನು ಕಂಡುಕೊಂಡು ಅಲ್ಫಿಯಾನ್ ಮತ್ತು ಅರ್ಡಿಯಾಂಟೊ ವಿರುದ್ದ ಪ್ರಾಬಲ್ಯ ಸಾಧಿಸಿದರು. ಆದರೇ ಇಂಡೋನೇಷ್ಯಾದ ಆಟಗಾರರು ಹೆಚ್ಚಿನ ವೇಗದಲ್ಲಿ ಫ್ಲಾಟ್ ರ್ಯಾಲಿಗಳನ್ನು ಆಡಿ ಮೊದಲ ಗೇಮ್ 17-21 ಪಾಯಿಂಟ್ ದಾಖಲಿಸಿದರು.