ಜಿಂಜು (ದಕ್ಷಿಣ ಕೊರಿಯಾ): ಭಾರತದ ವೇಟ್‌ಲಿಫ್ಟರ್ ಜೆರೆಮಿ ಲಾಲ್ರಿನ್ನುಂಗಾ ಅವರು ಭಾನುವಾರ ಇಲ್ಲಿ ನಡೆದ ಏಷ್ಯನ್ ವೇಟ್‌ಲಿಫ್ಟಿಂಗ್ ಚಾಂಪಿಯನ್‌ಶಿಪ್‌ನ 67 ಕೆಜಿ ವಿಭಾಗದಲ್ಲಿ ಪುರುಷರ ಸ್ನಾಚ್‌ನಲ್ಲಿ ಬೆಳ್ಳಿ ಪದಕ ಗೆದ್ದರು. ಆದರೆ ಕ್ಲೀನ್ ಮತ್ತು ಜರ್ಕ್‌ನಲ್ಲಿ ಒಟ್ಟು ಮೂರು ಪ್ರಯತ್ನಗಳಲ್ಲಿ ವಿಫಲರಾದರು. ಕಾಮನ್ವೆಲ್ತ್ ಗೇಮ್ಸ್ 2022 ರ ಚಾಂಪಿಯನ್ ಜೆರೆಮಿ ತನ್ನ ಮೊದಲ 135 ಕೆಜಿ ಸ್ನ್ಯಾಚ್ ಪ್ರಯತ್ನದಲ್ಲಿ ವಿಫಲರಾದರು. ಆದರೆ ತನ್ನ ಎರಡನೇ ಪ್ರಯತ್ನದಲ್ಲಿ ಯಶಸ್ವಿಯಾದರು. ನಂತರ ಅವರು ತಮ್ಮ ಮೂರನೇ ಪ್ರಯತ್ನದಲ್ಲಿ 141 ಕೆಜಿಗೆ ಸಮನಾಗಿ ವೈಯಕ್ತಿಕ ಶ್ರೇಷ್ಠ ವೇಟ್‌ಲಿಫ್ಟ್ ಮಾಡಿದರು.
ಭಾರತದ ವೇಟ್‌ಲಿಫ್ಟರ್‌ಗಿಂತ ಚೀನಾದ ಹಿ ಯುಯೆಜಿ 147 ಕೆಜಿ ವೇಟ್‌ಲಿಫ್ಟ್ ಮಾಡಿ ಚಿನ್ನ ಗೆದ್ದರು. ಕ್ಲೀನ್ ಮತ್ತು ಜರ್ಕ್‌ನಲ್ಲಿ 2018 ರ ಯೂತ್ ಒಲಿಂಪಿಕ್ಸ್ ಚಾಂಪಿಯನ್ ಜೆರೆಮಿ 165 ಕೆಜಿಯಲ್ಲಿ ತನ್ನ ಮೊದಲ ಎರಡು ಪ್ರಯತ್ನಗಳಲ್ಲಿ ವಿಫಲರಾದರು. ಅಂತಿಮ ಪ್ರಯತ್ನದಲ್ಲಿ 168 ಕೆಜಿ ಲಿಫ್ಟ್ಗೆ ಪ್ರಯತ್ನಿಸಿದರು. ಆದರೆ ಎಡವಿದರು ಹೀಗಾಗಿ ಈ ವಿಭಾಗದಲ್ಲಿ ಅವರಿಗೆ ಪ್ರಶಸ್ತಿ ಸಿಗಲಿಲ್ಲ. ಅವರ ಮೂರನೇ ಪ್ರಯತ್ನ ಈ ಮೊದಲ ಗೆಲುವಿನ ತೂಕಕ್ಕಿಂತ 1 ಕೆಜಿ ಹೆಚ್ಚಾಗಿತ್ತು. ಆದರೆ ಪ್ರಯತ್ನದಲ್ಲಿ ಸೋಲು ಕಂಡರು.
ಕ್ಲೀನ್ ಮತ್ತು ಜರ್ಕ್‌ನಲ್ಲಿ ಜೆರೆಮಿ ಲಾಲ್ರಿನ್ನುಂಗಾ ಅವರು ಮೂರು ಪ್ರಯತ್ನದಲ್ಲಿ ವಿಫಲವಾದ ಕಾರಣ ಒಟ್ಟು ಅಂಕವಿಲ್ಲದ ಕಾರಣ ಏಷ್ಯನ್ ಕೂಟದಿಂದ ಅವರು ಹೊರಬಂದಿದ್ದಾರೆ. ಇದರಿಂದಾಗಿ ಒಟ್ಟು ವಿಭಾಗದಲ್ಲಿ ಶ್ರೇಯಾಂಕ ಪಡೆಯಲು ವಿಫಲರಾದರು ಎಂದು ವರದಿಯಾಗಿದೆ. ಕಳೆದ ಆಗಸ್ಟ್‌ನಲ್ಲಿ ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆದ ಕಾಮನ್‌ವೆಲ್ತ್ ಗೇಮ್ಸ್ 2022 ರಲ್ಲಿ ಚಿನ್ನದ ಪದಕ ವಿಜೇತ ಪ್ರದರ್ಶನದ ಸಂದರ್ಭದಲ್ಲಿ ಬೆನ್ನು ಮತ್ತು ತೊಡೆಯ ಗಾಯಗಳಿಂದ ಚೇತರಿಸಿಕೊಂಡ ನಂತರ ಲಾಲ್ರಿನ್ನುಂಗ ಅವರ ಮೊದಲ ಸ್ಪರ್ಧೆ ಇದಾಗಿದೆ.