ಮೆಲ್ಬೋರ್ನ್: 20 ಗ್ರ್ಯಾಂಡ್ ಸ್ಲಾಮ್ ಚಾಂಪಿಯನ್ ರೋಜರ್ ಫೆಡರರ್ ಎಟಿಪಿ ಶ್ರೇಯಾಂಕ ಪಟ್ಟಿಯಲ್ಲಿ 21 ವರ್ಷಗಳಲ್ಲಿ ಅತ್ಯಂತ ಕಡಿಮೆ ಶ್ರೇಯಾಂಕಕ್ಕೆ ಕುಸಿದಿದ್ದಾರೆ. ಆದರೆ ಆಸ್ಟ್ರೇಲಿಯನ್ ಓಪನ್ ಆಡದಿದ್ದರೂ ಸಹಾ ಸರ್ಬಿಯನ್ ಸ್ಟಾರ್ ಜೊಕೊವಿಕ್ ಅಗ್ರಸ್ಥಾನ ದಲ್ಲಿ ಮುಂದುವರಿದಿದ್ದಾರೆ.
ವರ್ಷದ ಮೊದಲ ಗ್ರ್ಯಾಂಡ್ಸ್ಲಾಮ್ ತಪ್ಪಿಸಿಕೊಂಡಿರುವ 40ವರ್ಷದ ಸ್ವಿಸ್ ತಾರೆ ಸೋಮವಾರ ಬಿಡುಗಡೆಯಾಗಿರುವ ನೂತನ ಎಟಿಪಿ ಶ್ರೇಯಾಂಕ ಪಟ್ಟಿಯಲ್ಲಿ 13 ಸ್ಥಾನ ಕುಸಿದು 1665 ಅಂಕಗಳೊಂದಿಗೆ 30ನೇ ಸ್ಥಾನ ಪಡೆದುಕೊಂಡಿದ್ದಾರೆ.
ಭಾನುವಾರ 2022ರ ಆಸ್ಟ್ರೇಲಿಯನ್ ಓಪನ್ ಚಾಂಪಿಯನ್ ಆಗಿವ ಮೂಲಕ 21 ಗ್ರ್ಯಾಂಡ್ ಸ್ಲಾಮ್ ಗೆದ್ದ ವಿಶ್ವದಾಖಲೆಗೆ ಪಾತ್ರರಾಗಿರುವ ಸ್ಪೇನ್ನ ರಾಫೆಲ್ ನಡಾಲ್ 5ನೇ ಶ್ರೇಯಾಂಕದಲ್ಲಿ ಮುಂದುವರಿದಿದ್ದಾರೆ.
ಮೊದಲ ಬಾರಿಗೆ ಆಸ್ಟ್ರೇಲಿಯನ್ ಓಪನ್ನಲ್ಲಿ ಸೆಮಿಫೈನಲ್ ಪ್ರವೇಶಿಸಿದ ಇಟಲಿಯ ಮ್ಯಾಟಿಯೋ ಬೆರಿಟ್ಟಿನಿ ಅಗ್ರ 10ರೊಳಗೆ ಏರಿಕೆ ಕಂಡಿರುವ ಏಕೈಕ ಆಟಗಾರನಾಗಿದ್ದಾರೆ, ಅವರು ರಷ್ಯಾದ ಆ್ಯಂಡ್ರೆ ರುಬ್ಲೆವ್ರನ್ನು ಹಿಂದಿಕ್ಕಿ 6ನೇ ಸ್ಥಾನ ಪಡೆದುಕೊಂಡಿದ್ದಾರೆ.