ನವದೆಹಲಿ: ಫ್ರೆಂಚ್ ಓಪನ್ ಗೆದ್ದ ನೊವಾಕ್ ಜೊಕೊವಿಚ್ ಅತಿ ಹೆಚ್ಚು ಗ್ರ್ಯಾಂಡ್ ಸ್ಲಾಮ್ಗಳನ್ನು ಗೆದ್ದ ಆಟಗಾರ ಎಂಬ ಕೀರ್ತಿಗೆ ಭಾಜನರಾದರು. ಅಲ್ಲದೇ ಎಟಿಪಿ ನೀಡುವ ಶ್ರೇಯಾಂಕದಲ್ಲಿ ಅಗ್ರಸ್ಥಾನವನ್ನು ಅಲಂಕರಿಸಿದ್ದಾರೆ. ಮೂರನೇ ಫ್ರೆಂಚ್ ಓಪನ್ ಗೆದ್ದು ಒಟ್ಟಾರೆ 23ನೇ ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರು. ಈ ಮೂಲಕ ರಾಫೆಲ್ ನಡಾಲ್ ಅವರ ದಾಖಲೆಯನ್ನು ಹಿಂದಿಕ್ಕಿದ್ದಾರೆ.
ಈ ಹಿಂದೆ 388 ವಾರಗಳ ಕಾಲ ಎಟಿಪಿ ಅಗ್ರಸ್ಥಾನವನ್ನು ಕಾಯ್ದುಕೊಂಡಿದ್ದ ಜೊಕೊವಿಚ್ ಮತ್ತೆ ಕಾರ್ಲೋಸ್ ಅಲ್ಕರಾಜ್ ಅವರನ್ನು ಹಿಮ್ಮೆಟ್ಟಿಸಿ ನಂಬರ್ 1 ಪಟ್ಟವನ್ನು ಅಲಂಕರಿಸಿದ್ದಾರೆ. ಜೊಕೊವಿಚ್ ರೊಲ್ಯಾಂಡ್ ಗ್ಯಾರೋಸ್ ನಡೆದ ಸೆಮಿಫೈನಲ್‌ನಲ್ಲಿ ಅಗ್ರಸ್ಥಾನಿಯನಾಗಿದ್ದ ಕಾರ್ಲೋಸ್ ಅಲ್ಕರಾಜ್ ಅವರನ್ನು ಸೋಲಿಸಿ ಫೈನಲ್ ಪ್ರವೇಶ ಪಡೆದುಕೊಂಡಿದ್ದರು. 7595 ಅಂಕಗಳನ್ನು ಹೊಂದಿರುವ ನೊವಾಕ್ ಎರಡನೇ ಸ್ಥಾನದಲ್ಲಿರುವ ಕಾರ್ಲೋಸ್ ಅಲ್ಕರಾಜ್ (7,175) ಕ್ಕಿಂತ 420 ಅಂಕಗಳ ಮುನ್ನಡೆಯನ್ನು ಪಡೆದುಕೊಂಡಿದ್ದಾರೆ.
ಸೆಮಿಫೈನಲ್‌ನಲ್ಲಿ ಅಲ್ಕರಾಜ್ ನೊವಾಕ್ ಅವರನ್ನು ಮಣಿಸಿದ್ದರೆ ಅಗ್ರ ಶೇಯಾಂಕದಲ್ಲೇ ಮುಂದುವರೆಯ ಬಹುದಿತ್ತು. ಆದರೆ ಸೆಮಿಸ್ನಲ್ಲಿ ನೊವಾಕ್ ಕೇವಲ ಒಂದು ಸೆಟ್ನಲ್ಲಿ ಮಾತ್ರ ಸೋಲನುಭವಿಸಿದರು. ನೊವಾಕ್ ಎದುರು ಅಲ್ಕರಾಜ್ 3-6, 7-5, 1-6,1-6 ರ ಸೆಟ್ನಿಂದ ಸೋಲನುಭವಿಸಿದರು ಇದರಿಂದ ಕೆಂಪು ಮಣ್ಣಿನ ಮೈದಾನದಲ್ಲಿ ಫೈನಲ್ ಅವಕಾಶವನ್ನು ಕಳೆದುಕೊಂಡರು.
ಇದನ್ನೂ ಓದಿ:French Open 2023: ಕಾರ್ಲೋಸ್ ಮಣಿಸಿ ಫೈನಲ್‌ಗೆ ಲಗ್ಗೆಯಿಟ್ಟ ನೊವಾಕ್ ಜೊಕೊವಿಕ್