ಕರ್ನಾಟಕ

karnataka

ETV Bharat / sports

Australian Open: ಆಸ್ಟ್ರೇಲಿಯಾ ಓಪನ್ ಫೈನಲ್​ನಲ್ಲಿ ಭಾರತದ ಎಚ್.ಎಸ್.ಪ್ರಣಯ್‌ಗೆ ಸೋಲು

Australian Open 2023: ವಿಶ್ವ ಬ್ಯಾಡ್ಮಿಂಟನ್​ 9ನೇ ಶ್ರೇಯಾಂಕಿತ ಆಟಗಾರ ಎಚ್.ಎಸ್.ಪ್ರಣಯ್ ಅವರು​ ಆಸ್ಟ್ರೇಲಿಯಾ ಓಪನ್​ನಲ್ಲಿ ಚೀನಿ ಆಟಗಾರನ ವಿರುದ್ಧ ಸೋಲುಂಡರು.

Etv Bharat
Etv Bharat

By

Published : Aug 6, 2023, 3:46 PM IST

ಸಿಡ್ನಿ (ಆಸ್ಟ್ರೇಲಿಯಾ):ಭಾರತದ ಷಟ್ಲರ್ ಎಚ್‌.ಎಸ್.ಪ್ರಣಯ್ ಅವರು ಆಸ್ಟ್ರೇಲಿಯಾ ಓಪನ್​​ ಫೈನಲ್ಸ್​ನಲ್ಲಿ ಚೀನಾ ಆಟಗಾರ ವೆಂಗ್ ಹಾಂಗ್ಯಾಂಗ್ ವಿರುದ್ಧ ಕಠಿಣ ಸ್ಪರ್ಧೆ ನೀಡಿ ಸೋಲು ಕಂಡರು. ಪ್ರಸಕ್ತ ವರ್ಷದ ಬಿಡ್ಲ್ಯೂಎಫ್​ನ ವರ್ಲ್ಡ್​ ಟೂರ್​ನಲ್ಲಿ ಉತ್ತಮ ಲಯದಲ್ಲಿರುವ ಭಾರತೀಯ ಆಟಗಾರ ಶ್ರೇಯಾಂಕ ಪಟ್ಟಿಯಲ್ಲಿ 9ನೇ ಸ್ಥಾನ ಪಡೆದಿದ್ದರು. ಆದರೆ ಫೈನಲ್​ನಲ್ಲಿ ಚೀನಾದ 34ನೇ ಶ್ರೇಯಾಂಕಿತ ಆಟಗಾರನೆದುರು 21-9, 23-21 ಮತ್ತು 21-12 ರ ಸೆಟ್‌ಗಳಿಂದ ಪರಾಭವಗೊಂಡರು.

ಮೊದಲ ಸೆಟ್​ನಲ್ಲಿ ಪ್ರಣಯ್​ ವೆಂಗ್ ಹಾಂಗ್ಯಾಂಗ್ ವಿರುದ್ಧ ಅಂಕಕ್ಕಾಗಿ ಪರದಾಡಿದರು. ವೆಂಗ್ ತಮ್ಮ ಚುರುಕಿನ ನಡೆ ಮತ್ತು ಅದ್ಭುತ ಶಾಟ್​​ಗಳಿಂದ ಮೊದಲ ಸೆಟ್​ನಲ್ಲಿ ಮುನ್ನಡೆ ಸಾಧಿಸಿದರು. ಪ್ರಣಯ್​ 9 ಅಂಕ ಪಡೆಯುವಷ್ಟರಲ್ಲಿ ವೆಂಗ್​ 21 ಅಂಕಗಳಿಂದ ಸೆಟ್ ಗೆದ್ದರು.

ಎರಡನೇ ಸೆಟ್​ನಲ್ಲಿ ಪ್ರಣಯ್​ ತಪ್ಪುಗಳನ್ನು ತಿದ್ದಿಕೊಂಡು ವೆಂಗ್​ಗೆ ಫೈಟ್ ಕೊಟ್ಟರು. ಎರಡನೇ ಸೆಟ್​ನಲ್ಲಿ ತೀವ್ರ ಪೈಪೋಟಿಯಿಂದಾಗಿ ಪಂದ್ಯ ರೋಚಕ ದಿಕ್ಕಿನತ್ತ ಸಾಗಿ ಫಲಿತಾಂಶಕ್ಕಾಗಿ ಮೂರನೇ ಸೆಟ್​ ಆಡಿಸುವ ಅವಶ್ಯಕತೆ ಉದ್ಭವಿಸಿತು. ಪ್ರಣಯ್​ ಈ ಬಾರಿ ಸುಲಭವಾಗಿ ಅಂಕಗಳನ್ನು ನೀಡಲಿಲ್ಲ. ಅವರು 19-17 ರ ಮುನ್ನಡೆ ಸಾಧಿಸಿದರು. ಈ ವೇಳೆ ವೆಂಗ್​ 20-20ರ ಸಮಬಲ ಸಾಧಿಸಿದರು. ಇದರಿಂದ 23 ಗೆಲುವಿನ ಅಂಕವಾಯಿತು. ವೆಂಗ್​ 21ನೇ ಅಂಕ ಪಡೆದಾಗ ಪ್ರಣಯ್​​ 23 ಅಂಕ ಪಡೆದು ಎರಡನೇ ಸೆಟ್​ ತಮ್ಮದಾಗಿಸಿಕೊಂಡರು.

ಮೂರನೇ ಸೆಟ್​ನಲ್ಲಿ ಇಬ್ಬರೂ ಇನ್ನಷ್ಟು ಬಲಿಷ್ಠ ಹೋರಾಟ ತೋರಿಸಿದರು. ಆರಂಭಿಕ ಹಂತದಲ್ಲಿ ಸಮಬಲದ ಅಂಕದಿಂದಲೇ ಮುಂದೆ ಸಾಗಿದ ಆಟಗಾರರು ಪ್ರತಿ ಕ್ಷಣದಲ್ಲೂ ಪಂದ್ಯವನ್ನು ಬಿಗಿಗೊಳಿಸುತ್ತಲೇ ಸಾಗಿದರು. ಕೊನೆಯಲ್ಲಿ ಪ್ರಣಯ್​ 18 ಅಂಕ ಪಡೆದಿದ್ದಾಗ ಮಾಡಿದ ಸಣ್ಣ ತಪ್ಪುಗಳ ಲಾಭ ಪಡೆದುಕೊಂಡ ವೆಂಗ್​ 21 ಅಂಕಗಳಿಂದ 3ನೇ ಸೆಟ್​ ವಶಪಡಿಸಿಕೊಂಡು ಆಸ್ಟ್ರೇಲಿಯಾ ಓಪನ್​ ಗೆದ್ದು ಬೀಗಿದರು.

ಸೆಮಿಫೈನಲ್​ನಲ್ಲಿ ಪ್ರಣಯ್​ ಇನ್ನೊಬ್ಬ ದೇಶಿ ಆಟಗಾರ ಪ್ರಿಯಾಂಶು ರಾಜಾವತ್‌ ಅವರನ್ನು 21-18, 21-12 ರಿಂದ ಮಣಿಸಿ ಫೈನಲ್​ಗೇರಿದ್ದರು. 43 ನಿಮಿಷಗಳ ಕಾದಾಟದಲ್ಲಿ ಪ್ರಣಯ್​ ಈ ವರ್ಷದ ಎರಡನೇ ಫೈನಲ್​ ಪ್ರವೇಶಿಸಿದ್ದರು.

ಇದನ್ನೂ ಓದಿ:ಆಸ್ಟ್ರೇಲಿಯನ್​ ಓಪನ್​ನಲ್ಲಿ ಫೈನಲ್​ ಪ್ರವೇಶಿಸಿದ ಪ್ರಣಯ್..​ ಪ್ಯಾರಾ-ಬ್ಯಾಡ್ಮಿಂಟನ್​ನಲ್ಲಿ ಪ್ರಮೋದ್, ಸುಕಾಂತ್ ಸೆಮಿಸ್​ಗೆ

ABOUT THE AUTHOR

...view details