ಕರ್ನಾಟಕ

karnataka

ETV Bharat / sports

Australia Open: ಎರಡನೇ ಸುತ್ತಿಗೆ ಪ್ರವೇಶಿಸಿದ ಪಿವಿ ಸಿಂಧು, ಶ್ರೀಕಾಂತ್, ಪ್ರಣಯ್​​ - ETV Bharath Kannada news

ವಿಶ್ವ ಚಾಂಪಿಯನ್‌ಶಿಪ್‌ಗಳ ಕಂಚಿನ ಪದಕ ವಿಜೇತ ಲಕ್ಷ್ಯ ಸೇನ್ ಆಸ್ಟ್ರೇಲಿಯನ್​ ಓಪನ್​ನಲ್ಲಿ ಗಾಯದ ಕಾರಣ ಮೊದಲ ಸುತ್ತಿನಿಂದ ಹೊರಬಂದಿದ್ದಾರೆ.

Australia Open
ಪ್ರಣಯ್​​ , ಪಿವಿ ಸಿಂಧು,

By

Published : Aug 2, 2023, 9:06 PM IST

ಸಿಡ್ನಿ (ಆಸ್ಟ್ರೇಲಿಯಾ):ಇಲ್ಲಿನ ಸ್ಟೇಟ್ ಸ್ಪೋರ್ಟ್ಸ್ ಸೆಂಟರ್‌ನಲ್ಲಿ ಬುಧವಾರ ನಡೆದ ತನ್ನ ಮಹಿಳಾ ಸಿಂಗಲ್ಸ್ ಪಂದ್ಯದಲ್ಲಿ ಭಾರತದ ಬ್ಯಾಡ್ಮಿಂಟನ್ ಪಟು ಪಿವಿ ಸಿಂಧು ಗೆಲುವು ದಾಖಲಿಸುವ ಮೂಲಕ ಆಸ್ಟ್ರೇಲಿಯಾ ಓಪನ್‌ನ ಎರಡನೇ ಸುತ್ತಿಗೆ ಪ್ರವೇಶಿಸಿದ್ದಾರೆ. ಈ ವರ್ಷ ಫಾರ್ಮ್‌ಗಾಗಿ ಪರದಾಡುತ್ತಿರುವ ಸಿಂಧು 21-18, 21-13 ರಲ್ಲಿ ದೇಶದವರೇ ಆದ ಅಶ್ಮಿತಾ ಚಲಿಹಾ ಅವರನ್ನು ಸೋಲಿಸಿ 16 ರ ಸುತ್ತಿಗೆ ತಲುಪಿದರು. ಅವರು ಮಲೇಷ್ಯಾದ ವಿಶ್ವದ 34ನೇ ಶ್ರೇಯಾಂಕಿತೆ ಗೊಹ್ ಜಿನ್ ವೀ ವಿರುದ್ಧ 21-15, 21-17 ಅಂತರದಲ್ಲಿ ಗೆದ್ದು ಎರಡನೇ ಸುತ್ತಿಗೆ ಪ್ರವೇಶಿಸಿದ ಮತ್ತೊಬ್ಬ ದೇಶೀಯ ಆಟಗಾರ್ತಿ ಆಕರ್ಷಿ ಕಶ್ಯಪ್ ಅವರನ್ನು ಎದುರಿಸಲಿದ್ದಾರೆ.

ಪುರುಷರ ಸಿಂಗಲ್ಸ್‌ನಲ್ಲಿ ಶ್ರೀಕಾಂತ್ 21-18, 21-7ರಲ್ಲಿ ವಿಶ್ವದ 14ನೇ ಶ್ರೇಯಾಂಕದ ಜಪಾನ್‌ನ ಷಟ್ಲರ್ ಕೆಂಟಾ ನಿಶಿಮೊಟೊ ಅವರನ್ನು ಸೋಲಿಸಿದರು. ಗುರುವಾರ ನಡೆಯಲಿರುವ ಎರಡನೇ ಸುತ್ತಿನಲ್ಲಿ ಅವರು ಚೈನೀಸ್ ತೈಪೆಯ ಸು ಲಿ ಯಾಂಗ್ ವಿರುದ್ಧ ಆಡಲಿದ್ದಾರೆ. ಭಾರತದ ಅತ್ಯುನ್ನತ ಶ್ರೇಯಾಂಕದ ಸಿಂಗಲ್ಸ್ ಷಟ್ಲರ್ ಪ್ರಣಯ್ ಅವರು ಹಾಂಕಾಂಗ್‌ನ ವಿಶ್ವದ ನಂ. 15 ರ ಲೀ ಚೆಯುಕ್ ಯಿಯು ಅವರ ಸವಾಲನ್ನು ಎದುರಿಸಿ 21-18, 16-21, 21-15 ಅಂತರದಲ್ಲಿ ಗೆದಿದ್ದಾರೆ. ವಿಶ್ವ 9ನೇ ಶ್ರೇಯಾಂಕದ ಆಟಗಾರ ಪ್ರಣಯ್​​ ಮುಂದಿನ ಪಂದ್ಯದಲ್ಲಿ ಚೈನೀಸ್ ತೈಪೆಯ ಚಿ ಯು ಜೆನ್ ವಿರುದ್ಧ ಸೆಣಸಲಿದ್ದಾರೆ.

ಏತನ್ಮಧ್ಯೆ, 2021 ರ ವಿಶ್ವ ಚಾಂಪಿಯನ್‌ಶಿಪ್‌ಗಳ ಕಂಚಿನ ಪದಕ ವಿಜೇತ ಲಕ್ಷ್ಯ ಸೇನ್ ದೇಶದ ಆಟಗಾರ ಕಿರಣ್ ಜಾರ್ಜ್ ವಿರುದ್ಧದ ಮೊದಲ ಸುತ್ತಿನ ಪಂದ್ಯಕ್ಕೆ ಮಧ್ಯದಲ್ಲಿ ನಿವೃತ್ತರಾದರು. ಮಿಥುನ್ ಮಂಜುನಾಥ್ ಅವರು ಮಾಜಿ ವಿಶ್ವ ಚಾಂಪಿಯನ್ ಸಿಂಗಾಪುರದ ಲೋಹ್ ಕೀನ್ ಯೂ ವಿರುದ್ಧ 21-19, 21-19 ನೇರ ಗೇಮ್‌ಗಳಿಂದ ಗೆದ್ದರು. ಪ್ರಿಯಾಂಶು ರಾಜಾವತ್ ಅವರು ಸ್ಥಳೀಯ ಶಟ್ಲರ್ ನಾಥನ್ ಟ್ಯಾಂಗ್ ಅವರನ್ನು 33 ನಿಮಿಷಗಳಲ್ಲಿ 21-12, 21-16 ಸೆಟ್‌ಗಳಿಂದ ಸೋಲಿಸಿ ಎರಡನೇ ಸುತ್ತಿಗೆ ಪ್ರವೇಶಿಸಿದ್ದು, ಅಲ್ಲಿ ಚೈನೀಸ್ ತೈಪೆಯ ವಾಂಗ್ ತ್ಸು ವೀ ವಿರುದ್ಧ ಸೆಣಸಲಿದ್ದಾರೆ.

ಬಿಎಸ್ ರೆಡ್ಡಿ ಮತ್ತು ಅಶ್ವಿನಿ ಪೊನ್ನಪ್ಪ ಮತ್ತು ರೋಹನ್ ಕಪೂರ್ ಮತ್ತು ಎನ್ ಸಿಕ್ಕಿ ರೆಡ್ಡಿ ತಮ್ಮ ಆರಂಭಿಕ ಸುತ್ತಿನ ಪಂದ್ಯಗಳಲ್ಲಿ ಸೋಲನುಭವಿಸಿದ್ದರಿಂದ ಮಿಶ್ರ ಡಬಲ್ಸ್‌ನಲ್ಲಿ ಭಾರತದ ಸವಾಲು ಕೊನೆಗೊಂಡಿದೆ. ರೆಡ್ಡಿ ಮತ್ತು ಅಶ್ವಿನಿ ಜಪಾನಿನ ಜೋಡಿಯಾದ ಹಿರೋಕಿ ಮಿಡೊರಿಕಾವಾ ಮತ್ತು ನಟ್ಸು ಸೈಟೊ ವಿರುದ್ಧ 13-21, 12-21 ರಿಂದ ಸೋತರೆ, ರೋಹನ್ ಮತ್ತು ಸಿಕ್ಕಿ ಅವರನ್ನು ಕೊರಿಯಾದ ಸಿಯೊ ಸೆಯುಂಗ್ಜೆ ಮತ್ತು ಚೇ ಯುಜುಂಗ್ 14-21, 18-21 ರಿಂದ ಸೋಲಿಸಿದರು.

ಇದನ್ನೂ ಓದಿ:BWF ranking: ಬಿಡಬ್ಲ್ಯೂಎಫ್ ವಿಶ್ವ ಶ್ರೇಯಾಂಕದಲ್ಲಿ ಉತ್ತಮ ಏರಿಕೆ ಕಂಡ ಎಚ್‌ಎಸ್ ಪ್ರಣಯ್, ಲಕ್ಷ್ಯ ಸೇನ್

ABOUT THE AUTHOR

...view details