ಉಲಾನ್‌ಬಾತರ್(ಮಂಗೋಲಿಯಾ):ಭಾರತದ ದೀಪಕ್ ಪೂನಿಯಾ ಏಷ್ಯನ್ ಕುಸ್ತಿ ಚಾಂಪಿಯನ್‌ಷಿಪ್‌ನ 86 ಕೆಜಿ ಪುರುಷ ಫ್ರೀಸ್ಟೈಲ್ ಫೈನಲ್ನಲ್ಲಿ ಕಜಕಸ್ತಾನದ ಅಜ್ಮತ್ ದೌಲತ್‌ಬೆಕೊವ್ ವಿರುದ್ಧ ಸೋಲು ಕಾಣುವ ಮೂಲಕ ಬೆಳ್ಳಿ ಪದಕಕ್ಕೆ ತೃಪ್ತಿ ಪಡೆದುಕೊಂಡಿದ್ದಾರೆ.
ಭಾನುವಾರ ನಡೆದ ಫೈನಲ್ ಬೌಟ್‌ನಲ್ಲಿ ಅಜ್ಮತ್ ವಿರುದ್ಧ ದೀಪಕ್ 1-6ರಲ್ಲಿ ಸೋಲು ಕಂಡರು. ಫೈನಲ್ವರೆಗೆ ಎದುರಾಳಿಗೆ ಒಂದೂ ಪಾಯಿಂಟ್ಸ್ ಬಿಟ್ಟುಕೊಡದೇ ದೀಪಕ್ ಚಿನ್ನದ ಪದಕದ ಸುತ್ತಿನಲ್ಲಿ ಮಂಕಾದರು.
ಇದಕ್ಕೂ ಮೊದಲು ದೀಪಕ್ ಕ್ವಾರ್ಟರ್ ಫೈನಲ್ನಲ್ಲಿ 6-0ಯಿಂದ ಇರಾನ್‌ನ ಮೊಹಸೆನ್ ಮೀರ್‌ಯೂಸುಫ್ ಮತ್ತು ಸೆಮಿಫೈನಲ್ನಲ್ಲಿ 5-0ಯಿಂದ ಕೊರಿಯಾದ ಗ್ವಾನುಕ್ ಕಿಮ್ ಅವರನ್ನು ಮಣಿಸಿ ಮಾಡಿ ಅಂತಿಮ ಸುತ್ತಿಗೆ ಪ್ರವೇಶಿಸಿದ್ದರು.
ಏಷ್ಯನ್ ಚಾಂಪಿಯನ್‌ಷಿಪ್‌ನಲ್ಲಿ ದೀಪಕ್ಗೆ ಇದು ಸತತ ಎರಡನೆ ಬೆಳ್ಳಿ ಪದಕ ಮತ್ತು ಒಟ್ಟಾರೆ 4 ಪದಕವಾಗಿದೆ. ಕಳೆದ ಆವೃತ್ತಿಯಲ್ಲಿ ಬೆಳ್ಳಿ ಗೆದ್ದರೆ, 2019 ಮತ್ತು 2020ರಲ್ಲಿ ಕಂಚಿನ ಪದಕಕ್ಕೆ ಕೊರಳೊಡ್ಡಿದ್ದರು.