ಕರ್ನಾಟಕ

karnataka

ETV Bharat / sports

ಮಲೇಷ್ಯಾ ಕಿಕ್ ಬಾಕ್ಸಿಂಗ್ ಟೂರ್ನಿ: ಕನ್ನಡಿಗ ಅವಿನಾಶ್ ಚಾಂಪಿಯನ್ ​ - ಕಿಕ್​ ಬಾಕ್ಸಿಂಗ್ ಸುದ್ದಿ

ಮಲೇಷ್ಯಾದಲ್ಲಿ ನಡೆದ ಕಿಕ್​ ಬಾಕ್ಸಿಂಗ್​ ಚಾಂಪಿಯನ್ ಶಿಪ್​ನಲ್ಲಿ ಅವಿನಾಶ್ ಶೆಟ್ಟಿ ವಿಜಯ ಪತಾಕೆ ಹಾರಿಸಿದ್ದಾರೆ. ಥೈಲ್ಯಾಂಡಿನ ಪುಕೆಟ್ ಎಂಬಲ್ಲಿ ನಡೆದ ಕಿಕ್ ಬಾಕ್ಸಿಂಗ್ ಸ್ಪರ್ಧೆಯಲ್ಲಿ ಅವಿನಾಶ್ ಪಾಲ್ಗೊಂಡು 60 ಕೆಜಿ ವಿಭಾಗದಲ್ಲಿ ಅಖಾಡಕ್ಕಿಳಿದು ಗೆಲುವು ಸಾಧಿಸಿದ್ದಾರೆ.

mathai-kick-boxing-championship-in-malasia
ಮಲೇಷಿಯಾದ ಮಥಾಯ್ ಚಾಂಪಿಯನ್​ಶಿಪ್ ಟ್ರೋಫಿ

By

Published : Feb 20, 2020, 5:56 AM IST

ಕುಂದಾಪುರ: ಜಗತ್ತಿನ ಅಪಾಯಕಾರಿ ಆಟಗಳ ಪೈಕಿ ಕಿಕ್ ಬಾಕ್ಸಿಂಗ್ ಒಂದು. ಮಲೇಷ್ಯಾದ ಮಥಾಯ್ ಚಾಂಪಿಯನ್​ಶಿಪ್ ಟ್ರೋಫಿಯನ್ನು ಕನ್ನಡಿಗನೊಬ್ಬ ಗೆದ್ದು ಬೀಗಿದ್ದಾನೆ.

ಕುಂದಾಪುರದ ಅವಿನಾಶ್ ಶೆಟ್ಟಿ ಫೆಬ್ರವರಿ 4ರಂದು ಥೈಲ್ಯಾಂಡಿನ ಪುಕೇಟ್ ಎಂಬಲ್ಲಿ ನಡೆದ ಕಿಕ್ ಬಾಕ್ಸಿಂಗ್ ಸ್ಪರ್ಧೆಯಲ್ಲಿ ಪಾಲ್ಗೊಂಡು ವಿದೇಶಿ ನೆಲದಲ್ಲಿ ಭಾರತದ ವಿಜಯ ಪತಾಕೆ ಹಾರಿಸಿದ್ದಾನೆ.

60 ಕೆ.ಜಿ. ವಿಭಾಗದಲ್ಲಿ ಅಖಾಡಕ್ಕಿಳಿದಿದ್ದ ಅವಿನಾಶ್, ಇದೇ ಮೊದಲ ಬಾರಿಗೆ ಸ್ಪರ್ಧಿಸಿದ್ದರು. ಅನುಭವಿ ಬಾಕ್ಸರ್ ನ್ಯೂವ್ಲಿಕಿಟ್ ವಿರುದ್ಧ ಕಣಕ್ಕಿಳಿದಿದ್ದ ಅವಿನಾಶ್​, ಒಂದೇ ಒಂದು ಫ್ಲೈಯಿಂಗ್ ನೀ ಹೊಡೆತಕ್ಕೆ ಮೊದಲನೇ ಸುತ್ತಿನಲ್ಲೇ ನ್ಯೂವ್ಲಿಕಿಟ್​ ಪರಾಭವಗೊಡರು. ಈ ಮೂಲಕ ಚಾಂಪಿಯನ್​ಶಿಪ್ ಅನ್ನು ಅವಿನಾಶ್​ ತನ್ನದಾಗಿಸಿಕೊಂಡರು.

ಥೈಲ್ಯಾಂಡ್​ನ​ ಮಥಾಯ್ ಚಾಂಪಿಯನ್​ಶಿಪ್ ಟ್ರೋಫಿ

ಮನೆಯವರ ತೀವ್ರ ವಿರೋಧದ ನಡುವೆಯೂ ಬಾಕ್ಸಿಂಗ್ ಕಲಿತಿದ್ದ ಅವಿನಾಶ್ ಶೆಟ್ಟಿ ಇದೀಗ ತನ್ನ ಗೆಲುವಿನಿಂದ ಹೆತ್ತವರಿಗಷ್ಟೇ ಅಲ್ಲ ತನ್ನ ಜಿಲ್ಲೆಗೆ ಕೀರ್ತಿ ತಂದಿದ್ದಾರೆ. ಭಾರತೀಯ ಬಾಕ್ಸಿಂಗ್ ತಂಡದ ಜೊತೆ ಸೇರಿ ಇನ್ನಷ್ಟು ಸಾಧನೆಗೈಯ್ಯಬೇಕು ಎಂಬ ಆಸೆಯವನ್ನು ಅವಿನಾಶ್ ಹೊಂದಿದ್ದಾರೆ.

ABOUT THE AUTHOR

...view details