ಕರ್ನಾಟಕ

karnataka

ETV Bharat / sports

Ashes Test: ಇಂಗ್ಲೆಂಡ್​-ಆಸ್ಟ್ರೇಲಿಯಾ 4ನೇ ಟೆಸ್ಟ್‌ಗೆ ಮಳೆ ಅಡ್ಡಿ,​ ಪಂದ್ಯ ಡ್ರಾ; ಆ್ಯಶಸ್ ಕಪ್‌ ತನ್ನಲ್ಲೇ ಉಳಿಸಿಕೊಂಡ ಆಸೀಸ್ - England and Australia

ಇಂಗ್ಲೆಂಡ್​ ಮತ್ತು ಆಸ್ಟ್ರೇಲಿಯಾ ನಡುವಿನ ಆ್ಯಷಸ್​ ಕ್ರಿಕೆಟ್ ಟೆಸ್ಟ್​ ಸರಣಿಯ 4ನೇ ಪಂದ್ಯ ಮಳೆಯಿಂದಾಗಿ ಡ್ರಾದಲ್ಲಿ ಮುಕ್ತಾಯವಾಯಿತು.

australia-retains-ashes-as-rain-ruins-englands-hopes-of-victory-in-4th-test
ಇಂಗ್ಲೆಂಡ್​ vs ಆಸ್ಟ್ರೇಲಿಯಾ.. 4ನೇ ಆ್ಯಷಸ್ ಟೆಸ್ಟ್​ : ಇಂಗ್ಲೆಂಡ್​ ಗೆಲುವಿಗೆ ಮಳೆ ಅಡ್ಡಿ..​ ಪಂದ್ಯ ಡ್ರಾ

By

Published : Jul 24, 2023, 8:14 AM IST

ಮ್ಯಾಂಚೆಸ್ಟರ್​: ಇಂಗ್ಲೆಂಡ್​ ಮತ್ತು ಆಸ್ಟ್ರೇಲಿಯಾ ನಡುವಿನ ಆ್ಯಷಸ್​ ಕ್ರಿಕೆಟ್ ಟೆಸ್ಟ್​ ಸರಣಿಯ ನಾಲ್ಕನೇ ಪಂದ್ಯವು ಮಳೆಯಿಂದಾಗಿ ಡ್ರಾ ಆಗಿದೆ. ಇಲ್ಲಿನ ಓಲ್ಡ್​ ಟ್ರಾಫರ್ಡ್​ನಲ್ಲಿ ನಡೆಯುತ್ತಿದ್ದ ಪಂದ್ಯದಲ್ಲಿ ಇಂಗ್ಲೆಂಡ್​ ಗೆಲುವಿಗೆ 5 ವಿಕೆಟ್​ಗಳ ಅಗತ್ಯವಿತ್ತು. ಆದರೆ ದಿನದಂತ್ಯದ ಪಂದ್ಯದಲ್ಲಿ ಮಳೆಯ ಆಟ ನಡೆದು ಆಸ್ಟ್ರೇಲಿಯಾ 2-1 ರಲ್ಲಿ ಸರಣಿ ಮುನ್ನಡೆ ಸಾಧಿಸಿತು. ಈ ಮೂಲಕ ಪ್ರತಿಷ್ಟಿತ ಆ್ಯಷಸ್ ಕಪ್‌ ಅನ್ನು ತನ್ನಲ್ಲೇ ಉಳಿಸಿಕೊಂಡಿತು.

ಇದಕ್ಕೂ ಮೊದಲು ಟಾಸ್​ ಸೋತು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ, ಮೊದಲ ಇನ್ನಿಂಗ್ಸ್​ನಲ್ಲಿ 317 ರನ್​ ಗಳಿಸಿತ್ತು. ಆಸ್ಟ್ರೇಲಿಯಾ ಪರ ಆರಂಭಿಕ ಆಟಗಾರರಾದ ಡೇವಿಡ್​ ವಾರ್ನರ್​ ಮತ್ತು ಉಸ್ಮಾನ್​ ಖವಾಜ ಅಲ್ಪ ಮೊತ್ತಕ್ಕೆ ಕಟ್ಟುಬಿದ್ದರು. ಡೇವಿಡ್​​ ವಾರ್ನರ್​ 3 ಬೌಂಡರಿಗಳೊಂದಿಗೆ 32 ರನ್​ ಗಳಿಸಿ ಕ್ರಿಸ್​ ವೋಕ್ಸ್​ಗೆ ವಿಕೆಟ್​ ಒಪ್ಪಿಸಿದರೆ, ಉಸ್ಮಾನ್​ ಖವಾಜ ಕೇವಲ 3 ರನ್​ ಗಳಿಸಿ ಸ್ಟುವರ್ಟ್ ಬ್ರಾಡ್​​ ಎಸೆತದಲ್ಲಿ ಎಲ್​ಬಿ ಬಲೆಗೆ ಬಿದ್ದರು. ಬಳಿಕ ಬಂದ ಮಾರ್ನಸ್​​ 51 ರನ್​​ ಗಳಿಸಿ ಮೊಯಿನ್ ಅಲಿ ಎಸೆತದಲ್ಲಿ ಎಲ್​ಬಿ ಆದರು. ಸ್ಟೀವ್​ ಸ್ಮಿತ್​ (41), ಟ್ರಾವಿಸ್​ ಹೆಡ್​ (48), ಮಾರ್ಷ್​ (51) ರನ್​ ಗಳಿಸಿ ತಂಡ ಅಲ್ಪ ಮೊತ್ತಕ್ಕೆ ಕುಸಿಯುವುದನ್ನು ತಡೆದರು.

ಇನ್ನುಳಿದಂತೆ, ಗ್ರೀನ್​ (16), ಅಲೆಕ್ಸ್​ ಕ್ಯಾರಿ (20), ಮಿಚೆಲ್​ ಸ್ಟಾರ್ಕ್​ (36), ಪ್ಯಾಟ್​ ಕಮಿನ್ಸ್​(1), ಹೆಜಲ್​ವುಡ್​ (4) ರನ್​ ಸೇರಿಸಿದರು. ಈ ಮೂಲಕ ಆಸ್ಟ್ರೇಲಿಯಾ 317 ರನ್​ಗೆ ತನ್ನೆಲ್ಲ ವಿಕೆಟ್​ಗಳನ್ನು ಕಳೆದುಕೊಂಡಿತು. ಇಂಗ್ಲೆಂಡ್​ ಪರ ಕ್ರಿಸ್​ ವೋಕ್ಸ್​​ 5 ವಿಕೆಟ್​ ಪಡೆದರೆ, ಸ್ಟುವರ್ಟ್​ ಬ್ರಾಡ್​​ 2 ವಿಕೆಟ್​ ಕಬಳಿಸಿದರು. ಜೇಮ್ಸ್ ಆ್ಯಂಡರ್​ಸನ್​​, ಮಾರ್ಕ್​ ವುಡ್​​​, ಮೋಯಿನ್ ಅಲಿ ತಲಾ 1 ವಿಕೆಟ್​ ಪಡೆದರು.

ನಂತರ ಬ್ಯಾಟಿಂಗ್​ ನಡೆಸಿದ ಇಂಗ್ಲೆಂಡ್​​ ತಂಡವು ಉತ್ತಮ ಆರಂಭ ಪಡೆಯಿತು. ಆರಂಭಿಕ ಆಟಗಾರ ಝಾಕ್​ ಕ್ರಾಲಿ ಅವರ ಅದ್ಭುತ ಬ್ಯಾಟಿಂಗ್​ನಿಂದ ಇಂಗ್ಲೆಂಡ್​ 592 ರನ್ ಪೇರಿಸಿತು. ಕ್ರಾಲಿ 21 ಬೌಂಡರಿ ಮತ್ತು ಹಾಗೂ 3 ಸಿಕ್ಸರ್​ನೊಂದಿಗೆ 189 ರನ್​ ಚಚ್ಚಿದರು. ದ್ವಿಶತಕ ಹೊಸ್ತಿಲಲ್ಲಿ ಇರುವಾಗ ಕ್ಯಾಮರೂನ್​ ಗ್ರೀನ್​ ಅವರ ಬೌಲಿಂಗ್​ ದಾಳಿ ಬೌಲ್ಡ್​ ಆದರು. ಆರಂಭಿಕ ಆಟಗಾರ ಬೆನ್​ ಡಕೆಟ್​​ 1 ರನ್​ ಗಳಿಸಿ ಮಿಚೆಲ್​ ಸ್ಟಾರ್ಕ್​ಗೆ ವಿಕೆಟ್​ ಒಪ್ಪಿಸಿದರು. ಬಳಿಕ ಬಂದ ಮೊಯಿನ್​ ಅಲಿ 7 ಬೌಂಡರಿಗಳೊಂದಿಗೆ 54 ರನ್​, ಜೋ ರೂಟ್​​ (84), ಹ್ಯಾರಿ ಬ್ರೂಕ್​ (61), ಬೆನ್​ ಸ್ಟೋಕ್ಸ್​(51), ಜಾನಿ ಬೇಸ್ಟೋ (99) ಅವರ ಅದ್ಭುತ ಶತಕ ವಂಚಿತ ಆಟದಿಂದ ಇಂಗ್ಲೆಂಡ್​ 592 ರನ್​ ಗಳಿಸಿತು. ಆಸ್ಟ್ರೇಲಿಯಾ ಪರ ಜೋಸ್​ ಹೆಜಲ್​ವುಡ್​ 5 ವಿಕೆಟ್​ ಪಡೆದರೆ, ಸ್ಟಾರ್ಕ್​ ಮತ್ತು ಗ್ರೀನ್​ ತಲಾ 2 ವಿಕೆಟ್​ ಪಡೆದರು. ಪ್ಯಾಟ್​ ಕಮಿನ್ಸ್​​​ 1 ವಿಕೆಟ್ ಕಿತ್ತರು.

ಎರಡನೇ ಇನ್ನಿಂಗ್ಸ್​ನಲ್ಲಿ ಆಸ್ಟ್ರೇಲಿಯಾ ಬ್ಯಾಟಿಂಗ್​ ಮುಂದುವರೆಸಿ ಮತ್ತೆ ಆರಂಭಿಕ ವೈಫಲ್ಯವನ್ನು ಅನುಭವಿಸಿತು. ಉಸ್ಮಾನ್​ ಖವಾಜ 18 ರನ್​ ಗಳಿಸಿ ಮಾರ್ಕ್ ವುಡ್​ಗೆ ವಿಕೆಟ್​ ಒಪ್ಪಿಸಿದರೆ, ಡೇವಿಡ್​ ವಾರ್ನರ್​ 28 ರನ್​ ಗಳಿಸಿ ಕ್ರಿಸ್​ ವೋಕ್ಸ್​​ ಎಸೆತದಲ್ಲಿ ಬೌಲ್ಡಾದರು. ನಂತರ ಬಂದ ಮಾರ್ನಸ್​​ ಭರ್ಜರಿ ಶತಕದಾಟ ಆಡಿದರು. 10 ಬೌಂಡರಿ ಹಾಗೂ 2 ಸಿಕ್ಸರ್​ ಮೂಲಕ 111 ರನ್​ ಗಳಿಸಿದ ಮಾರ್ನಸ್​ ಜೋ ರೂಟ್​ ಎಸೆತದಲ್ಲಿ ಬೇಸ್ಟೋಗೆ ಕ್ಯಾಚಿತ್ತರು. ನಂತರದಲ್ಲಿ ಸ್ಟೀವ್ ಸ್ಮಿತ್​(17), ಟ್ರಾವಿಸ್​ ಹೆಡ್​ (1) ಗಳಿಸಿ ಪೆವಿಲಿಯನ್​ ಪರೇಡ್​ ನಡೆಸಿದರು. ಮಿಶೆಲ್​ ಮಾರ್ಶ್ (31) ಮತ್ತು ಕ್ಯಾಮರೂನ್​ ಗ್ರೀನ್​ ಆಟ ಮುಂದುವರೆಸಿದಾಗ ಮಳೆ ಸುರಿಯಿತು. ಈ ವೇಳೆ ಆಸ್ಟ್ರೇಲಿಯಾ 214ಕ್ಕೆ 5 ವಿಕೆಟ್​ಗಳನ್ನು ಕಳೆದುಕೊಂಡಿತ್ತು. ಇಂಗ್ಲೆಂಡ್​ ಪರ ಮಾರ್ಕ್​ ವುಡ್​​ 3 ವಿಕೆಟ್​ ಪಡೆದರೆ, ಕ್ರಿಸ್​ ವೋಕ್ಸ್​, ಜೋ ರೂಟ್​ ತಲಾ 1 ವಿಕೆಟ್​ ಗಿಟ್ಟಿಸಿಕೊಂಡರು. ಇಂಗ್ಲೆಂಡ್​ 65 ರನ್​ ಮುನ್ನಡೆ ಸಾಧಿಸಿತ್ತು. ಆದರೆ ಮಳೆಯಿಂದಾಗಿ ಇಂಗ್ಲೆಂಡ್​ ಲೆಕ್ಕಾಚಾರ ತಲೆಕೆಳಗಾಗಿ, ಪಂದ್ಯ ಡ್ರಾದಲ್ಲಿ ಮುಕ್ತಾಯ ಕಂಡಿತು.

ಇದನ್ನೂ ಓದಿ :ಉದಯೋನ್ಮುಖ ಏಷ್ಯಾಕಪ್ ಫೈನಲ್: ಮುಗ್ಗರಿಸಿದ ಭಾರತ.. ಚಾಂಪಿಯನ್​ಯಾದ ಪಾಕ್

ABOUT THE AUTHOR

...view details