ನವದೆಹಲಿ:ಇಂದಿರಾ ಗಾಂಧಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಏಷ್ಯನ್ ಕುಸ್ತಿ ಚಾಂಪಿಯನ್ಶಿಪ್ನಲ್ಲಿ ಭಾರತದ ದಿವ್ಯಾ ಕರನ್, ಪಿಂಕಿ ಹಾಗೂ ಸರಿತಾ ಮೊರೆ ಬಂಗಾರದ ಪದಕಕ್ಕೆ ಮುತ್ತಿಕ್ಕಿದ್ದಾರೆ.
ಏಷ್ಯನ್ ಕುಸ್ತಿ ಚಾಂಪಿಯನ್ಶಿಪ್: ಬಂಗಾರದ ಪದಕಕ್ಕೆ ಮುತ್ತಿಕ್ಕಿದ ದಿವ್ಯಾ, ಪಿಂಕಿ- ಸರಿತಾ! - ದಿವ್ಯಾ ಕರನ್ ಬಂಗಾರದ ಪದಕ
ಏಷ್ಯನ್ ಕುಸ್ತಿ ಚಾಂಪಿಯನ್ಶಿಪ್ನಲ್ಲಿ ಭಾರತದ ದಿವ್ಯಾ ಕರನ್ ಬಂಗಾರದ ಪದಕಕ್ಕೆ ಮುತ್ತಿಕ್ಕಿದ್ದು, ಈ ಮೂಲಕ ಏಷ್ಯನ್ ಕುಸ್ತಿ ಚಾಂಪಿಯನ್ಶಿಪ್ನಲ್ಲಿ ಬಂಗಾರದ ಪದಕ ಗೆದ್ದ ಎರಡನೇ ಭಾರತೀಯ ಮಹಿಳೆ ಎಂಬ ದಾಖಲೆ ನಿರ್ಮಿಸಿದ್ದಾರೆ.
68 ಕೆ.ಜಿ ವಿಭಾಗದಲ್ಲಿ ಬಂಗಾರದ ಪದಕಕ್ಕೆ ಮುತ್ತಿಕ್ಕಿದ ಎರಡನೇ ಭಾರತೀಯ ಮಹಿಳೆ ಎಂಬ ಪಾತ್ರಕ್ಕೂ ದಿವ್ಯಾ ಕರನ್ ಭಾಜನರಾಗಿದ್ದಾರೆ. ಈ ಹಿಂದೆ ಇದೇ ವಿಭಾಗದಲ್ಲಿ ನವಜೋತ್ ಕೌರ್ ಚಿನ್ನದ ಪದಕಕ್ಕೆ ಮುತ್ತಿಕ್ಕಿದ್ದರು.
ಇಂದಿನ ಫೈನಲ್ ಪಂದ್ಯದಲ್ಲಿ ಉಜ್ಬೇಕಿಸ್ತಾನದ ಆಟಗಾರ್ತಿ ಎದುರು 4-0 ಅಂತರದಲ್ಲಿ ಗೆಲುವು ದಾಖಲು ಮಾಡಿದರು. ಇನ್ನು 55 ಕೆಜಿ ವಿಭಾಗದಲ್ಲಿ ಪಿಂಕಿ ಮಂಗೋಲಿಯಾ ಆಟಗಾರ್ತಿ ವಿರುದ್ಧ 2-1 ಗೆಲುವು ದಾಖಲು ಮಾಡಿದ್ರೆ, 59 ಕೆಜಿ ವಿಭಾಗದಲ್ಲಿ ಸರಿತಾ ಮಂಗೋಲಿಯಾ ಆಟಗಾರ್ತಿ ಮೇಲೆ ಸವಾರಿ ಮಾಡಿ 3-2 ಅಂತರದಿಂದ ಗೆಲುವು ಸಾಧಿಸಿದರು. ಈ ನಡುವೆ ಮಧ್ಯೆ 50 ಕೆಜಿ ವಿಭಾಗದ ಸ್ಪರ್ಧೆಯಲ್ಲಿ ಭಾರತೀಯ ಕುಸ್ತಿಪಟು ನಿರ್ಮಾಣ ಬೆಳ್ಳಿ ಪದಕಕ್ಕೆ ಮುತ್ತಿಕ್ಕಿದರು.